ನವದೆಹಲಿ (ಫೆ. 18) ಕೊರೋನಾ ಒಂದು ಹಂತದ ನಿಯಂತ್ರಣ ಕಂಡು ಮತ್ತೆ ತನ್ನ ಎರಡನೇ ಹಂತದ ಉಪಟಳ ಆರಂಭಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅಕ್ಕ ಪಕ್ಕದ ದೇಶಗಳೊಂದಿಗೆ ಮಾತನಾಡಿದ್ದಾರೆ. 

ಕೊರೋನಾ ನಿಯಂತ್ರಣದಲ್ಲಿ ಇನ್ನು ಮುಂದೆ ನಾವೆಲ್ಲರೂ ಹೇಗೆ ಪರಸ್ಪರ ಸಹಕಾರ ನೀಡಿಕೊಳ್ಳಬೇಕು ಎಂಬ ಅಜೆಂಡಾ ಇಟ್ಟುಕೊಂಡು ಸಭೆ ನಡೆದಿದೆ.  ದಕ್ಷಿಣ ಏಷ್ಯಾದ ಎಲ್ಲ ರಾಷ್ಟ್ರಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

'ಕೊವಿಡ್ ಮ್ಯಾನೇಜ್ ಮೆಂಟ್ ; ಎಕ್ಸ್ ಪಿರಿಯನ್ಸ್, ಗುಡ್ ಪ್ರಾಕ್ಟೀಸ್ ಆಂಡ್ ವೇ ಫಾರ್ವಡ್' ಆಧಾರದಲ್ಲಿ  ಎಲ್ಲ ರಾಷ್ಟ್ರದ ನಾಯಕರು ಮಾತನಾಡಿಕೊಂಡಿದ್ದಾರೆ. 

ದೇಶದಲ್ಲಿ ಕೊರೋನಾ ಎರಡನೇ ಅಲೆ ಶುರುವಾಯ್ತಾ? 

ಕೊರೋನಾವನ್ನು ನಿರ್ಮೂಲನೆ ಮಾಡಲು ನಮ್ಮ ಎಲ್ಲರ ಸಹಕಾರ ಅಗತ್ಯ ಎಂಬುದನ್ನು ಮೋದಿ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಲಸಿಕೆ ವಿಚಾರದಲ್ಲಿಯೂ ಸಹಕಾರಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.

ಭಾರತ ಇಡೀ ಪ್ರಪಂಚಕ್ಕೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಸಾವಿನ ದರ ಹೊಂದಿದೆ.  ಇದೇ ಸಂಬಂಧವನ್ನು ಮುಂದುವರಿಸಿಕೊಂಡು  ಹೋಗಲು ಭಾರತ ಬಯಸುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ಮತ್ತು ದಾದಿಯರಿಗೆ  ಸ್ಪೇಶಲ್ ವಿಸಾ ಕೊಡುವ ವಿಚಾರದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಆರೋಗ್ಯದ ತುರ್ತು ಬಿದ್ದಾಗ ಇವರೆಲ್ಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ತೆರಳಬಹುದು ಎಂಬುದನ್ನು ತಿಳಿಸಿಕೊಟ್ಟರು.

ಆಯಾ ದೇಶದ ನಾಗರಿಕ ವಿಮಾನಯಾನ ಸಚಿವರ ಸಹಕಾರ ಸಹ ಇದಕ್ಕೆ ಬೇಕು ಎಂದು ಕೇಳಿಕೊಂಡರು.  ಕೊರೋನಾ ನಿಯಂತ್ರಣಕ್ಕೆ ಒಂದು ಪ್ರಾದೇಶಿಕ  ವೇದಿಕೆಯನ್ನು ಸಿದ್ಧಮಾಡೋಣ ಎಂಬ ಅಭಿಲಾಷೆ ಮುಂದೆ ಇಟ್ಟರು.

ಕೊರೋನಾ ಆರಂಭದಿಂದಲೂ ಸವಾಲುಗಳನ್ನು ನಮ್ಮ ಮುಂದೆ ಇಟ್ಟಿತು.  ನಾವು ಕೊರೋನಾಕ್ಕೆಂದು ತುರ್ತುಉ ನಿಧಿ ತೆಗೆದಿಟ್ಟೆವು.  ನಮ್ಮ ರಿಸೋರ್ಸ್ ಗಳನ್ನು ಹಂಚಿಕೊಂಡೆವು.  ಮೆಡಿಸಿನ್. ಪಿಪಿಇ ಕಿಟ್ ಸೇರಿದಂತೆ ನಿಯಂತ್ರಣಕ್ಕೆ ಪೂರಕವಾದ ಎಲ್ಲವನ್ನು ಹಂಚಿಕೊಂಡಿದ್ದರ ಪರಿಣಾಮ ಇಂದು ಈ ಹಂತದಲ್ಲಿ ಕೊರೋನಾಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿದೆ ಎಂದು ತಿಳಿಸಿದರು. 

ಕಳೆದ ವರ್ಷ ಮಾರ್ಚ್ ನಲ್ಲಿ ನಾವೆಲ್ಲ ಒಂದಾಗಿ ಮಾತುಕತೆ ನಡೆಸಿದ್ದೇವು. ಅಲ್ಲಿ ತೀರ್ಮಾನ ತೆಗೆದುಕೊಂಡಂತೆ ಸವಾಲು ಮೆಟ್ಟಿ ನಿಂತೆವು. ಈ ಕೊರೋನಾಕ್ಕೆ ಸವಾಲುಗಳು ಅಂತ್ಯವಾಗಲ್ಲ. ಹೊಸದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.