ಬೆಂಗಳೂರು, (ಮಾ.23):  ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಂದಿಸಿ, ರಜೆ ಮಂಜೂರು ಮಾಡಿದ್ದಾರೆ.

50 ವರ್ಷ ಮೀರಿದ ಹಾಗೂ ಮಧುಮೇಹ ಉಸಿರಾಟದ ತೊಂದರೆ, ಮೂತ್ರಪಿಂಡ ಕಾಯಿಲೆ ಹಾಗೂ ಇಂಥ ಇತರೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ವೇತನ ಸಹಿತ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ.

ಸೋಮವಾರ ಒಂದೇ ದಿನ 7 ಜನರಿಗೆ ಕೊರೋನಾ: 3ನೇ ಸ್ಥಾನಕ್ಕೇರಿದ ಕರ್ನಾಟಕ

ಕೋವಿಡ್19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಸಾಮಾಜಿಕ ಅಂತರವನ್ನು ಪಾಲಿಸಲು ಕರ್ನಾಟಕ ನಾಗರಿಕ ಸೇವಾ(ಕೆ.ಸಿ.ಎಸ್. ಆರ್) ನಿಯಮಗಳನ್ನು 1957ನ್ನು ಸಡಿಲಿಸಿ ರಜೆ ಮಂಜೂರು ಮಾಡಿ, ರಾಜ್ಯ ಸರ್ಕಾರ ಸೂಚನೆ ನೀಡಿದೆ.

 ದಿನಾಂಕ ಏಪ್ರಿಲ್ 04ರ ವರೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳ 114ಅಡಿಯಲ್ಲಿ ಪರಿವರ್ತಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ ಈ ಮೂಲಕ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿಯಂತ್ರಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಪ್ರಚಂಚಾದ್ಯಂತ ಕೋವಿಡ್19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಹಂತಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧವಾಗಿ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ.

ಆದರೆ ಪೋಷಕರು ಜನಸಂದಣಿ ಇರುವ ಕಛೇರಿಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸೋಂಕು ಹರಡಲು ಕ್ರಮ ಕೈಗೊಂಡಂತಾಗುವುದಿಲ್ಲ. ಮಾರ್ಚ್ 23,24, 26 ಹಾಗೂ 27ರಂದು ಸರ್ಕಾರಿ ರಜೆಯೆಂದು ಘೋಷಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಲು ತಾವು ಅನುವು ಮಾಡಿಕೊಡುವಂತೆ ಎಂದು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ ಗುರುಸ್ವಾಮಿ ಮನವಿ ಮಾಡಿಕೊಂಡಿದ್ದರು.