ಲಂಡನ್(ಮಾ.28): ಕುಟುಂಬ ಸದಸ್ಯರ ಜೊತೆ ಅಥವಾ ಗೆಳೆಯರ ಜೊತೆ ರೆಸ್ಟೋರೆಂಟ್, ಜ್ಯೂಸ್-ಐಸ್‌ಕ್ರೀಂ ಸೆಂಟರ್ ಬಾರ್, ಪಬ್‌ ಒಂದಷ್ಟು ಸಮಯ ಕಳೆಯುವುದು ಇಂದಿನ ಯಾಂತ್ರಿಕ ಬದುಕಿಗೆ ಅವಶ್ಯಕವಾಗಿಬಿಟ್ಟಿದೆ. ಇದೀಗ ಲಾಕ್‌‍ಡೌನ್‌ನಿಂದ ಹಲವರಿಗೆ ಇವೆಲ್ಲವೂ ಮಿಸ್ ಆಗುತ್ತಿದೆ. ಇದಕ್ಕಾಗಿ ವಿನೂತನ ಪ್ಲಾನ್ ಮಾಡಲಾಗಿದೆ. ಈ ಮೂಲಕ ಮನೆಯಲ್ಲಿರುವವರಿಗೆ ಅದೇ ಅನುಭವ ನೀಡಲು ಪ್ರತಿಷ್ಠಿತ ಬಾರ್ ಮುಂದಾಗಿದೆ.

ಕೇರಳ ಜನರ ಮದ್ಯ ಖರೀದಿ ಶಿಸ್ತಿಗೆ ಮನಸೋತ ಲಂಕಾ ಕ್ರಿಕೆಟಿಗ ಜಯವರ್ದನೆ!...

ಲಂಡನ್‌ನಲ್ಲಿರುವ ಪ್ರತಿಷ್ಠಿತ ಬ್ರೆವ್‌ಡಾಗ್ ಬಾರ್ ಅಂಡ್ ಪಬ್ ರೆಸ್ಟೋರೆಂಟ್ ಹೊಸ ಪ್ರಯತ್ನ ಮಾಡಿದೆ. ಮನೆಯಲ್ಲಿ ಕೂತು ಕುಡಿಯುವವರಿಗೆ ಬಾರ್ ಫೀಲ್ ನೀಡಲು ಆನ್‌ಲೈನ್‌ ತಂತ್ರಜ್ಞಾನದ ಮೊರೆ ಹೋಗಿದೆ. ಲಾಕ್‌ಡೌನ್ ವೇಳೆ ಕುಡಿಯಲು ಕೂತಾಹ ಬ್ರೆವ್‌ಡಾಗ್ ಆನ್‌ಲೈನ್ ಲಾಗಿನ್ ಆದರೆ ಸಾಕು, ಹೀಗೆ ಲಾಗಿನ್ ಆಗಿರುವ ಎಲ್ಲಾ ಕುಡುಕರು ವಿಡಿಯೋ ನಿಮ್ಮ ಲ್ಯಾಪ್‌ಟಾಪ್, ಡೆಸ್ಕಟಾಪ್ ಅಥವಾ ಮೊಬೈಲ್‌ನಲ್ಲಿ ಕಾಣಲಿದೆ. 

 

ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಇಷ್ಟೇ ಅಲ್ಲ, ಹೀಗೆ ಲಾಗಿನ್ ಆದವರ ಜೊತೆ ಚಾಟಿಂಗ್, ಮೆಸೇಜ್ ಕೂಡ ಕಳುಹಿಸಬಹುದು. ಇದು ಲೈವ್ ವಿಡಿಯೋ ಆಗಿರಲಿದ್ದು, ರಿಯಲ್‌ ಟೈಮ್‌ನಲ್ಲಿ ಲಭ್ಯವಾಗಲಿದೆ. ಲಾಕ್‌ಡೌನ್‌ ಕಾರಣ ಯಾರೂ ಕೂಡ ಮನೆಯಿಂದ ಹೊರಬರಬಾರದು. ಹಾಗಂತ ಗ್ರಾಹಕರು ಮನೆಯಲ್ಲಿ ತಮ್ಮ ಸಮಯವನ್ನು ಆಂನದಿಸಬಹುದು  ಎಂದು ಬ್ರೆವ್‌ಡಾಕ್ ಬಾರ್ ಹೇಳಿದೆ.