ನವದೆಹಲಿ(ಮೇ.08): ಕೊರೋನಾ ವೈರಸ್‌ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್‌ ಕಾರಣ ತೀವ್ರ ಆರ್ಥಿಕ ಸಂಕಟಕ್ಕೆ ಒಳಗಾಗಿರುವವವರಿಗೆ ಕರ್ನಾಟಕ ಸರ್ಕಾರ 1610 ಕೋಟಿ ರು. ಮೊತ್ತದ ಉತ್ತೇಜಕ ಪ್ಯಾಕೇಜ್‌ ಪ್ರಕಟಿಸಿದ ರೀತಿ ಕೇಂದ್ರ ಸರ್ಕಾರ ಕೂಡ ಪ್ಯಾಕೇಜ್‌ ಪ್ರಕಟಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ.

ಕೇವಲ ಸಣ್ಣ ಉದ್ದಿಮೆಗಳಿಗಷ್ಟೇ ಅಲ್ಲ, ಎಲ್ಲ ವಲಯಗಳಿಗೆ ಪ್ಯಾಕೇಜ್‌ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಪ್ರಧಾನಿ ಕಚೇರಿ ಹಾಗೂ ಆರ್ಥಿಕ ಸಚಿವಾಲಯ ಪ್ಯಾಕೇಜ್‌ ಅಂತಿಮಗೊಳಿಸುವ ಚರ್ಚೆಯಲ್ಲಿ ತೊಡಗಿದ್ದಾರೆ. ಅರ್ಥವ್ಯವಸ್ಥೆಯ ಎಲ್ಲ ವಲಯಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ಯಾಕೇಜ್‌ ಘೋಷಿಸಲಾಗುವುದು ಎಂದು ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಗಿರಿಧರ ಅರಮನೆ ಗುರುವಾರ ಸಭೆಯೊಂದರಲ್ಲಿ ಹೇಳಿದರು.

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ಆದ ಆರ್ಥಿಕ ಸಮಸ್ಯೆಗೆ ಮಾಚ್‌ರ್‍ ಅಂತ್ಯದಲ್ಲಿ 1.7 ಲಕ್ಷ ಕೋಟಿ ರು. ಮೊತ್ತದ ಮೊದಲ ಪ್ಯಾಕೇಜ್‌ ಘೋಷಿಸಿದ್ದ ಕೇಂದ್ರ ಸರ್ಕಾರ, ಅದರಡಿ ಬಡವರಿಗೆ ಉಚಿತ ಆಹಾರ ಧಾನ್ಯ, ಅಡುಗೆ ಅನಿಲ ನೀಡುವುದರ ಜೊತೆಗೆ ನೇರ ನಗದು ವರ್ಗಾವಣೆಯನ್ನೂ ಮಾಡಿತ್ತು. ಇದೀಗ ಎರಡನೇ ಪ್ಯಾಕೇಜ್‌ನಲ್ಲಿ ಎಲ್ಲಾ ವಲಯಗಳನ್ನೂ ಗಮನದಲ್ಲಿಟ್ಟುಕೊಂಡು ಪರಿಹಾರ ಘೋಷಿಸಲಿದೆ ಎನ್ನಲಾಗಿದೆ.

ಬೆಳಗ್ಗೆ ವಿಶಾಖಪಟ್ಟಣ, ಸಂಜೆ ತಮಿಳುನಾಡು.. ಸ್ಫೋಟಗೊಂಡ ಬಾಯ್ಲರ್

ಎಲ್ಲರಿಗೂ ಪ್ಯಾಕೇಜ್‌ ಘೋಷಿಸಬೇಕು ಎಂಬುದು ಉದ್ದಿಮೆ, ಸಮಾಜದ ವಿವಿಧ ವರ್ಗಗಳು ಹಾಗೂ ಪ್ರತಿಪಕ್ಷಗಳ ಆಗ್ರಹವಾಗಿದೆ. ಪ್ಯಾಕೇಜ್‌ ಘೋಷಣೆ ವಿಳಂಬಕ್ಕೆ ಈಗಾಗಲೇ ವಿಪಕ್ಷಗಳು ಆಕ್ರೋಶವನ್ನೂ ವ್ಯಕ್ತಪಡಿಸಿವೆ.