ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದ ಯತ್ನಾಳ್..!
ನನ್ನನ್ನ ಹೊರಗೆ ಹಾಕುವ ಶಕ್ತಿ ಯಾರಿಗೂ ಇಲ್ಲ. ಎರಡು ವರ್ಷದ ಹಿಂದೇನೆ ಹೊರ ಹಾಕ್ತಾ ಇದ್ರು. ನನ್ನ ಹಿಂದೆ ಹಿಂದೂ ಸಮಾಜ, ಪಂಚಮಸಾಲಿ ಸಮಾಜ ಇದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ದಾವಣಗೆರೆ(ಮೇ.01): ಪಂಚಮಸಾಲಿ ಸಮಾಜ ಕೂಡಲ ಸಂಗಮ ಶ್ರೀಗಳಿಗೆ ಋಣಿಯಾಗಿರಬೇಕು. ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ. ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಹರಿಹರ ವಚನಾನಂದ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಇಂದು(ಬುಧವಾರ) ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಿನ್ನ ಬಾಯಿ ಸರಿ ಇದ್ದರೆ ನೀನೆ ಮುಖ್ಯಮಂತ್ರಿ ಆಗ್ತಿದ್ದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳ್ತಾ ಇದ್ರು. ನಾನು ಆಸ್ತಿ ಮಾಡಿಲ್ಲ, ಐಟಿ, ಇಡಿ ರೇಡ್ ಮಾಡಿದರೆ ಏನೂ ಸಿಗಲ್ಲ. ಇಡೀ ರಾಜ್ಯದಲ್ಲಿ ಮೂರು ಕುಟುಂಬಗಳು ವೀರಶೈವ ಲಿಂಗಾಯತ ಕಪಿಮುಷ್ಠಿಯಲ್ಲಿದೆ. ಇವ್ರು ಎಲ್ಲಾದರು ಹಾಸ್ಟೇಲ್ ಕಟ್ಟಿದ್ದಾರಾ?. ಎಲ್ಲಾ ರಾಜಕೀಯ ಪಕ್ಷದವರು ಪಂಚಮಸಾಲಿ ಸಮಾಜವನ್ನ ತುಳಿದಿದ್ದಾರೆ ಎಂದು ದೂರಿದ್ದಾರೆ.
ಸ್ಮಶಾನದಲ್ಲಿ ಅಡ್ಡಾಡಿದ ಸತೀಶ, ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬಂದಿದ್ಯಾಕೆ? ಯತ್ನಾಳ್ ಕಿಡಿ
ನನ್ನನ್ನ ಹೊರಗೆ ಹಾಕುವ ಶಕ್ತಿ ಯಾರಿಗೂ ಇಲ್ಲ
ನನ್ನನ್ನ ಹೊರಗೆ ಹಾಕುವ ಶಕ್ತಿ ಯಾರಿಗೂ ಇಲ್ಲ. ಎರಡು ವರ್ಷದ ಹಿಂದೇನೆ ಹೋರ ಹಾಕ್ತಾ ಇದ್ರು. ನನ್ನ ಹಿಂದೆ ಹಿಂದೂ ಸಮಾಜ, ಪಂಚಮಸಾಲಿ ಸಮಾಜ ಇದೆ. ಪಂಚಮಸಾಲಿ ಸಮಾಜಕ್ಕೆ 2d ಸಿಕ್ಕಿದೆ. ದೆಹಲಿಗೆ ಅಮಿತ್ ಶಾ ಕರೆಸಿ ಮೀಸಲಾತಿ ಬಗ್ಗೆ ಮಾತನಾಡಿದ್ರು. ಪ್ರಧಾನಿ ಡಿಕ್ಲೇರ್ ಮಾಡಿದ್ದಾರೆ ಧರ್ಮಾದಾರಿತ ಮೀಸಲಾತಿ ಕೊಡಲು ಬರಲ್ಲ. ದಲಿತ ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಂಗೆ ಮೀಸಲಾತಿ ಕೊಡ್ತಿದ್ದಾರೆ ಎಂದು ಸಿದ್ದರಾಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ
ಎಲ್ಲಿಯವರೆಗೆ ಹಾಲುಮತ 2ಎ ನಲ್ಲಿ ಇರುತ್ತೆ ಅಲ್ಲಿವರೆಗೂ ಪಂಚಮಸಾಲಿ 2ಎ ಗೆ ಹೋಗಲಾಗದು. ಸಿದ್ದರಾಮಯ್ಯ ಅದಕ್ಕೆ ಅವಕಾಶ ಕೊಡೋದಿಲ್ಲ. ಎಲ್ಲರಿಗೂ ಆಗದ ಮೇಲೆ ಯತ್ನಾಳ್ ಬಳಿ ಬಂದ್ರು, ಯತ್ನಾಳ್ ಪ್ರತಿಭಟನೆಗೆ ಬರ್ತಾರೆ ಅಂದ ತಕ್ಷಣ ಸಿದ್ದು ಅಪಾಂಟ್‌ಮೆಂಟ್ ಕೊಟ್ಟರು ಎಂದು ಹೇಳಿದ್ದಾರೆ.
ಕೂಡಲಸಂಗಮ ಸ್ವಾಮೀಜಿ ಹೆದರುತ್ತಾರೆ, ಮತ್ತೊಬ್ಬ ಸ್ವಾಮೀಜಿ ರೀತಿ ಧೈರ್ಯ ಇಲ್ಲ. ಇದು ಕಾಂಗ್ರೆಸ್ ಬಿಜೆಪಿ ಚುನಾವಣೆ ಅಲ್ಲ. ಈ ಚುನಾವಣೆಯಲ್ಲಿ ನಾವು ಬಿಜೆಪಿಗೆ ಬೆಂಬಲ ನೀಡಬೇಕು. ಎಂಪಿ ಟಿಕೆಟ್ ಕೊಟ್ಟಿಲ್ಲ ಎಂದು ಇಷ್ಟೊಂದು ಕೆಡಿಸಿದ್ದಾರೆ. ನಮಗೆ ಎಂಪಿ ಟಿಕೆಟ್ ಗಿಂತ, ಮೀಸಲಾತಿ ಮುಖ್ಯ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪಂಚಮಸಾಲಿಯವರು ಯಾರು ಮತ ನೀಡಬಾರದು ಎಂದು ತಿರ್ಮಾನ ಮಾಡಲಾಗಿದೆ. ನಾನು ಸಿಎಂ ಆಗ್ತೆನೊ ಬಿಡ್ತೆನೊ ಗೊತ್ತಿಲ್ಲ, ಆದರೆ ಮೀಸಲಾತಿ ಹೋರಾಟ ಬಿಡಲಾರೆ. ಸಮಾಜಕ್ಕೆ ನ್ಯಾಯ ಸಿಗಬೇಕಂದ್ರೆ ಕೂಡಲ ಸಂಗಮ ಸ್ವಾಮೀಜಿಯಿಂದ ಮಾತ್ರ ಸಾಧ್ಯ. ನಾವು ಯಾವತ್ತೂ ಮೋಸ ಮಾಡುವುದಿಲ್ಲ. ಆ ರೀತಿ ಮೋಸ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.