ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!
ಕೊರೋನಾ ವೈರಸ್ ವಿರುದ್ಧ ತನ್ನ ಪ್ರಜೆಗಳ ರಕ್ಷಣೆಗಾಗಿ ಶ್ರೀಲಂಕಾ ಸರ್ಕಾರವು ಭಾರತದ ಕೋವಿಶೀಲ್ಡ್ ಲಸಿಕೆಯ ಮೊರೆ| ಚೀನಾದ ಲಸಿಕೆ ಬಿಟ್ಟು ಭಾರತದ ಕೋವಿಶೀಲ್ಡ್ ಖರೀದಿಸಿದ ಶ್ರೀಲಂಕಾ
ಕೊಲಂಬೋ(ಫೆ.24): ಕೊರೋನಾ ವೈರಸ್ ವಿರುದ್ಧ ತನ್ನ ಪ್ರಜೆಗಳ ರಕ್ಷಣೆಗಾಗಿ ಶ್ರೀಲಂಕಾ ಸರ್ಕಾರವು ಭಾರತದ ಕೋವಿಶೀಲ್ಡ್ ಲಸಿಕೆಯ ಮೊರೆ ಹೋಗಿದೆ. ತನ್ಮೂಲಕ ಲಸಿಕೆಯ 3ನೇ ಹಂತದ ಪರೀಕ್ಷೆ ವರದಿ ಸಲ್ಲಿಸದ ಚೀನಾದ ಕೊರೋನಾ ಲಸಿಕೆಯನ್ನು ಖರೀದಿಸದಿರುವ ಸುಳಿವನ್ನು ಶ್ರೀಲಂಕಾ ವ್ಯಕ್ತಪಡಿಸಿದೆ.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಶ್ರೀಲಂಕಾದ ಸಚಿವ, ತಮ್ಮ ಸರ್ಕಾರ ಒಟ್ಟಾರೆ 1.35 ಕೋಟಿ ಡೋಸ್ನಷ್ಟುಕೋವಿಶೀಲ್ಡ್ ಲಸಿಕೆಗಳನ್ನು ಖರೀದಿಸಿದ್ದು, ಈ ಪೈಕಿ 1 ಕೋಟಿ ಲಸಿಕೆಯನ್ನು ಪುಣೆಯ ಸೀರಂ ಇನ್ಸ್ಟಿಟ್ಯೂಟ್ನಿಂದ ಮತ್ತು 35 ಲಕ್ಷ ಲಸಿಕೆಗಳನ್ನು ಬ್ರಿಟನ್ನಿಂದ ತರಿಸಿಕೊಂಡಿದೆ.
ಫೆ.1ರಂದು ಶ್ರೀಲಂಕಾಕ್ಕೆ ಚೀನಾ 3 ಲಕ್ಷ ಡೋಸ್ನಷ್ಟುಲಸಿಕೆ ಪೂರೈಸಲು ಮುಂದಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಭಾರತ ಸರ್ಕಾರ 5 ಲಕ್ಷ ಡೋಸ್ನಷ್ಟುಲಸಿಕೆಯನ್ನು ಉಡುಗೊರೆಯಾಗಿ ನೀಡಿತ್ತು.