ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್‌..!

ದೇಶದಲ್ಲೀಗ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಪ್ರತಿ 11 ದಿನಗಳಿಗೊಮ್ಮೆ ದ್ವಿಗುಣವಾಗುತ್ತಿದೆ. ಲಾಕ್‌ಡೌನ್‌ ಜಾರಿಗೊಳಿಸುವುದಕ್ಕಿಂತ ಮುಂಚೆ ಇದು 3.4 ದಿನಗಳಿಗೆ ದ್ವಿಗುಣವಾಗುತ್ತಿತ್ತು. ಹೀಗಾಗಿ ಲಾಕ್‌ಡೌನ್‌ ನಂತರ ಉತ್ತಮ ಪ್ರಗತಿ ಸಾಧಿಸಿದಂತಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 

COVID19 Cases to be doubled in next 11 days in india

ನವದೆಹಲಿ(ಮೇ.01): ದೇಶದಲ್ಲೀಗ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಪ್ರತಿ 11 ದಿನಗಳಿಗೊಮ್ಮೆ ದ್ವಿಗುಣವಾಗುತ್ತಿದೆ. ಲಾಕ್‌ಡೌನ್‌ ಜಾರಿಗೊಳಿಸುವುದಕ್ಕಿಂತ ಮುಂಚೆ ಇದು 3.4 ದಿನಗಳಿಗೆ ದ್ವಿಗುಣವಾಗುತ್ತಿತ್ತು. ಹೀಗಾಗಿ ಲಾಕ್‌ಡೌನ್‌ ನಂತರ ಉತ್ತಮ ಪ್ರಗತಿ ಸಾಧಿಸಿದಂತಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇನ್ನು, ಕೊರೋನಾದಿಂದ ಸಾವಿಗೀಡಾಗುವವರ ಸಂಖ್ಯೆ ಸದ್ಯ ಶೇ.3.2ರಷ್ಟಿದೆ. ಮೃತರಲ್ಲಿ ಶೇ.14ರಷ್ಟುಜನರು 45 ವರ್ಷದ ಒಳಗಿನವರು, 34.8ರಷ್ಟುಜನರು 45-60 ವರ್ಷದವರು ಹಾಗೂ ಶೇ.51.2ರಷ್ಟುಜನರು 60 ವರ್ಷಕ್ಕಿಂತ ಮೇಲ್ಪಟ್ಟವರು.

ರೆಡಿಯಾಯ್ತು ದೇಶದ ಮೊದಲ ಕೊರೋನಾ ಮಾತ್ರೆ, ಪರೀಕ್ಷೆಗೆ ಕೇಂದ್ರ ಸಮ್ಮತಿ: ಪ್ರಯೋಗವಷ್ಟೇ ಬಾಕಿ

ಕೊರೋನಾದಿಂದ ಗುಣಮುಖರಾಗುವವರ ಸಂಖ್ಯೆ ಕಳೆದ 14 ದಿನಗಳಲ್ಲಿ ಶೇ.13ರಿಂದ ಶೇ.25ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 8,324 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ವಿಫಲ, ಸೋಂಕಿತ ಸಾವು

ಕೊರೋನಾ ಸೋಂಕಿತರ ಸಂಖ್ಯೆ ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಒಡಿಶಾ, ರಾಜಸ್ಥಾನ, ತಮಿಳುನಾಡು ಹಾಗೂ ಪಂಜಾಬ್‌ನಲ್ಲಿ 11ರಿಂದ 20 ದಿನಗಳಿಗೆ ದ್ವಿಗುಣವಾಗುತ್ತಿದೆ. ಕರ್ನಾಟಕ ಕೇರಳ, ಲಡಾಖ್‌, ಹರ್ಯಾಣ, ಉತ್ತರಾಖಂಡದಲ್ಲಿ 20ರಿಂದ 40 ದಿನಗಳಿಗೆ ದ್ವಿಗುಣವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios