ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ವಿಫಲ, ಸೋಂಕಿತ ಸಾವು

ಕೊರೋನಾ ಸೋಂಕಿತರ ಜೀವ ಉಳಿಸಲು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ತುದಿಗಾಲಿನಲ್ಲಿ ನಿಂತಿರುವಾಗಲೇ, ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

 

COVID19 positive patient in maharastra dies after plasma therapy fails

ಮುಂಬೈ(ಮೇ.01): ಕೊರೋನಾ ಸೋಂಕಿತರ ಜೀವ ಉಳಿಸಲು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ತುದಿಗಾಲಿನಲ್ಲಿ ನಿಂತಿರುವಾಗಲೇ, ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಕೊರೋನಾಗೆ ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಪಡೆದು ದೆಹಲಿಯ ರೋಗಿಯೊಬ್ಬರು ಗುಣಮುಖರಾದ ಬೆನ್ನಲ್ಲೇ, ಮೊದಲ ಸಾವಿನ ಸುದ್ದಿಯೂ ಬಂದಿದೆ. ಕೊರೋನಾಗೆ ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವೂ ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!

ಏ.20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

ಮೃತ ರೋಗಿ ತನಗೆ ಸೋಂಕಿನ ಲಕ್ಷಣಗಳಾದ ಗಂಟಲು ಉರಿ, ಒಣ ಕೆಮ್ಮು ಹಾಗೂ ಜ್ವರ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಿದ್ದರು. ಹೀಗಾಗಿ ಶ್ವಾಸಕೋಶದ ಸೋಂಕು ಹಾಗೂ ನ್ಯುಮೋನಿಯಾ ಬೇಗ ಉಲ್ಬಣಗೊಂಡವು. ಏ.25ರಂದು ಇವರಿಗೆ ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ 200 ಎಂ.ಎಲ್‌. ಪ್ಲಾಸ್ಮಾ ನೀಡಲಾಗಿತ್ತು. ಜೊತೆಗೆ ಆ್ಯಂಟಿಬಯಾಟಿಕ್‌ ನೀಡಲಾಗುತ್ತಿತ್ತು. ಆದರೂ ಆರೋಗ್ಯ ಸುಧಾರಿಸದೆ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ.

Latest Videos
Follow Us:
Download App:
  • android
  • ios