ಜೆರುಸಲೆಂ (ಜ. 18)  ಭಾರತದಲ್ಲಿ ಕೊರೋನಾ ಲಸಿಕೆ ಅಭಿಯಾನ ಶುರುವಾಗಿದೆ.  ಇನ್ನೊಂದು ಕಡೆ ಪ್ರಪಂಚದಲ್ಲಿಯೂ   ಅನೇಕ ಕಂಪನಿಗಳು ಲಸಿಕೆ ಸಿದ್ಧಮಾಡಿದ್ದು ನೀಡುತ್ತೇವೆ ಎಂದು ಹೇಳಿವೆ.

ಕೊ ಕೊರೋನಾ ಲಸಿಕೆ ತೆಗೆದುಕೊಂಡರೆ ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್ ಇದೆಯಂತೆ, ಮೂರ್ಛೆ ರೋಗ ಬರುತ್ತದೆಯಂತೆ.. ಲಕ್ವಾ ಹೊಡೆಯುತ್ತದೆಯಂತೆ .. ಹೀಗೆ ಸಾಲು ಸಾಳು ಗಾಳಿ ಸುದ್ದಿಗಳಿಗೂ ಬರವಿಲ್ಲ. ಅದೆಲ್ಲದರ ನಡುವೆ ಇಸ್ರೇಲ್ ಧರ್ಮಗುರು ಒಬ್ಬರು ಬಾಂಬ್ ಸಿಡಿಸಿದ್ದಾರೆ.

ಏಕಾಏಕಿ ನಾಲ್ವರು ಶಾಸಕರಿಗೆ ಒಕ್ಕರಿಸಿಕೊಂಡ ಕೊರೋನಾ

ಕೊರೋನಾ ಲಸಿಕೆ  ಪಡೆದುಕೊಂಡರೆ ಸಲಿಂಗಕಾಮಿಗಳಾಗುತ್ತೀರಿ ಎಚ್ಚರ ಎಂದಿದ್ದಾರೆ.  ಇಸ್ರೇಲ್ ನ ರಬ್ಬಿ ಡೇನಿಯಲ್ ಅಸೋರೆ ಈ ಸಂಶೋಧನೆ ಮಾಡಿದವರು.  ಈ  ಲಸಿಕೆ ಪಡೆದರೆ ಸಲಿಂಗ  ಕಾಮಿಗಳಾಗುತ್ತೀರಿ ಯಾವ ಕಾರಣಕ್ಕೂ ಪಡೆದುಕೊಳ್ಳಬೇಡಿ ಎನ್ನುವುದು ಅವರ ಮಾತು.

ಇಡೀ ಜಗತ್ತನ್ನು ಬದಲಿಸುವ ಉದ್ದೇಶದಿಂದ ಲಸಿಕೆ  ತಯಾರು ಮಾಡಲಾಗಿದೆ.  ಜನರನ್ನು ಮೈಕ್ರೋ ಚಿಪ್ ಗಳನ್ನಾಗಿ ಬದಲಿಸಿ ತಾವು ಹೇಳಿದಂತೆ ಕೇಳುವ ಯಂತ್ರವನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಸಂಶೋಧನಾ ವರದಿಯನ್ನು ಮುಂದೆ  ಇಟ್ಟಿದ್ದಾರೆ.

ಲಸಿಕೆ ಪಡೆದುಕೊಂಡರೆ ಪುರುಷತ್ವವೂ ಕಡಿಮೆಯಾಗುತ್ತದೆ ಎಂಬ ಊಹಾಪೋಹ ಸಹ ಹೆಚ್ಚಿತ್ತು. ಇದೆಲ್ಲದಕ್ಕೂ ವಿಜ್ಞಾನಿಗಳು ಉತ್ತರ ನೀಡಿದ್ದು ಯಾವ ಎಫೆಕ್ಟ್ ಆಗುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.