ಬಡವನಾದರೇನು, ಸಿರಿವಂತನಾದರೇನು, ಬ್ರಿಟನ್ ರಾಜಕುಮಾರನನ್ನೂ ಬಿಡಲಿಲ್ಲ ಕೊರೋನಾ
ಇಂಗ್ಲೆಂಟ್‌ನಲ್ಲಿ ಕೊರೋನಾ ಅಬ್ಬರ| ರಾಜಮನೆತನವನ್ನೂ ಬಬಿಡದ ಮಾರಕ ವೈರಸ್| ಪ್ರಿನ್ಸ್ ಚಾರ್ಲ್ಸ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢ
ಪುಟ್ಟ ರಾಷ್ಟ್ರ ಇಟಲಿಯಲ್ಲಿ 6 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಅತ್ತ ಇಂಗ್ಲೆಂಡ್‌ನಲ್ಲೂ ಕೊರೋನಾ ರುದ್ರ ನರ್ತನ ಆರಂಭವಾಗಿದ್ದು, ಈಗಾಗಲೇ ನಾಲ್ನೂರು ಮಂದಿಯನ್ನು ಬಲಿ ಪಡೆದಿದೆ.
ಸದ್ಯ ಕೊರೋನಾ ಬ್ರಿಟನ್‌ನ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಅವರಲ್ಲೂ ಕಾಣಿಸಿಕೊಂಡಿದೆ.
ಹೌದು ಈಗಾಗಲೇ ಇಲ್ಲಿನ ರಾಣಿ ಎಜಿಜಬೆತ್ ಕೊರೋನಾ ಭೀತಿಯಿಂದ ಅರಮನೆ ತೊರೆದಿದ್ದಾರೆ.
ಹೀಗಿರುವಾಗ 71 ವರ್ಷದ ಪ್ರಿನ್ಸ್ ಚಾರ್ಲ್ಸ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ಅವರ ಆರೋಗ್ಯ ಸಂಬಂಧಿತ ಮಾಹಿತಿ ಒದಗಿಸಿರುವ ಅಧಿಕಾರಿಗಳು ಪ್ರಿನ್ಸ್ ಚಾರ್ಲ್ಸ್ ಆರೋಗ್ಯವಾಗೇ ಇದ್ದಾರೆ. ಕೊರೋನಾ ಸಂಬಂಧಿತ ಕೆಲ ಲಕ್ಷಣಗಳು ಅವವರನ್ನು ಬಾಧಿಸುತ್ತಿವೆ. ಅವರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಿನ್ಸ್ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾರಿಗೂ ಕೊರೋನಾ ಪರೀಕ್ಷೆ ನಡೆಸಿದ್ದು, ನೆಗೆಟಿವ್ ಎಂಬ ವರದಿ ಬಂದಿದೆ.
ಸದ್ಯ ಪ್ರಿನ್ಸ್ ಚಾರ್ಲ್ಸ್ ಹಾಗೂ ಅವರ ಪತ್ನಿ ಐಸೋಲೇಷನ್‌ನಲ್ಲಿದ್ದಾರೆ. ರಾಣಿ ಎಲಿಜಬೆತ್‌ರವರ ಹಿರಿಯ ಪುತ್ರರಾಗಿರುವ ಪ್ರಿನ್ಸ್ ಚಾರ್ಲ್ಸ್ ರಾಜಮನೆತನದ ಮುಂದಿನ ಉತ್ತರಾಧಿಕಾರಿಯಾಗಿದ್ದಾರೆ.