ತಿರುವನಂತಪುರಂ(ಮಾ.29): ಮಾರ್ಚ್ 13ರಂದು ನಡೆದ ಕೇರಳ ಅಸೆಂಬ್ಲಿ ಸೆಷನ್‌ನಲ್ಲಿ ಯುಡಿಎಫ್‌ ಶಾಸಕರು ಪಿಣರಾಯ್ ವಿಜಯನ್ ಅವರು ಕೊರೋನಾ ವಿರುದ್ಧ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕಾಸರಗೋಡು ಶಾಸಕ ಮುಸ್ಲಿಂಲೀಗ್ ಸದಸ್ಯ ಎನ್‌.ಎ. ನೆಲ್ಲಿಕ್ಕುನ್ನು ಅವರು ಸಹ ಶಾಸಕರೊಂದಿಗೆ ಕೊರೋನಾ ಬಗ್ಗೆ ಜನರಿಗೆ ಭೀತಿ ಹುಟ್ಟಿಸಿರುವ ಬಗ್ಗೆ ತರಾಟೆ ಮಾಡಿದ್ದರು.

ಆದರೆ ಒಂದು ವಾರ ನಂತರ ಶಾಸಕ ನೆಲ್ಲಿಕ್ಕುನ್ನು ಹಾಗೂ ಅವರ ಪಕ್ಷದ ಸಹ ಪ್ರವರ್ತಕ, ಮಂಜೇಶ್ವರದ ಎಂ.ಸಿ. ಕಮರುದ್ದೀನ್‌ಗೆ ಹೋಂ ಕ್ವಾರೆಂಟೈನ್ ವಿಧಿಸಲಾಗಿತ್ತು. ವ್ಯಕ್ತಿ ಸಮಾನ್ಯ ಆಟೋ ಡಿಕ್ಷಾ ಡ್ರೈವರ್ ಎಂದು ಬಿಂಬಿಸಲು ಪ್ರಯತ್ನಿಸಿದರೂ, ಆತ ದುಬೈಗೆ ಭೇಟಿ ನೀಡುತ್ತಿದ್ದ ವ್ಯಕ್ತಿ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಕೊರೋನಾಗೆ ರಾಜಮನೆತನದ ಮೊದಲ ಬಲಿ, ರಾಜಕುಮಾರಿ ಸಾವು!

ಈ ಇಬ್ಬರೂ ಮುಖಂಡರೂ ಕೊರೋನಾ ಪಾಸಿಟಿವ್ ಆದಂತಹ 47 ವರ್ಷದ ವ್ಯಕ್ತಿಯನ್ನು ಸಂಪರ್ಕ ಮಾಡಿದವರಾಗಿದ್ದರು. ಕಳೆದ 100 ದಿನಗಳಲ್ಲಿ ಕನಿಷ್ಠ 6 ಬಾರಿ ದುಬೈಗೆ ಹೋಗಿ ಬಂದವರಾಗಿದ್ದರು ಆ ವ್ಯಕ್ತಿ.  ಆ ನಂತರ ಒಂದೇ ವಾರದಲ್ಲಿ ಕೇರಳದಲ್ಲಿ ಅತ್ಯಂತ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು ಕಾಸರಗೋಡಿನಲ್ಲಿ. ಆತ ಕೇರಳದಲ್ಲಿ ಕಂಡುಬಂದ ಮೂರನೇ ಕೊರೋನಾ ಪಾಸಿಟಿವ್ ವ್ಯಕ್ತಿಯಾಗಿದ್ದ.

ಆತ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ. ಫುಟ್‌ಬಾಲ್ ಮ್ಯಾಚ್‌, ಮದುವೆ ಕಾರ್ಯಕ್ರಮದಲ್ಲೂ ಭಾಗಿಯಾಗಿ ಸುಮಾರು 1500 ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದ.

ಮಾರ್ಚ್ 25ರಂದು ಕಾಸರಗೋಡು ದೇಶದಲ್ಲೇ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾದ ಜಿಲ್ಲೆಯಾಯಿತು. ಸುಮಾರು 44 ಕೊರೋನಾ ಪಾಸಿಟಿವ್ ಪ್ರಕರಣಗಳು ಕಾಸರಗೋಡಿನಲ್ಲಿ ಕಂಡು ಬಂತು.

ಬಡವನಾದರೇನು, ಸಿರಿವಂತನಾದರೇನು, ಬ್ರಿಟನ್ ರಾಜಕುಮಾರನನ್ನೂ ಬಿಡಲಿಲ್ಲ ಕೊರೋನಾ

ಕಳೆದ ಒಂದು ತಿಂಗಳಿನಿಂದ ನಮ್ಮ ಕೇಬಲ್ ನೆಟ್‌ವರ್ಕ್ ಮೂಲಕ ನಾವು ಜನರಿಗೆ ವಿವರಿಸುತ್ತಲೇ ಬಂದಿದ್ದೇವೆ. ಆರೆ ಜನ ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಸ್ಥಳೀಯ ಚಾನಲ್‌ನ ಪತ್ರಕರ್ತರೊಬ್ಬರು ಭಾವುಕವಾಗಿ ನುಡಿದಿದ್ದಾರೆ.

ಜಿಲ್ಲಾಡಳಿತ ತ್ವರಿತ ಕ್ರಮಗಳನ್ನು ಕೈಗೊಂಡರೂ ಅಷ್ಟು ಬೇಗನೆ ಜನರು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಲಿಲ್ಲ. ಆದರೆ ಮಾರ್ಚ್ 21ರಿಂದ ಕಾಸರಗೋಡು ಸಂಪೂರ್ಣ ಲಾಕ್‌ಡೌನ್ ಆಯಿತು. ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಯಿತು.

ಇಬ್ಬರ ಪಾಸ್‌ಪೋರ್ಟ್‌ಗಳನ್ನು ರದ್ದು ಮಾಡಿ ಇತರರ ಜೀವಕ್ಕೂ ಅಪಾಯ ತಂದಿರುವುದಕ್ಕಾಗಿ ಅವರು ಮತ್ತೆ ವಿದೇಶಕ್ಕೆ ಹೋಗದಂತೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ ಸಜಿತ್ ಬಾಬು ಖಡಕ್ ವಾರ್ನಿಂಗ್ ಕೊಟ್ಟಿದ್ದರು.

ಚೀನಾ ಕೊರೋನಾಗೆ ಬ್ರೇಕ್ ಹಾಕಿದ್ದು ಹಾಗಿಗಲ್ಲ, ಅದರ ಹಿಂದಿದೆ ಈ ಟೆಕ್‌ ಅಸ್ತ್ರ!

ನಂತರದಲ್ಲಿ ಐಜಿ ವಿಜಯ್‌ ಶೇಖರ್ ಅವರು ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡು ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸಿದರು.  ರಸ್ತೆಯಲ್ಲಿ ಕಂಡವರು ಜೈಲಿನಲ್ಲಿರಬೇಕಾಗುತ್ತದೆ ಎಂಬ ಅವರ ಕಟ್ಟುನಿಟ್ಟಿನ ಸೂಚನೆಗೆ ಕಾಸರಗೋಡು ಸ್ತಬ್ಧವಾಯಿತು. ಎಲ್ಲಾ ಸ್ವಯಂ ಸೇವ ಸಂಘಟನೆಗಳನ್ನೂ ನಿಷೇಧಿಸಲಾಯಿತು. ಅಂತಹ ಸ್ವಯಂ ಸೇವಕರ ಅಗತ್ಯವಿದ್ದರೂ ಅದನ್ನೂ ಜಿಲ್ಲಾಡಳಿತದ ಮೂಲಕವೇ ಒದಗಿಸಲು ತೀರ್ಮಾನವಾಗಿತ್ತು.

ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣ ಚೀನಾದಿಂದ ಮರಳಿದ ವಿದ್ಯಾರ್ಥಿಗೆ ಕಾಂಞಂಗಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ವಿದ್ಯಾರ್ಥಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕೇರಳದಲ್ಲಿ ಕಂಡು ಬಂದ ಪ್ರಕರಣದಲ್ಲಿ 41 ಜನರೂ ವಿದೇಶದಲ್ಲಿದ್ದವರಾಗಿದ್ದಾರೆ. ಅವರಲ್ಲೂ ಹೆಚಚ್ಚಿನವರು ಕಾಸರಗೋಡು ನಗರಪ್ರದೇಶದವರಾಗಿದ್ದಾರೆ. ಹೆಚ್ಚಿನವರು ಮಂಗಳೂರು, ಮುಂಬೈ ಹಾಗೂ ದುಬೈಗೆ ಸಂಪರ್ಕ ಹೊಂದಿದವರಾಗಿದ್ದರು.