ವಿದೇಶಗಳಿಗೆ ಲಸಿಕೆ, ನಮ್ಮವರಿಗ್ಯಾವಾಗ..? ಕೇಂದ್ರಕ್ಕೆ ಕೋರ್ಟ್ ತರಾಟೆ
ಕೊರೋನಾ ಲಸಿಕೆ ವಿಚಾರದಲ್ಲಿ ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತರಾಟೆ | ಲಸಿಕೆ ದಾನ, ಮಾರಾಟವೇ ಆಯ್ತು, ನಮ್ಮವರಿಗೆ ಯಾವಾಗ..?
ದೆಹಲಿ(ಮಾ.05): ಕೇಂದ್ರ ಸರ್ಕಾರ ವಿದೇಶಗಳಿಗೆ ಉಚಿತ ಕೊರೋನಾ ಲಸಿಕೆ, ಲಸಿಕೆ ಮಾರಟ ಮಾಡುವುದರಲ್ಲಿಯೇ ಬ್ಯುಸಿಯಾಗಿದೆ. ನಮ್ಮವರಿಗೆ ಲಸಿಕೆ ನೀಡುವುದು ಯಾವಾಗ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.
ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಇಲ್ಲಿ ತರ್ತು ಅಗತ್ಯ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದು ಹೇಳಿದೆ.
ಮನೆಯಲ್ಲೇ ವ್ಯಾಕ್ಸಿನ್ ಪಡೆದ ಸಚಿವ: ಯಾರ ಮನೆಗೂ ಹೋಗಿ ಲಸಿಕೆ ನೀಡುವಂತಿಲ್ಲ ಎಂದ ಸುಧಾಕರ್
ಪಸ್ತುತ ದೇಶದಲ್ಲಿ ಯಾರ್ಯಾರಿಗೆ ಕೊರೋನಾ ಲಸಿಕೆ ನೀಡಬಹುದು ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಕಠಿಣ ನಿಲುವುಗಳಲ್ಲಿರುವುದಕ್ಕೆ ಕಾರಣ ಹೇಳುವಂತೆ ಕೋರ್ಟ್ ಕೇಳಿದೆ. ಸರ್ಕಾರ ಲಸಿಕೆ ದಾನ ಮಾಡುತ್ತಿದೆ, ಅಥವಾ ವಿದೇಶಕ್ಕೆ ಮಾರಾಟ ಮಾಡುತ್ತಿದೆ, ನಮ್ಮ ಜನರಿಗೆ ಲಸಿಕೆ ನೀಡುವುದು ಯಾವಾಗ ಎಂದು ಪ್ರಶ್ನಿಸಿದೆ.
ಎರಡನೇ ಹಂತದ ಲಸಿಕೆ ಹಂಚಿಕೆ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 16ಕ್ಕೆ ಆರಂಭವಾದ ಮೊದಲ ಹಂತದ ಲಸಿಕೆ ಹಂಚಿಕೆಯಲ್ಲಿ ಫ್ರಂಟ್ಲೈನ್ ವರ್ಕರ್ಸ್ಗೆ ಲಸಿಕೆ ನೀಡಲಾಗಿತ್ತು.
ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!
ಕೇಂದ್ರ ಸಲ್ಲಿಸಬೇಕಾದ ಅಫಿಡವಿಟ್‌ನಲ್ಲಿ ಲಸಿಕೆ ನೀಡಲು ಅಂತಹ ವರ್ಗೀಕರಣ ಮಾಡಿರುವ ತಾರ್ಕಿಕತೆಯನ್ನು ಬಹಿರಂಗಪಡಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.