ಚೆನ್ನೈ(ಮೇ 07)  ಗುರುವಾರ ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದ ಗ್ಯಾಸ್ ಸೋರಿಕೆ ದುರಂತದ ವರದಿ ಮಾಡಿ ಆಗಿದೆ. ಈಗ ತಮಿಳುನಾಡಿಲ್ಲಿಯೂ ಮತ್ತೊಂದು ದುರಂತ ನಡೆದಿದ್ದು ಹೇಳಲೇಬೇಕಾಗಿದೆ.

ಬಾಯ್ಲರ್ ಸ್ಫೋಟದ ಪರಿಣಾಮ 8 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.  ತಮಿಳುನಾಡಿನ ಕಡಲೂರು ಜಿಲ್ಲೆಯ ನೆಯೆವೆಲಿ ಲಿಗ್ನೈಟ್ ಕಾರ್ಪೊರೇಷನ್ ವಿದ್ಯುತ್ ಸ್ಥಾವರದಲ್ಲಿ ಗುರುವಾರ ಬಾಯ್ಲರ್ ಸ್ಫೋಟವಾಗಿದೆ.

ಉಸಿರಾಡುವ ಗಾಳಿಯೇ ವಿಷವಾಯಿತು

ಸಾಮಾನ್ಯ ತಾಪಮಾನ ಇದ್ದರೂ ಸ್ಫೋಟ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಪರಿಸ್ಥಿತಿ ಹತೋಟಿಗೆ ತಂದಿದೆ.  ಎರಡನೇ ವಿದ್ಯುತ್ ಸ್ಥಾವರದ ಆರನೇ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸೆಟ್ ಹತ್ತಿರದಲ್ಲಿ ಸಂಗ್ರಹವಾಗಿದ್ದ ತೈಲಕ್ಕೆ ಬೆಂಕಿ ಹಚ್ಚಿದೆ. ಇದು 210 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. 

ಗಾಯಾಳುಗಳನ್ನು ನೆಯೆವೇಲಿಯ ಎನ್‌ಎಲ್‌ಸಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.   ಬೆಳಗ್ಗೆ ವಿಶಾಖಪಟ್ಟಣ ದುರಂತ ಸಂಜೆ ತಮಿಳುನಾಡು ದುರಂತ ಗುರುವಾರವನ್ನು ಕರಾಳವಾಗಿಸಿತು.