Hunagund  

(Search results - 31)
 • Hunagund

  Coronavirus Karnataka2, Apr 2020, 2:58 PM IST

  ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್‌ ಪೇದೆ!

  ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಲದ ಪೊಲೀಸ್‌ ಪೇದೆಯೊಬ್ಬನನ್ನು ಹುನಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಿದ ಕ್ವಾರಂಟೈನ್‌ ಇಡಲಾಗಿದೆ. 
   

 • Kudalasangama

  Karnataka Districts18, Mar 2020, 2:08 PM IST

  ಕೊರೋನಾ ಭೀತಿ: ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನಕ್ಕೆ ಬೀಗ!

  ಜಿಲ್ಲೆಯಾದ್ಯಂತ ಕೊರೋನಾ ಭೀತಿ ಮುಂದುವರಿದಿದ್ದು, ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇಗುಲ ಹಾಗೂ ಐಕ್ಯ ಮಂಟಪದ ಪ್ರವೇಶವನ್ನು ನಿರ್ಬಂಧಿ​ಸಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿ​ಕಾರ ಆದೇಶ ಹೊರಡಿಸಿದೆ.
   

 • BJP Cong JDS

  Karnataka Districts13, Mar 2020, 11:58 AM IST

  JDS ಸಹಕಾರವಿಲ್ಲದೆ ಅಧಿಕಾರವಿಲ್ಲ: ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ!

  ಪುರಸಭೆಗೆ ಚುನಾವಣೆ ಜರುಗಿ ಒಂದೂವರೆ ವರ್ಷದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಮೂರು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. 2018 ಆಗಸ್ಟ್‌ನಲ್ಲಿ ಪುರಸಭೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಯಾವುದೇ ಪಕ್ಷಕ್ಕೆ ಸರಳ ಬಹುಮತ ಇಲ್ಲದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೂರು ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಪಕ್ಷವೇ ನಿರ್ಣಾಯಕ ಪಾತ್ರ ವಹಿಸಲಿದೆ. 
   

 • Bagalkote1
  Video Icon

  Karnataka Districts7, Mar 2020, 1:18 PM IST

  ಸ್ನೇಹಿತನಿಗೆ ಕಿಡ್ನಿ ಸಮಸ್ಯೆ: ಕುಚುಕು ಗೆಳೆಯನನ್ನ ಉಳಿಸಿಕೊಳ್ಳಲು ಮುಂದಾದ ಚಡ್ಡಿ ದೋಸ್ತರು!

  ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಮಾಲಾ ಎಂಬುವರ ಮಗ ಸುದೀಪ್‌ ಎಂಬ ಯುವಕ ಎರಡೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸುದೀಪ್ ಕುಟುಂಬ ಕಡು ಬಡವರಾಗಿದ್ದರಿಂದ ಚಿಕಿತ್ಸೆಗೆ ದುಡ್ಡಿನ ಸಮಸ್ಯೆ ಎದುರಾಗಿದೆ.
   

 • modi Bagalkot

  Karnataka Districts2, Mar 2020, 3:04 PM IST

  ಐಹೊಳೆ ರಕ್ಷಣೆಗೆ ಮೋದಿಗೆ ಪತ್ರ ಬರೆದ ಯುವಕ: ಪ್ರಧಾನಿ ಕಚೇರಿಯಿಂದ ಬಂತು ಉತ್ತರ!

  ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಐಹೊಳೆ ಗ್ರಾಮದ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದ ಪ್ರಕಾಶ ಕಡೂರಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸ್ಪಂದನೆ ದೊರಕಿದೆ. 
   

 • doddanagouda-patil-vijayanand-kashappanavar
  Video Icon

  Karnataka Districts22, Feb 2020, 2:38 PM IST

  ಹುನಗುಂದ: ಶಾಸಕ ದೊಡ್ಡನಗೌಡ ಪಾಟೀಲಗೆ ಗಂಡಸ್ತನದ ಸವಾಲ್‌ ಹಾಕಿದ ಕಾಶಪ್ಪನವರ!

  ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಟಾಕ್ ವಾರ್ ಜೋರಾಗಿ ನಡೆದಿದೆ. ಪೌರತ್ವ ಕಾಯ್ದೆಯ ಪರವಾಗಿ ನೀನು ಮಾತಾಡ್ತಿಯಾ, ನಿನಗೆ ಗಂಡಸ್ತನ ಇದ್ದರೆ ಜನ ಸೇರಿಸು ನೋಡೇ ಬಿಡೋಣ ಎಂದು ದೊಡ್ಡನಗೌಡ ಪಾಟೀಲ ವಿರುದ್ಧ ಕಾಶಪ್ಪನವರ್ ಹರಿಹಾಯ್ದಿದ್ದಾರೆ. 

 • Bagalkot

  Karnataka Districts21, Feb 2020, 3:20 PM IST

  ಕೂಲಿಕಾರರ ಜೊತೆ ಕೂಲಿಯಾದ ಬಾಗಲಕೋಟೆ ಜಿಪಂ ಸಿಇಒ: ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ ಮಾನಕರ

  ಬಾಗಲಕೋಟೆ(ಫೆ.21): ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ್‌ ನೀಡುವ ಮೂಲಕ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಾರ್ಮಿಕರಿಗೆ ಪ್ರೇರಣೆಯಾಗಿದ್ದಾರೆ. ಗುರುವಾರ ಹುನಗುಂದ ತಾಲೂಕಿನ ಮುಗುನೂರು ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರೊಂದಿಗೆ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ಟ್ರ್ಯಾಕ್ಟರ್‌ಗಳಲ್ಲಿ ಹಾಕುವ ಮೂಲಕ ಕಾರ್ಮಿಕರಿಗೆ ಸಾಥ್‌ ನೀಡಿದ್ದಾರೆ.
   

 • ceo

  Karnataka Districts21, Feb 2020, 2:18 PM IST

  ಹುನಗುಂದ: ಕೂಲಿಕಾರರ ಜೊತೆ ಕೂಲಿಯಾಗಿ ದುಡಿದ ಜಿಪಂ ಸಿಇಒ!

   ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ್‌ ನೀಡುವ ಮೂಲಕ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಾರ್ಮಿಕರಿಗೆ ಪ್ರೇರಣೆಯಾಗಿದ್ದಾರೆ.

 • Kudalasangama

  Karnataka Districts31, Jan 2020, 9:07 AM IST

  ‘ಮದ್ಯಪಾನದಿಂದಲೇ ಅತ್ಯಾಚಾರ, ಅಪರಾಧ ಕೃತ್ಯಗಳು ಹೆಚ್ಚುತ್ತಿವೆ’

  ಜನರನ್ನು ಕಣ್ಣೀರಿನಲ್ಲಿಟ್ಟು ಅರ್ಥ ವ್ಯವಸ್ಥೆ ಸುಧಾರಣೆ ಮಾಡುವುದು ರಾಜ್ಯದ ಅಭಿವೃದ್ಧಿಯಲ್ಲ. ಆರ್ಥಿಕ ಹೊರೆಯಾದರೂ ಜನರ ನೆಮ್ಮದಿ ನಮಗೆ ಮುಖ್ಯ. ಜನರ ಸುಖ, ಶಾಂತಿಗಾಗಿ ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಠಾಧೀಶರ, ಚಿಂತಕರ, ಹೋರಾಟಗಾರರ, ಮಹಿಳಾ ಸಂಘಟನೆಗಳ ಸಭೆಯನ್ನು ಕೂಡಲೇ ಕರೆದು ಮದ್ಯ ನಿಷೇಧವನ್ನು ಆರ್ಥಿಕ ತೊಂದರೆ ಇಲ್ಲದೆ ನಿಷೇಧಿಸುವ ಹೊಸ ನೀತಿಯನ್ನು ಜಾರಿಗೆ ತರಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
   

 • water

  Karnataka Districts24, Jan 2020, 10:52 AM IST

  ಹುನಗುಂದ: ಮರೋಳ ಹನಿ ನೀರಾವರಿ ಯೋಜನೆಯಲ್ಲಿ ಅವ್ಯವಹಾರ, ತನಿಖೆಗೆ ಆದೇಶ

  ಹನಿ ನೀರಾವರಿ ಮೂಲಕ ಸುಮಾರು 65 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹುನಗುಂದ ತಾಲೂಕಿನ ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಹನಿ ನೀರಾವರಿ ಯೋಜನೆ ಭಾರತಕ್ಕಷ್ಟೇ ಅಲ್ಲ ಇಡೀ ಏಷ್ಯಾ ಖಂಡಕ್ಕೆ ದೊಡ್ಡ ಹನಿ ನೀರಾವರಿ ಯೋಜನೆ. ಇದರ ಮಾದರಿಯನ್ನೇ ಇತರೆ ನೀರಾವರಿ ಯೋಜನೆಗೆ ಬಳಸಿಕೊಳ್ಳುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇರುವಾಗಲೇ ಈ ಯೋಜನೆ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಯೋಜನೆಯ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟವಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ಸಿಕ್ಕಿದೆ.
   

 • undefined

  Karnataka Districts17, Jan 2020, 9:13 AM IST

  ಹುನಗುಂದ: ಸಂಭ್ರಮದಿಂದ ಜರುಗಿದ ಸಿದ್ಧೇಶ್ವರ ರಥೋತ್ಸವ

  ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಸಿದ್ಧೇಶ್ವರ ರಥೋತ್ಸವ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಠಿ ಹಾಗೂ ಅಪಾರ ಭಕ್ತ ವೃಂದದ ಮಧ್ಯೆ ವಿಜೃಂಭನೆಯಿಂದ ನಡೆಯಿತು.

 • Bagalkot
  Video Icon

  Karnataka Districts16, Jan 2020, 11:47 AM IST

  ಜನಪದ ಸಾಂಗ್ ಹಾಡಿ ಭಕ್ತರನ್ನ ರಂಜಿಸಿದ ಡಾ. ಶಿವುಕುಮಾರ ಸ್ವಾಮೀಜಿ

  ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ನಡೆದ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ 2020ರ ಕಾರ್ಯಕ್ರಮದಲ್ಲಿ ಡಾ. ಶಿವುಕುಮಾರ ಸ್ವಾಮೀಜಿ ಅವರ ಸಾಂಗ್‌ಗೆ ಭಕ್ತರು ಫುಲ್ ಫಿದಾ ಆಗಿದ್ದಾರೆ.  
   

 • Kudalasangama

  Karnataka Districts15, Jan 2020, 10:54 AM IST

  ಕೂಡಲಸಂಗಮ: ಸಂಕ್ರಾಂತಿ ಹಬ್ಬಕ್ಕೆ ಭಕ್ತರಿಗೆ ಸಿಗದ ಬಸವಣ್ಣನ ದರ್ಶನ

  ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿನ ಬಸವಣ್ಣನವರ ಐಕ್ಯ ಸ್ಥಳದ ದರ್ಶನಕ್ಕೆ ಈ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಭಕ್ತರಿಗೆ ಅವಕಾಶವಿಲ್ಲವಾಗಿದೆ. ಐಕ್ಯ ಮಂಟಪದ ದುರಸ್ತಿ ಕಾರ್ಯ ಕೈಗೊಂಡಿರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಅವಕಾಶ ಸಿಗದೆ ಹೋಗಿರುವುದರಿಂದ ಭಕ್ತರಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. 
   

 • undefined

  Karnataka Districts12, Jan 2020, 9:45 AM IST

  ಹುನಗುಂದ: 'ಸರ್ಕಾರ ಮಾತೆ ಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಲಿ'

  ಮಾತೆ ಮಹಾದೇವಿ ಅವರು ಬಸವಣ್ಣನವರ ಸಮಗ್ರ ಚಿಂತನೆಗಳನ್ನು ನಾಡಿನ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕಾಗಿದೆ. ಯುವಜನರಲ್ಲಿ ಅವರ ಕೊಡುಗೆ ಪರಿಚಯ ಮಾಡಿಕೊಡಲು ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಹುಬ್ಬಳ್ಳಿ ಜಗದ್ಗುರು ಬೃಹನ್ಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು.

 • doddanagouda-patil-vijayanand-kashappanavar

  Karnataka Districts27, Dec 2019, 12:36 PM IST

  ಹುನಗುಂದ: ದೊಡ್ಡನಗೌಡ ವಿರುದ್ಧದ ಕಾಶಪ್ಪನವರ ಆರೋಪ ಸತ್ಯಕ್ಕೆ ದೂರ

  ಹುನಗುಂದ ಹಾಗೂ ಇಳಕಲ್‌ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕ ಮಂಡಳಿ ಚುನಾವಣೆ ವಿಷಯವಾಗಿ ಶಾಸಕ ದೊಡ್ಡನಗೌಡ ಪಾಟೀಲರ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹುನಗುಂದ ತಾಲೂಕು ಬಿಜೆಪಿ ಅಧ್ಯಕ್ಷ ಮಹಾಂತಗೌಡ ಪಾಟೀಲ (ತೊಂಡಿಹಾಳ) ಹೇಳಿದ್ದಾರೆ.