Asianet Suvarna News Asianet Suvarna News

ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ, ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇರಲ್ಲ: ಬೊಮ್ಮಾಯಿ

ಪ್ರಕಾಶ್ ರಾಜ್‌ ಒಳ್ಳೆ ನಟ. ಅವರು ಈಗಾಗಲೇ ವಿವಾದ ಮಾಡಿದ್ದಾರೆ. ಕಾಂಟ್ರವರ್ಸಿ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಸ್ತುತ ಇರಬೇಕು ಅಂತ ತೀರ್ಮಾನ ಮಾಡಿದಂತಿದೆ ಎಂದು ಪ್ರಕಾಶ್‌ ರಾಜ್‌ ವಿರುದ್ಧ ಹರಿಹಾಯ್ದ ಬೊಮ್ಮಾಯಿ. 

Haveri Gadag BJP Candidate Basavaraj Bommai React to Actor Prakash Raj Statement grg
Author
First Published May 1, 2024, 11:36 PM IST

ಹಾವೇರಿ(ಮೇ.01): ನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ, ಅವರು ಏನೇ ಮಾತಾಡಿದರೂ ಅಜೆಂಡಾ ಇಟ್ಕೊಂಡು ಮಾತಾಡ್ತಾರೆ. ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇರಲ್ಲ ಅಂತ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ ಎಂಬ ಪ್ರಕಾಶ್ ರಾಜ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಆರ್‌ಟಿಇಎಸ್‌ ಕಾಲೇಜು ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಆತಂಕವಾದಿಗಳಿಗೆ ನಾವು ಆತಂಕವಾದಿಗಳು ಎಂದು ಈಗಾಗಲೇ ಮೋದಿ ಹೇಳಿದ್ದಾರೆ. ಭಯೋತ್ಪಾದಕರಿಗೆ ಆತಂಕವಾದಿಗಳಿಗೆ ಈ ನೆಲದ ಮೇಲೆ ಅವಕಾಶ ಇಲ್ಲ. ಭಯೋತ್ಪಾದಕ ಕೃತ್ಯ ಮಾಡಿದವರಿಗೆ ಭಯೋತ್ಪಾದಕ ಅಂತಾರೆ. ಪ್ರಕಾಶ್ ರಾಜ್‌ ಒಳ್ಳೆ ನಟ. ಅವರು ಈಗಾಗಲೇ ವಿವಾದ ಮಾಡಿದ್ದಾರೆ. ಕಾಂಟ್ರವರ್ಸಿ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಸ್ತುತ ಇರಬೇಕು ಅಂತ ತೀರ್ಮಾನ ಮಾಡಿದಂತಿದೆ ಎಂದು ಪ್ರಕಾಶ್‌ ರಾಜ್‌ ವಿರುದ್ಧ ಹರಿಹಾಯ್ದಿದ್ದಾರೆ. 

'ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು, ಆದರೆ ಇವನು... ಪ್ರಧಾನಿ ಮೋದಿ ವಿರುದ್ಧ ಪ್ರಕಾಶ ರಾಜ್ ಏಕವಚನದಲ್ಲಿ ವಾಗ್ದಾಳಿ!

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿ ನಾಯಕರ ಮೌನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತನಿಖೆಯಲ್ಲಿ ಎನ್ ಐ ಎ ಬಂದರೂ ಕೂಡಾ ನಾವು ಒಪ್ಪಿಕೋತೀವಿ ಎಂದು ತಿಳಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ಒಂದೇ ದಿನದಲ್ಲಿ ವೀಸಾ ಹೇಗೆ ಸಿಕ್ತು ಎಂಬ ವಿನಯ್ ಕುಲಕರ್ಣಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ವೀಸಾ ಹೇಗೆ ಸಿಕ್ತು ಅಂತ ಕೇಳಿದರೆ ಹೇಗೆ. ಒಂದೇ ದಿನದಲ್ಲಿ ಸಿಗುತ್ತೆ?. ಅವರು ಅಪ್ಲೈ ಮಾಡಿದ್ದು ಸಿಕ್ಕಿದ್ದು ಇವರು ನೋಡಿದಾರಾ?. ಅವರು ಯಾವಾಗ ವೀಸಾಗೆ ಹಾಕಿದ್ರು ಇವರಿಗೆ ಗೊತ್ತಾ?. ವೀಸಾ ಜರ್ಮನಿ ಸರ್ಕಾರ ಕೊಡುತ್ತೆ. ವೀಸಾ ಕೊಡೋರು ಕೇಂದ್ರ ಸರ್ಕಾರದವರಲ್ಲ. ಕಾಮನ್ ಸೆನ್ಸ್ ಇರಬೇಕು ಅಷ್ಟು ಗೊತ್ತಿಲ್ಲವಾ? ಎಂದು ಹೇಳುವ ಮೂಲಕ ವಿನಯ್ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. 

Follow Us:
Download App:
  • android
  • ios