ಅಬು ದಾಬಿ(ನ.19): ಪ್ರತಿ ಆವೃತ್ತಿ  ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಆದರೆ 12 ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಇದೀಗ 13ನೇ ಆವೃತ್ತಿಯಲ್ಲಿ RCBಗೆ ಟ್ರೋಫಿ ಗೆಲ್ಲಲು ಅತ್ಯುತ್ತಮ ಅವಕಾಶವಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ತಂಡದ ಆಲ್ರೌಂಡರ್ ಮೊಯಿನ್ ಆಲಿ ತಂಡದ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

 RCB ತಂಡದ ಆಲ್ರೌಂಡರ್ ಮೊಯಿನ್ ಆಲಿ, ಬೆಂಗಳೂರು ತಂಡದ ವೀಕ್ನೆಸ್ ಬಹಿರಂಗ ಪಡಿಸಿದ್ದಾರೆ. ಬೆಂಗಳೂರು ತಂಡ ಪ್ರತಿ ಆವೃತ್ತಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಬ್ಯಾಟಿಂಗನ್ನೇ ನೆಚ್ಚಿಕೊಂಡಿದೆ. ಹೀಗಾಗಿ ತಂಡಕ್ಕೆ ತೀವ್ರ ಹಿನ್ನಡಯಾಗುತ್ತಿದೆ ಎಂದು ಮೊಯಿನ್ ಆಲಿ ಹೇಳಿದ್ದಾರೆ.

ಇದನ್ನೂ ಓದಿ: IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ

ಇತ್ತೀಚೆಗಷ್ಟೇ  RCB 12 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಕೇವಲ ಎಬಿಡಿ ಹಾಗೂ ಮೊಯಿನ್ ಆಲಿ ಇಬ್ಬರು ವಿದೇಶಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅಬು ದಾಬಿ ಟಿ10 ಲೀಗ್ ಆಡುತ್ತಿರುವ ಮೊಯಿನ್ ಆಲಿ, ಡಿಸೆಂಬರ್ 19 ರಂದು ನಡೆಯಲಿರುವ ಆಟಗಾರರ ಹರಾಜಿನಲ್ಲಿ ಮ್ಯಾಚ್ ವಿನ್ನಿಂಗ್ ಆಟಗಾರರನ್ನು ಖರೀದಿಸಬೇಕಿದೆ. ಈ ಮೂಲಕ ಸಮತೋಲನ ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ.