IPL ಹರಾಜು: 73 ಸ್ಥಾನಕ್ಕೆ 971 ಕ್ರಿಕೆಟಿಗರ ಸ್ಪರ್ಧೆ!
ಈ ಬಾರಿಯ ಹರಾಜಿನಲ್ಲಿ 8 ಫ್ರಾಂಚೈಸಿಗಳಿಗೆ ಬೇಕಾಗಿರುವುದು ಒಟ್ಟು 73 ಆಟಗಾರರು. ಆದರೆ 971 ಕ್ರಿಕೆಟಿಗರು ಕಣದಲ್ಲಿದ್ದಾರೆ. ವರ್ಷದಿಂದ ವರ್ಷಕ್ಕೆ ಆಟಗಾರರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಕೋಲ್ಕತಾ(ಡಿ.03) : 2020ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆ ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದೆ. ಬಿಸಿಸಿಐ ಹರಾಜಿಗಾಗಿ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಫ್ರಾಂಚೈಸಿಗಳು ಆಟಗಾರರ ವಿವರ, ಯಾರನ್ನು ಖರೀದಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ತೊಡಗಿದೆ. ವಿಶೇಷ ಅಂದರೆ ಈ ಬಾರಿಯ ಹರಾಜಿನಲ್ಲಿ ಒಟ್ಟು 73 ಆಟಗಾರರನ್ನು ಬಿಕರಿಯಾಗಲಿದ್ದಾರೆ. ಇದಕ್ಕಾಗಿ 971 ಕ್ರಿಕೆಟಿಗರು ಕಣದಲ್ಲಿದ್ದಾರೆ.
ಇದನ್ನೂ ಓದಿ: IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?
971 ಕ್ರಿಕೆಟಿಗರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 713 ಭಾರತೀಯ ಹಾಗೂ 258 ವಿದೇಶಿ ಆಟಗಾರರು ಒಳಗೊಂಡಿದ್ದಾರೆ. 8 ಐಪಿಎಲ್ ಫ್ರಾಂಚೈಸಿಗಳಲ್ಲಿ ಲಭ್ಯವಿರುವ 73 ಸ್ಥಾನಕ್ಕಾಗಿ 971 ಆಟಗಾರರ ಮಧ್ಯೆ ಸ್ಪರ್ಧೆ ಏರ್ಪಡಲಿದೆ. ಹೆಸರು ನೋಂದಣಿಗೆ ನ.30 ಕೊನೆಯ ದಿನವಾಗಿತ್ತು.
ಇದನ್ನೂ ಓದಿ: RCB ವೀಕ್ನೆಸ್ ಬಹಿರಂಗ ಪಡಿಸಿದ ಆಲ್ರೌಂಡರ್ ಮೊಯಿನ್ ಆಲಿ!
215 ಅಂತಾರಾಷ್ಟ್ರೀಯ ಆಟಗಾರರು, ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದಿರುವ 754 ಕ್ರಿಕೆಟಿಗರು, ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಇಬ್ಬರು ಕ್ರಿಕೆಟಿಗರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ.
ಇದನ್ನೂ ಓದಿ: IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ.