MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಆದ್ರೆ ಭಾರತದ ಸಪೋರ್ಟ್‌ ಬೇಕು

ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಆದ್ರೆ ಭಾರತದ ಸಪೋರ್ಟ್‌ ಬೇಕು

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ನಿರಾಶಾದಾಯಕ ಆರಂಭ ಪಡೆದಿದ್ದು, ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹೀಗಂದ ಮಾತ್ರಕ್ಕೆ ಪಾಕಿಸ್ತಾನ ತಂಡದ ಸೂಪರ್ 8 ಬಾಗಿಲು ಅಧಿಕೃತವಾಗಿ ಬಂದ್ ಆಗಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಪಾಕಿಸ್ತಾನಕ್ಕೆ ಈಗಲೂ ಸೂಪರ್‌ 8 ಹಂತಕ್ಕೇರುವ ಅವಕಾಶ ಇದೆ. ಅದು ಹೇಗೆ ಅನ್ನೋದನ್ನು ನೋಡೋಣ ಬನ್ನಿ. 

2 Min read
Author : Naveen Kodase
| Updated : Jun 11 2024, 09:31 AM IST
Share this Photo Gallery
  • FB
  • TW
  • Linkdin
  • Whatsapp
110

2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲಿಸ್ಟ್ ಪಾಕಿಸ್ತಾನ ತಂಡವು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಬಾಬರ್ ಅಜಂ ಪಡೆ, ಮೈದಾನದಲ್ಲಿ ಲಯ ಕಳೆದುಕೊಂಡಿದೆ.

210

ಪಾಕಿಸ್ತಾನ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ತಂಡದೆದುರು ಮುಗ್ಗರಿಸಿ ಮುಖಭಂಗ ಅನುಭವಿಸಿತ್ತು. ಇದಾದ ಬಳಿಕ ಭಾನುವಾರ ಸಾಂಪ್ರದಾಯಿಕ ಎದುರಾಳಿ ಭಾರತ ಎದುರು 6 ರನ್ ರೋಚಕ ಸೋಲು ಅನುಭವಿಸಿದೆ.

310

ನಸೀಂ ಶಾ ಹಾಗೂ ಹ್ಯಾರಿಸ್ ರೌಫ್ ಮಾರಕ ದಾಳಿ ನಡೆಸಿ ಬಲಿಷ್ಠ ಭಾರತ ತಂಡವನ್ನು ಕೇವಲ 119 ರನ್‌ಗಳಿಗೆ ಆಲೌಟ್ ಮಾಡಿದರೂ, ಪಾಕಿಸ್ತಾನದ ಬ್ಯಾಟರ್‌ಗಳು ಸುಲಭ ಗುರಿ ಬೆನ್ನತ್ತಲು ವಿಫಲವಾಗುವ ಮೂಲಕ ಪಂದ್ಯವನ್ನು ಕೈಚೆಲ್ಲಿದರು.

410

ಸದ್ಯ ಪಾಕಿಸ್ತಾನ ತಂಡವು ತಾನಾಡಿದ ಎರಡೂ ಪಂದ್ಯ ಸೋಲುವ ಮೂಲಕ ಸೂಪರ್ 8 ಹಾದಿಯನ್ನು ಸಾಕಷ್ಟು ದುರ್ಗಮಗೊಳಿಸಿಕೊಂಡಿದೆ. ಹಾಗಂತ ಶಾಶ್ವತವಾಗಿ ಪಾಕ್ ತಂಡದ ಸೂಪರ್ 8ರ ಕನಸು ಬಂದ್ ಆಗಿಲ್ಲ.

510

ಹೌದು, ಬಾಬರ್ ಅಜಂ ಪಡೆ ಇನ್ನುಳಿದ ಎರಡು ಪಂದ್ಯಗಳನ್ನು ಕೆನಡಾ ಹಾಗೂ ಐರ್ಲೆಂಡ್ ಎದುರು ಆಡಲಿದೆ. ಈ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಜಯಿಸಿದರೆ, ಇದೇ ವೇಳೆಯಲ್ಲಿ ಯುಎಸ್‌ಎ ಹಾಗೂ ಕೆನಡಾ ತಂಡಗಳು ಇನ್ನುಳಿದ ತಮ್ಮ ಪಾಲಿನ ಪಂದ್ಯ ಸೋತರೇ ಪಾಕ್‌ ಸೂಪರ್ 8 ಪ್ರವೇಶದ ಕನಸಿಗೆ ಬಲ ಬರಲಿದೆ.

610

ಹೀಗಾದಲ್ಲಿ ಪಾಕಿಸ್ತಾನ ಹಾಗೂ ಯುಎಸ್‌ಎ ತಂಡಗಳ ಬಳಿ ತಲಾ 4 ಅಂಕಗಳು ಇರಲಿವೆ. ಆಗ ನೆಟ್‌ ರನ್‌ರೇಟ್‌ ಆಧಾರದಲ್ಲಿ ಯಾವ ತಂಡ ಉತ್ತಮವಾಗಿರುತ್ತದೋ ಆ ತಂಡ 'ಎ' ಗುಂಪಿನಲ್ಲಿ ಎರಡನೇ ತಂಡವಾಗಿ ಸೂಪರ್ 8 ಹಂತಕ್ಕೇರಲಿದೆ.

710

ಪಾಕಿಸ್ತಾನ ತಂಡದ ನೆಟ್‌ ರನ್‌ರೆಟ್ ಸದ್ಯ ಪಾತಾಳಕ್ಕೆ(-0.150) ಆಗಿದ್ದು, ಯುಎಸ್‌ಎ ತಂಡದ ನೆಟ್‌ ರನ್‌ರೇಟ್(+0.626) ಇದೆ. ಹೀಗಾಗಿ ಪಾಕ್ ಇನ್ನುಳಿದ ಎರಡು ಪಂದ್ಯಗಳನ್ನು ಅತಿದೊಡ್ಡ ಅಂತರದಲ್ಲಿ ಜಯಿಸುವುದಷ್ಟೇ ಅಲ್ಲದೇ ಉಳಿದ ತಂಡಗಳ ಫಲಿತಾಂಶ ತಮ್ಮ ಪರವಾಗಿ ಬಂದರಷ್ಟೇ ಸೂಪರ್ 8 ಹಂತಕ್ಕೇರಲು ಸಾಧ್ಯವಾಗಲಿದೆ.

810

ಒಂದು ವೇಳೆ ಯುಎಸ್‌ಎ ಹಾಗೂ ಭಾರತ ತಂಡಗಳು ತಮ್ಮ ಪಾಲಿನ ಇನ್ನುಳಿದ ಎರಡು ಪಂದ್ಯಗಳ ಪೈಕಿ ತಲಾ ಒಂದೊಂದು ಪಂದ್ಯ ಜಯಿಸಿದರೂ, ಪಾಕಿಸ್ತಾನ ತಂಡದ ಈ ಬಾರಿಯ ಟಿ20 ವಿಶ್ವಕಪ್ ಅಭಿಯಾನ್ ಗ್ರೂಪ್ ಹಂತದಲ್ಲೇ ಮುಕ್ತಾಯವಾಗಲಿದೆ.

910

ಒಂದು ವೇಳೆ ಭಾರತ ಸಾಥ್ ಕೊಟ್ಟರೇ, ಈಗಲೂ ಪಾಕ್ ಸೂಪರ್‌-8 ತಲುಪಬಹುದು. ಹೌದು, ಭಾರತ ತಂಡವು ತನ್ನ ಪಾಲಿನ ಎರಡೂ ಪಂದ್ಯವನ್ನು ಜಯಿಸಿದರೆ, ಪಾಕ್ ಮುಂದಿನ ಹಂತಕ್ಕೇರುವ ಅವಕಾಶಕ್ಕೆ ಬಲ ಬರಲಿದೆ.

1010

ಅದೇ ಭಾರತ ಒಂದು ಪಂದ್ಯ ಸೋತು ಮತ್ತೊಂದು ಪಂದ್ಯ ಗೆದ್ದರೇ, ಭಾರತವೇನೋ ಸೂಪರ್ 8 ಹಂತಕ್ಕೆ ಅನಾಯಾಸವಾಗಿ ಲಗ್ಗೆಯಿಡಲಿದೆ. ಆದರೆ ಪಾಕಿಸ್ತಾನದ ಸೂಪರ್ 8 ಹಾದಿ ಬಂದ್ ಆಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್

Latest Videos
Recommended Stories
Recommended image1
ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡಿಯೋದೇ ಡೌಟ್! ಪಾಕ್ ಸೋಲಿನಿಂದ ತಲೆಕೆಳಗಾದ ಲೆಕ್ಕಾಚಾರ
Recommended image2
ಅಷ್ಟಕ್ಕೂ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಗೆ ಏನಾಗಿದೆ? ರಿಂಕು ದಿಢೀರ್ ತಂಡ ತೊರೆದಿದ್ದೇಕೆ?
Recommended image3
ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved