ಬಾವಲಿಗಳಿಂದ ಜನರಿಗೆ ಕೊರೋನಾ ವೈರಸ್..! WHO-ಚೀನಾ ಜಂಟಿ ಅಧ್ಯಯನ ವರದಿ

ಚೀನಾ- ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಅಧ್ಯಯನ ವರದಿ | ಬಾವಲಿಗಳಿಂದ ವೈರಸ್ | ಆದರೆ ಜನರನ್ನು ತಲುಪಿದ್ದು ಬೇರೆ ಪ್ರಾಣಿಗಳ ಮೂಲಕ

COVID-19 passed from bats to humans through another animal says WHO-China study Report dpl

ಬೀಜಿಂಗ್(ಮಾ.29): COVID-19 ರ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ-ಚೀನಾ ಜಂಟಿಯಾಗಿ ನಡೆಸಿದ  ಅಧ್ಯಯನದ ವರದಿ ಹೊರಬಿದ್ದಿದೆ. ಇದರ ಪ್ರಕಾಶ ಮತ್ತೊಂದು ಪ್ರಾಣಿ ಮೂಲಕ ಬಾವಲಿಗಳಿಂದ ಮನುಷ್ಯರಿಗೆ ವೈರಸ್ ಹರಡುತ್ತದೆ ಎನ್ನಲಾಗಿದೆ.

ವರದಿಯ ಕರಡು ಪ್ರತಿ ಪ್ರಕಾರ ಲ್ಯಾಬ್‌ನಿಂದ ಕೆಮಿಕಲ್ ಸೋರಿಕೆ ಅಸಂಭವವಾಗಿದೆ ಎನ್ನಲಾಗಿದೆ. ವೈರಸ್ ಮೊದಲು ಹೇಗೆ ಆರಂಭವಾಯ್ತು ಎಂಬುದರ ಕುರಿತು ಹೊಸ ನೋಟ ನೀಡುತ್ತದೆ. ವರದಿಯು ಸಂಶೋಧಕರ ತೀರ್ಮಾನಗಳ ಹಿಂದಿನ ತಾರ್ಕಿಕತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ.

ಸಿಎಂ ಸಭೆ; ಪಾರ್ಟಿಗಳಿಗೆ ಬ್ರೇಕ್, ನೈಟ್ ಕರ್ಫ್ಯೂ ಏನ್ ಕತೆ?

ಲ್ಯಾಬ್ ಲೀಕ್ ಸಾಧ್ಯತೆ ಹೊರತುಪಡಿಸಿ ಪ್ರತಿಯೊಂದು ಪ್ರದೇಶದಲ್ಲೂ ಹೆಚ್ಚಿನ ಸಂಶೋಧನೆಗಳನ್ನು ಈ ತಂಡವು ಪ್ರಸ್ತಾಪಿಸಿತ್ತು. ಇದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರು ಹಲವರಿಂದ ಉತ್ತೇಜಿಸಲ್ಪಟ್ಟ ಒಂದು ಊಹಿಸಲ್ಪಟ್ಟ ಸಿದ್ಧಾಂತವಾಗಿದೆ. 

ಈಗ ಬಂದಿರುವ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದ್ದು, ವೈರಸ್ ಮೂಲ ಪತ್ತೆ ಹಚ್ಚಲು ಕ್ರಮ ವಹಿಸಲಾಗುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ಬರುವ ಮಾಹಾಮರಿಗಳನ್ನು ತಡೆಯುವ ಪ್ರಯತ್ನ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios