Asianet Suvarna News Asianet Suvarna News

ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದ್ರೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ರಾಜಕಾರಣಿಗಳು

ಕೊರೋನಾವೈರಸ್‌ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಇಡೀ ಜಗತ್ತು ಹೇಳುತ್ತಿದೆ. ಆದರೆ, ನಮ್ಮ ರಾಷ್ಟ್ರಪತಿ ಕೋವಿಂದ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಅಮೆರಿಕದ ಅಧ್ಯಕ್ಷ ಟ್ರಂಪ್‌, ಇಂಗ್ಲೆಂಡ್‌ ಪ್ರಧಾನಿ ಜಾನ್ಸನ್‌ರಂಥವರೇ ವ್ಯತಿರಿಕ್ತವಾಗಿ ನಡೆದುಕೊಂಡು ಜನರಿಗೆ ಕೆಟ್ಟಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

corona outbreak India tightens social distancing rules to combat covid 19
Author
Bengaluru, First Published Mar 29, 2020, 12:13 PM IST

ದೇಶವನ್ನು 3 ವಾರಗಳ ಕಾಲ ಲಾಕ್‌ಡೌನ್‌ ಮಾಡುತ್ತೇವೆ, ಎಲ್ಲರೂ ನಿಮ್ಮನಿಮ್ಮ ಮನೆಯೊಳಗೇ ಇರಿ ಎಂದು ಆದೇಶ ನೀಡುವುದು ಸರ್ಕಾರಕ್ಕೆ ಸುಲಭ. ಆದೇಶ ನೀಡುವವರು ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ತಲೆಕೆಡಿಸಿಕೊಳ್ಳದೆ ಇದ್ದರೆ ಇಂತಹ ಆದೇಶ ನೀಡುವುದು ಇನ್ನೂ ಸುಲಭ.

ಈ ಅವಧಿಯಲ್ಲಿ ಜನರು ತುರ್ತು ಅಗತ್ಯಗಳಿಗೆ ಏನು ಮಾಡುತ್ತಾರೆ, ಬದುಕು ಹೇಗೆ ಸಾಗುತ್ತದೆ, ಅಗತ್ಯವಿರುವವರು ಆಸ್ಪತ್ರೆಗಳಿಗೆ ಹೇಗೆ ಹೋಗುತ್ತಾರೆ, ಬಡವರು ಹೇಗೆ ಹೊಟ್ಟೆತುಂಬಿಸಿಕೊಳ್ಳುತ್ತಾರೆ ಎಂಬುದನ್ನೆಲ್ಲ ಸರ್ಕಾರ ಯೋಚಿಸದೆ ಹೋದರೆ ಆದೇಶ ಕೊಟ್ಟು ಸುಮ್ಮನಿದ್ದರಾಯಿತು. ಕೆಲವು ನಗರಗಳಲ್ಲಿ 15,000 ಲೀಟರ್‌ ಹಾಲು, 11,000 ಕೆ.ಜಿ. ಹಣ್ಣು, ತರಕಾರಿಗಳು ವಿತರಣೆಯಾಗದೇ ಒಂದೇ ದಿನದಲ್ಲಿ ಹಾಳಾದವು.

ಆದರೆ ಬೆಂಗಳೂರಿನಲ್ಲಿ ಮಾತ್ರ ಸಂಪೂರ್ಣ ಬಂದ್‌ ಇದ್ದರೂ ಹಾಲು ಸರಿಯಾಗಿ ವಿತರಣೆಯಾಯಿತು. ಒಂದು ಒಳ್ಳೆಯ ಸುದ್ದಿ ಏನೆಂದರೆ, ದೇಶದ ಎಲ್ಲಾ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಪ್ರತಿಗಳು ರೋಗಿಗಳಿಗೆ ಓದಲು ಸಿಕ್ಕವು.

ಲಾಠಿ ಹಿಡಿದ ಖಡಕ್ ಪೊಲೀಸರಿಂದ ಮಾನವೀಯ ಕೆಲಸ..! ಸೌಟು ಹಿಡಿದ ಡಿಸಿಪಿ

ಕೊರೋನಾವೈರಸ್ಸಿನ ಈ ದುರ್ಭರ ಕಾಲದಲ್ಲಿ ಕೆಲ ನಾಯಕರು ಹಾಕಿಕೊಟ್ಟ ಕೆಟ್ಟ ಉದಾಹರಣೆಗಳು ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದವು. ಭಾರತದ ಮೊದಲ ಪ್ರಜೆಯಾದ ರಾಮನಾಥ್‌ ಕೋವಿಂದ್‌ ಸಂಸತ್‌ ಸದಸ್ಯರ ಜತೆ ಕೈಕುಲುಕುತ್ತಾ ಉಪಾಹಾರ ಕೂಟ ನಡೆಸಿದರು. ಒಂದು ದಿನ ದಕ್ಷಿಣ ಭಾರತದ ಸಂಸದರಿಗೆ ರಾಷ್ಟ್ರಪತಿಗಳು ತಮ್ಮ ಭವನದಲ್ಲಿ ಮೆಗಾ ಉಪಾಹಾರ ಕಾರ‍್ಯಕ್ರಮ ಏರ್ಪಡಿಸಿದ್ದರು.

ಮತ್ತೊಂದು ದಿನ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಸಂಸದರರಿಗೆ ಈ ಸವಲತ್ತು ಸಿಕ್ಕಿತ್ತು. ರಾಷ್ಟ್ರಪತಿ ಭವನದ ಸಾಮಾನ್ಯ ಔತಣ ಕೂಟ ಎಂದರೆ ಕನಿಷ್ಠ 90 ಮಹಿಳೆಯರು ಮತ್ತು ಪುರುಷರು ಒಟ್ಟುಗೂಡುತ್ತಾರೆ, ಪರಸ್ಪರ ಸಂವಹನ ನಡೆಸುತ್ತಾರೆ. ಇದು ಸಾಮಾಜಿಕ ಅಂತರಕ್ಕೆ ತದ್ವಿರುದ್ಧವಾಗಿದೆ. ಸಾಲದೆಂಬಂತೆ ಔತಣಕೂಟದ ಫೋಟೋಗಳನ್ನು ನಾಗರಿಕರನ್ನು ಉತ್ತೇಜಿಸಲು ಬಿಡುಗಡೆ ಮಾಡಲಾಯಿತು.

ರಾಷ್ಟ್ರಪತಿಯೊಂದಿಗೆ ಚುನಾಯಿತ ಸದಸ್ಯರು ಯಾವ ಅಂತರವನ್ನೂ ಕಾಯ್ದುಕೊಳ್ಳದೆ ಬಹಳ ಹತ್ತಿರದಿಂದ ವ್ಯವಹರಿಸಿದ್ದನ್ನು ಆ ಫೋಟೋಗಳೇ ತೋರಿಸಿದವು. ಇದನ್ನು ಶಶಿ ತರೂರ್‌ ‘ಇದು ಅತ್ಯಂತ ಆಹ್ಲಾದಕರ ಸಂಬಂಧ’ ಎಂದು ಬಣ್ಣಿಸಿದ್ದಾರೆ. ಭಾರತದ ರಾಷ್ಟ್ರಪತಿ ಮತ್ತು ಸಂಸದರು ರೂಪಿಸಿದ ಅತ್ಯಂತ ಅಹಿತಕರ, ಕೆಟ್ಟಉದಾಹರಣೆ ಇದು. ಆದರೆ, ಸ್ಮೃತಿ ಇರಾನಿ ಎಲ್ಲಾ ಪ್ರೊಟೋಕಾಲ್‌ಗಳನ್ನೂ ಅನುಸರಿಸಲಾಗಿದೆ ಎಂದು ಹೇಳಿದರು.

ಹಾಗಿದ್ದರೆ ಈ ವೈರಸ್‌ ಕೂಡ ಪ್ರೊಟೋಕಾಲನ್ನು ಅನುಸರಿಸುತ್ತಾ? ನಮ್ಮ ನಾಯಕರು ಏಕೆ ಪರಿಸ್ಥಿತಿಯನ್ನು ಇನ್ನಷ್ಟುಹದಗೆಡಿಸುತ್ತಿದ್ದಾರೆ? ನಂತರ ಪ್ರಧಾನ ಮಂತ್ರಿಗಳು ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿಯನ್ನು ಶ್ಲಾಘಿಸಬೇಕೆಂದು ಕರೆ ಕೊಟ್ಟರು. ಆದರೆ, ಅದರಿಂದ ಜನಸಂದಣಿಯನ್ನು ನಿಯಂತ್ರಿಸಬೇಕೆಂಬ ಮೂಲಭೂತ ಮುನ್ನೆಚ್ಚರಿಕಾ ಕ್ರಮವೇ ಅಸ್ತವ್ಯಸ್ತವಾಯಿತು.

ಉದ್ಘಾಟನೆಯಾಗದ ಮೆಡಿಕಲ್ ಕಾಲೇಜು ಈಗ ಕೊರೋನಾ ಆಸ್ಪತ್ರೆ..!

ಗುಂಪುಗೂಡಿ ಜನರು ಬೀದಿಯಲ್ಲಿ ಕುಣಿದರು, ಅಡುಗೆ ಮನೆಯಲ್ಲಿದ್ದ ಪಾತ್ರೆಗಳನ್ನು ಬೀದಿಗೆ ತಂದು ಬಡಿದರು, ಅವರ ಭಕ್ತಿಗೆ ಪುರಾವೆಯಾಗಿ ರಾಷ್ಟ್ರಧ್ವಜವನ್ನೂ ತಂದರು. ಮೋದಿ ಏನು ಹೇಳಿದರೋ ಅಷ್ಟುಮಾಡಿ ಜನರು ಸುಮ್ಮನಾಗಿದ್ದರೆ ಏನೂ ಸಮಸ್ಯೆಯಿರಲಿಲ್ಲ. ಆದರೆ ಜನರು ಸಾಮೂಹಿಕ ಸಂಭ್ರಮಾಚರಣೆ ನಡೆಸಿ ಕೊರೋನಾ ಹಬ್ಬಲು ಏನಾಗಬೇಕಿತ್ತೋ ಅದನ್ನು ಮಾಡಿದರು.

ಸಾಮಾಜಿಕ ಅಂತರವು ಒಂದು ದಿನದ ಕರೆಯಾದಾಗ, ರಾಜಕೀಯ ನಾಯಕರು ಸಾಮಾಜಿಕ ಬೆರೆಯುವಿಕೆಯನ್ನು ಉತ್ತೇಜಿಸುತ್ತಾರೆ.

ಉತ್ತರ ಪ್ರದೇಶ ಸರ್ಕಾರ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬೇಜವಾಬ್ದಾರಿತನ ಮೆರೆಯಿತು. ಅಯೋಧ್ಯೆಯ ಮುಖ್ಯ ಆರೋಗ್ಯ ಅಧಿಕಾರಿ, ಗುಂಪುಗೂಡುವಿಕೆಯ ವಿರುದ್ಧ ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಧೈರ‍್ಯ ಮಾಡಿದರೂ, ಯೋಗಿ ಆದಿತ್ಯನಾಥ್‌ ರಾಮನವಮಿಯನ್ನು ಆಯೋಜಿಸಿಯೇ ಬಿಟ್ಟರು. ‘ರಾಮನವಮಿ ಆಚರಣೆಗೆ ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆ ಇದೆ’ ಎಂದೂ ಹೆಮ್ಮೆಯಿಂದ ಹೇಳಿದರು. ಮಹೋತ್ಸವವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಅನೇಕ ಮೂಲಗಳಿಂದ ಒತ್ತಡ ಬಂದಿತ್ತು.

ಅತಿದೊಡ್ಡ ಸಂಭಾವ್ಯ ವೈದ್ಯಕೀಯ ವಿಪತ್ತು ಜಗತ್ತನ್ನು ಬಾಧಿಸುತ್ತಿರುವಾಗಲೂ ರಾಜಕೀಯ ನಾಯಕರು ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಹೇಗೆ ಎಂದು ಯೋಚಿಸಿದರು. ಮತ್ತೆ ಕೆಲವರು ಮಾದರಿಯಾಗಿಯೂ ನಮ್ಮ ಮುಂದೆ ನಿಂತರು. ಕೆನಡಾದ ಜಸ್ಟಿನ್‌ ಟ್ರುಡೋ ತನ್ನ ದೇಶದ ಜನರೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವ ಮೂಲಕ ಮತ್ತು ಜನರ ಪರವಾಗಿದ್ದೇನೆಂಬ ಆಶ್ವಾಸನೆ ನೀಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಇಂಗ್ಲೆಂಡ್‌ನ ಬೋರಿಸ್‌ ಜಾನ್ಸನ್‌ ಆಕಸ್ಮಿಕ ಪ್ರಧಾನಿ. ಹಾಗಾಗಿ ಜನರನ್ನು ಅವರು ಪ್ರೇರೇಪಿಸಲಾರರು. ಆದರೂ ‘ಎರಡು ಮೀಟರ್‌ ದೂರದಲ್ಲಿ ನಿಲ್ಲಿ, ಇದೇನೂ ಗಂಭೀರವಾದುದಲ್ಲ’ ಎಂಬ ಇಬ್ಬಗೆ ನೀತಿ ತೋರಿದರು. ಡೊನಾಲ್ಡ್‌ ಟ್ರಂಪ್‌ ‘ನೀವು ಚೀನಾ ಪರ’ ಎಂದು ಮಾಧ್ಯಮದವರನ್ನು ದೂರಿದರು.

ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಕೊರೋನಾ ಫೈಟರ್; ಡಾ. ಸುಧಾಕರ್ ಮಾತುಗಳಿವು!

ಕೊರೋನಾವೈರಸ್‌ ಹರಡುವಿಕೆಯನ್ನು ತಡೆಯಲು ಭಾರತೀಯ ನಾಯಕರು ಏಕೆ ಸಾಮೂಹಿಕ ಸಭೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ? ಪಕ್ಷ ಮತ್ತು ನಾಯಕರ ಹೆಸರಿನಲ್ಲಿ ನಡೆಯುವ ಆಚರಣೆಗಳು ಮತ್ತು ದೇಶಭಕ್ತಿಯ ಪ್ರದರ್ಶನಗಳನ್ನು ಅವರು ಏಕೆ ಮುಂದೂಡಬಾರದು? ಭಾರತದಲ್ಲಿ ಮದ್ಯ ಖರೀದಿದಾರರು ಮಾತ್ರ ಪ್ರತಿ ಖರೀದಿದಾರರಿಂದ 2 ಮೀಟರ್‌ ದೂರದಲ್ಲಿ ಸರದಿಯಲ್ಲಿ ನಿಲ್ಲುವುದು ಏಕೆ? ಹೀಗೆಲ್ಲಾ ನಾವು ಪ್ರಶ್ನಿಸಬಹುದು. ಆದರೆ ನಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವವರು ಮಾತ್ರ ಇದಕ್ಕೆಲ್ಲಾ ಉತ್ತರಿಸಬೇಕಾಗುತ್ತದೆ. ಆದರೆ ಇಂಥ ಬಿಕ್ಕಟ್ಟಿನಲ್ಲೂ ಅವರು ತಪ್ಪು ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಮ್ಮ ಮುಂದೆ ಸಾಗಿದವರ ಬುದ್ಧಿವಂತಿಕೆಯಲ್ಲಿ ನಮ್ಮ ಆಶ್ರಯವಿದೆ. ಈ ಕ್ಷಣದಲ್ಲಿ ಇಬ್ಬರು ಪುರುಷರ ಆಲೋಚನೆಗಳು ಸೂಕ್ತ ಎಂದು ನಾನು ಕಂಡುಕೊಂಡಿದ್ದೇನೆ. ಒಬ್ಬರು ಬಾಂಕ್ರೊ ಮಿಲನೋವಿಕ್‌. ಅವರು ‘ಫಾರಿನ್‌ ಅಫೇ​ರ್‍ಸ್’ನಲ್ಲಿ ಹೇಳುತ್ತಾರೆ - ‘ಈ ರೋಗಕ್ಕೆ ನಾವು ತರುವ ಅತಿದೊಡ್ಡ ಬೆಲೆಯೆಂದರೆ ಜನರ ಸಾವು. ಆಗ ಸಮಾಜ ಕಂಗೆಟ್ಟು ವಿಘಟಿಸಬಹುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಗ ವ್ಯಾಪಿಸಿದರೆ, ಉದ್ಯೋಗ ಮತ್ತು ಹಣದ ಬಿಕ್ಕಟ್ಟಿರುವ ಪ್ರಸ್ತುತ ಸಮಯದಲ್ಲಿ ಜನರು ಹತಾಶೆಗೊಳಗಾಗಿ ಕೋಪೋದ್ರಿಕ್ತರಾಗಬಹುದು. ಇಟಲಿಯಲ್ಲಿ ಇತ್ತೀಚೆಗೆ ಕೈದಿಗಳು ತಪ್ಪಿಸಿಕೊಂಡು ಓಡಿಹೋದ ದೃಶ್ಯಗಳು ಮತ್ತು 2005ರಲ್ಲಿ ನ್ಯೂ ಓರ್ಲಿಯನ್ಸ್‌ನಲ್ಲಿ ಕತ್ರಿನಾ ಚಂಡಮಾರುತದ ವೇಳೆ ಅಮೆರಿಕನ್ನರು ಮಾಡಿದ ಲೂಟಿಯನ್ನು ಇದಕ್ಕೆ ಉದಾಹರಣೆ ನೀಡಬಹುದು.’

ಮಾಜಿ ಐಎಎಸ್‌ ಅಧಿಕಾರಿ ಜವಾಹರ್‌ ಸರ್ಕಾರ್‌, ‘ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಮಧ್ಯೆ ಕೇಂದ್ರ ಸರ್ಕಾರ ಇದೀಗ 20,000 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರಪತಿ ಭವನದ ಕಚೇರಿ ಮತ್ತು ವಾಣಿಜ್ಯ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಇತಿಹಾಸ ಇದನ್ನು ಒಪ್ಪುವುದಿಲ್ಲ’ ಎನ್ನುತ್ತಾರೆ.

ಕೊರೋನಾವೈರಸ್‌ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಇಡೀ ಜಗತ್ತು ಹೇಳುತ್ತಿದೆ. ಆದರೆ, ನಮ್ಮ ರಾಷ್ಟ್ರಪತಿ ಕೋವಿಂದ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಅಮೆರಿಕದ ಅಧ್ಯಕ್ಷ ಟ್ರಂಪ್‌, ಇಂಗ್ಲೆಂಡ್‌ ಪ್ರಧಾನಿ ಜಾನ್ಸನ್‌ರಂಥವರೇ ವ್ಯತಿರಿಕ್ತವಾಗಿ ನಡೆದುಕೊಂಡು ಜನರಿಗೆ ಕೆಟ್ಟಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

- ಟಿಜೆಎಸ್‌ ಜಾರ್ಜ್ 

Follow Us:
Download App:
  • android
  • ios