ಹುನಗುಂದ(ಏ.02): ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಲದ ಪೊಲೀಸ್‌ ಪೇದೆಯೊಬ್ಬನನ್ನು ಹುನಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಿದ ಕ್ವಾರಂಟೈನ್‌ ಇಡಲಾಗಿದೆ. 

ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಈ ಪೊಲೀಸ್ ಪೇದೆ ಇಲಾಖೆ ಕೆಲಸದ ನಿಮಿತ್ತ ದೆಹಲಿಗೆ ಹೋಗಿ ಬಮದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸಂಜೆಯಿಂದ ಹುನಗುಂದ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 

ಹೋಂ ಕ್ವಾರಂಟೈನ್‌ ಪಾಲಿಸದ ಬಳ್ಳಾರಿ ವ್ಯಕ್ತಿ ಪೊಲೀಸರ ವಶಕ್ಕೆ

ಸದರಿ ವ್ಯಕ್ತಿ ಪರೀಕ್ಷಿಸಲಾಗಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಶಾಂತ ತುಂಬಗಿ ಸ್ಪಷ್ಟಪಡಿಸಿದ್ದಾರೆ.