ಬೆಂಗಳೂರು, (ಮಾ.23): ರಾಜ್ಯದಲ್ಲಿ ಒಂದೇ ದಿನ ಬರೊಬ್ಬರಿ 7 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ  ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮಾರ್ಚ್ 21ರಂದು 5, ಮಾರ್ಚ್ 22ರಂದು 6 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದ್ರೆ, ಇವತ್ತು (ಮಾರ್ಚ್ 23) ಒಂದೇ  ಹೊಸ 7 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ.

ಈ ಮೂಲಕ ಕರುನಾಡಲ್ಲಿ ಕೊರೋನಾ ಸೋಂಕಿತ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕರುನಾಡು 3ನೇ ಸ್ಥಾನಕ್ಕೇರಿದೆ.ಮಹಾರಾಷ್ಟ್ರ (71) ಮೊದಲ ಸ್ಥಾನದಲ್ಲಿದ್ರೆ, ಕೇರಳ (60) 2ನೇ ಸ್ಥಾನದಲ್ಲಿದೆ.

ಕೊರೋನಾ ವೈರಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನ ನೋಡಿದ್ರೆ ಪರಿಸ್ಥಿತಿ ಯಾಕೋ ಕೈಮೀರುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರುವುದು ಸೂಕ್ತ.

ಮನೆಯಿಂದ ಯಾರು ಹೊರಗಡೆ ಬರಬೇಡಿ, ಅನಗತ್ಯವಾಗಿ ಎಲ್ಲೂ ಸಂಚರಿಸಬೇಡಿ ಎಂದು ರಾಜ್ಯ ಸರ್ಕಾರ ಬೊಬ್ಬೆ ಹೊಡೆದುಕೊಳ್ಳುತ್ತಿದೆ. ಆದರೂ ಜನ ಅದ್ಯಾವುದನ್ನ ಲೆಕ್ಕಿಸದೇ ಕೊರೋನಾ ವೈರಸ್ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೊಂದಿನ ಊಹಿಸಲು ಸಾಧ್ಯವಾಗದಷ್ಟು ಪರಿಸ್ಥಿತಿ ಕೈಮೀರಿಹೋಗುವುದರಲ್ಲಿ ಅನುಮಾನವೇ ಇಲ್ಲ. 

ಯಾವುದಕ್ಕೂ ಜನರು ಒಮ್ಮೆ ಯೋಚಿಸುವುದು ಒಳ್ಳೆಯದು. ಸರ್ಕಾರಕ್ಕೆ ಜನರ ಸರ್ಕಾರ ಅತ್ಯಗತ್ಯ. ಇಲ್ಲವಾದಲ್ಲಿ ಕೊರೋನಾ ವೈರಸ್ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಆದಷ್ಟೂ ಮನೆಯಲ್ಲಿ ಇರಿ.