ಕೊರೋನಾ ವೈರಸ್ ಹರಡದಂತೆ ತಡೆಯಲು ಜನರ ಸಂಪರ್ಕ ಮಾಡಬೇಡಿ, ಕೈ ಕುಲುಕಬೇಡಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಅನ್ನೋ ಹಲವು ಮುಂಜಾಗ್ರತ ಕ್ರಮಗಳ ಕುರಿತು ಸರ್ಕಾರ ಎಚ್ಚರವಹಿಸುತ್ತಲೇ ಇದೆ. ಇದನ್ನು ಚಾಚೂ ತಪ್ಪದೆ ಪಾಲಿಸಿದವರು ಅಂದರ ಕೇರಳದ ಮದ್ಯ ಖರೀದಿಗೆ ತೆರಳಿದೆ ಜನ. ಇದೀಗ ಕೇರಳ ಜನರ ಶಿಸ್ತಿಗೆ ಲಂಕಾ ಕ್ರಿಕೆಟಿಗ ಮನಸೋತಿದ್ದಾರೆ.

ಕೊಲೊಂಬೊ(ಮಾ.21): ಕೊರೋನಾ ವೈರಸ್ ತಡೆಗಟ್ಟಲು ಸದ್ಯ ಜನರ ಸಂಪರ್ಕ ಕಡಿಮೆ ಮಾಡುವುದೇ ಉತ್ತಮ. ಈ ಕುರಿತು ಅಭಿಯಾನಗಳು ನಡೆಯುತ್ತಿದೆ. ಆದರೆ ಹಲವರಿಗೆ ಇದರ ಗಂಭೀರತೆ ಅರಿವಾಗಿಲ್ಲ. ಇನ್ನು ಕೆಲವರು ಅತೀಯಾಗಿ ಭಯಪಟ್ಟಿದ್ದಾರೆ. ಅಂತರವಿರಲಿ ಅನ್ನೋ ಸರ್ಕಾರದ ಸೂಚನೆಯನ್ನು ಸರಿಯಾಗಿ ಪಾಲಿಸಿದ ಹೆಗ್ಗಳಿಗೆ ಕೇರಳದ ಮದ್ಯ ಖರೀದಿ ಜನರು ಪಾತ್ರರಾಗಿದ್ದಾರೆ.

ಕೊರೋನಾ ವಿರುದ್ಧ ಹೋರಾಡಲು ಯುವಿ-ಕೈಫ್ ಜೊತೆಯಾಟ ನೆನಪಿಸಿದ ಪ್ರಧಾನಿ ಮೋದಿ!

ಕೊರೋನಾ ಸೋಂಕು ತಗಲುವ ಕಾರಣ ಜನರಿಗೆ ಮನೆಯಿಂದ ಹೊರಬರಬೇಡಿ ಎಂದು ಸೂಚನೆ ನೀಡಲಾಗಿದೆ. ಆದರೆ 90 ಹಾಕದಿದ್ರೆ, ಕೈಅಲ್ಲಾಡುತ್ತೆ ಅನ್ನೋವವರಿಗೆ ಮನೆಯಲ್ಲಿ ಇರೋಕಾಗುತ್ತಾ? ಕೇರಳ ಜನ ವೈನ್ ಶಾಪ್‌ಲ್ಲಿ ಮದ್ಯ ಖರೀದಿಗೆ ನಿಲ್ಲುವ ಕ್ಯೂನಲ್ಲೂ ಸೂಚನೆ ಪಾಲಿಸಿದ್ದಾರೆ. ಒಬ್ಬರಿಗೊಬ್ಬರ ಮಧ್ಯೆ ಅಂತರ ಕಾಯ್ದುಕೊಂಡು ಮದ್ಯ ಖರೀದಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು. ಕೇರಳ ಜನರ ಶಿಸ್ತನ್ನು ಶ್ರೀಲಂಕಾ ಕ್ರಿಕೆಟಿಗ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ.

ಇದು ಉತ್ತಮ ಖರೀದಿಯಲ್ಲ, ಆದರೆ ಅಂತರ ಉತ್ತಮವಾಗಿದೆ ಎಂದು ಮಹೇಲಾ ಜಯವರ್ದನೆ ಟ್ವೀಟ್ ಮಾಡಿದ್ದಾರೆ. 

Scroll to load tweet…

ಸಾಮಾನ್ಯವಾಗಿ ಕೇರಳದಲ್ಲಿ ಮದ್ಯ ಖರೀದಿ ವೇಳೆ ನೂಕು ನುಗ್ಗಲು, ಜಟಾಪಟಿ ನಡೆಯುತ್ತೆ. ಕಿಲೋಮೀಟರಗಟ್ಟಲೆ ಕ್ಯೂಗಳ ವಿಡಿಯೋ, ಫೋಟೋ ಈಗಾಗಲೇ ವೈರಲ್ ಆಗಿದೆ. ಕೊರೋನಾ ಭೀತಿಯಿಂದ ಜನರು ಶಿಸ್ತಿನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಯಾರಲ್ಲೂ ಅವರಸರವಿಲ್ಲ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.


Scroll to load tweet…