Asianet Suvarna News Asianet Suvarna News

ಕೊರೋನಾ ನಿರ್ವಹಣೆ: ಮೋದಿಗೆ ಶೇ.93 ಜನ ಮೆಚ್ಚುಗೆ

ಕೊರೋನಾ ನಿರ್ವಹಣೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.93.5ರಷ್ಟುಜನ ಹೇಳಿದ್ದಾರೆ.

 

A survey says 93 percent of indians like modi work towards covid19
Author
Bangalore, First Published Apr 24, 2020, 7:18 AM IST

ನವದೆಹಲಿ(ಏ.24): ‘ಕೊರೋನಾ ಸೋಂಕು ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ಅವರು ವಿಶ್ವದಲ್ಲೇ ನಂ.1’ ಎಂದು ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆಯೊಂದು ಹೇಳಿದ ಬೆನ್ನಲ್ಲೇ, ಭಾರತದಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೋನಾ ನಿರ್ವಹಣೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.93.5ರಷ್ಟುಜನ ಹೇಳಿದ್ದಾರೆ.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ದೇಶದಲ್ಲಿ ಕೊರೋನಾ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ಹಲವು ವಿಪಕ್ಷಗಳು ಗಂಭೀರ ಆರೋಪ ಮಾಡುತ್ತಿರುವಾಗಲೇ ದೇಶದ ಜನತೆ ನೀಡಿರುವ ಈ ಅಭಿಪ್ರಾಯ, ವಿಪಕ್ಷಗಳ ಆರೋಪವನ್ನು ಪ್ರಶ್ನಿಸುವಂತೆ ಮಾಡಿದೆ.

ಐಎಎನ್‌ಎಸ್‌- ಸಿ ವೋಟರ್‌ ಸಹಯೋಗದಲ್ಲಿ ದೇಶವ್ಯಾಪಿ ಸಮೀಕ್ಷೆಯೊಂದು ನಡೆದಿತ್ತು. ಅದರಲ್ಲಿ, ಕೊರೋನಾ ನಿರ್ವಹಣೆ ವಿಷಯದಲ್ಲಿ ಮೋದಿ ಸರ್ಕಾರದ ಮೇಲೆ ನೀವು ಎಷ್ಟುವಿಶ್ವಾಸ ಹೊಂದಿದ್ದೀರಿ ಎಂಬ ಪ್ರಶ್ನೆಯನ್ನು ಜನರ ಮುಂದೆ ಇಡಲಾಗಿತ್ತು. ಮೊದಲ ಬಾರಿ ಲಾಕ್‌ಡೌನ್‌ ಘೋಷಣೆಯಾದ ಮಾ.25ರಂದು ಈ ಬಗ್ಗೆ ಪ್ರಶ್ನಿಸಿದಾಗ, ಶೇ.76.8ರಷ್ಟುವಿಶ್ವಾಸ ಹೊಂದಿರುವುದಾಗಿ ಜನರು ಹೇಳಿದ್ದರು. ಇನ್ನು ಇದೇ ಪ್ರಶ್ನೆಯನ್ನು ಏ.21ಕ್ಕೆ ಇಟ್ಟಾಗ, ಸರ್ಕಾರದ ಮೇಲೆ ವಿಶ್ವಾಸ ಇಟ್ಟವರ ಪ್ರಮಾಣ ಶೇ.93.5ಕ್ಕೆ ಹೆಚ್ಚಳವಾಗಿದೆ ಎಂದು ಆ ಸಂಸ್ಥೆಗಳು ತಿಳಿಸಿವೆ.

ಶಂಕರಮೂರ್ತಿಗೆ ಮೋದಿ ಕರೆ, ಆರೋಗ್ಯ ವಿಚಾರಿಸಿದ ಪ್ರಧಾನಿ

ಇದೇ ವೇಳೆ ಹಾಲಿ ಸರ್ಕಾರದ ಒಟ್ಟಾರೆ ವಿಶ್ವಾಸಾರ್ಹತೆಯಲ್ಲೂ ಗಮನಾರ್ಹ ಏರಿಕೆ ದಾಖಲಾಗಿದೆ. ಮಾ.31ರಂದು ಶೇ.79.4ರಷ್ಟುಜನರು ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರೆ ಏ.21ಕ್ಕೆ ಈ ಪ್ರಮಾಣ ಶೇ.89.9ಕ್ಕೆ ಹೆಚ್ಚಳವಾಗಿದೆ.

43% ಜನರಿಂದ 3 ವಾರಕ್ಕಾಗುವಷ್ಟು ಅಗತ್ಯ ಸಾಮಗ್ರಿ ಸಂಗ್ರಹ: ಸಮೀಕ್ಷೆ

ಕೊರೋನಾ ವಿರುದ್ಧ ನಾವು ಸುದೀರ್ಘ ಹೋರಾಟ ನಡೆಸಬೇಕಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸುಳಿವು ದೇಶದ ಜನರ ಮನಸ್ಸಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಜನರು ತಮ್ಮ ನಿತ್ಯ ಬಳಕೆಗೆ ಅಗತ್ಯವಾದ ಆಹಾರ, ಔಷಧ ಮತ್ತು ನಗದು ಸಂಗ್ರಹದಲ್ಲಿ ಹೆಚ್ಚುವರಿ ಮುತುವರ್ಜಿ ವಹಿಸಿರುವುದು ಕಂಡುಬಂದಿದೆ. ಮಾ.16ರಂದು ಸಮೀಕ್ಷೆ ಆರಂಭಿಸಿದಾಗ ಶೇ.77.1ರಷ್ಟುಜನರು ತಮ್ಮ ಬಳಿ ಕೇವಲ 1 ವಾರಕ್ಕೆ ಆಗುವಷ್ಟುಸಂಗ್ರಹ ಇದೆ ಎಂದಿದ್ದರೆ ಏ.21ರ ವೇಳೆಗೆ ಇಂಥವರ ಪ್ರಮಾಣ ಕೇವಲ ಶೇ.12.3ಕ್ಕೆ ಇಳಿದಿದೆ. ಅಂದರೆ ಜನತೆ ಸುದೀರ್ಘ ಹೋರಾಟಕ್ಕೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ ಎಂದು ಐಎಎನ್‌ಎಸ್‌- ಸಿ ವೋಟರ್‌ ಸಮೀಕ್ಷೆ ಹೇಳಿದೆ. ಲಾಕ್‌ಡೌನ್‌ನ ಎರಡನೇ ಭಾಗದ ಮೊದಲಾರ್ಧ ಮುಗಿಯುವ ಹೊತ್ತಿನಲ್ಲಿ ಶೇ.57.2ರಷ್ಟುಜನರು ತಮ್ಮ ಬಳಿ 3 ವಾರಕ್ಕಿಂತ ಕಡಿಮೆ ಸಮಯಕ್ಕೆ ಅಗತ್ಯವಾದ ಸಂಗ್ರಹ ಇದೆ ಎಂದು ಹೇಳಿದ್ದರೆ, ಶೇ.43.3ರಷ್ಟುಜನರು ತಮ್ಮ ಬಳಿ ಇದಕ್ಕಿಂತ ಹೆಚ್ಚಿನ ಅವಧಿಗೆ ಅಗತ್ಯವಾದ ಸಂಗ್ರಹ ಇದೆ ಎಂದಿದ್ದಾರೆ.

ಉದ್ಧವ್‌ ಠಾಕ್ರೆಗೆ ಸಿಎಂ ಸ್ಥಾನ ಹೋಗುವ ಭೀತಿ!

ಇದನ್ನೇ ವಾರದ ಅವಧಿಗೆ ವಿಂಗಡಿಸಿದರೆ ಶೇ.24.5ರಷ್ಟುಜನರು ಒಂದು ವಾರಕ್ಕೆ ಅಗತ್ಯವಾಗುವಷ್ಟುಆಹಾರ, ಔಷಧ ಇದೆ ಎಂದಿದ್ದಾರೆ. ಶೇ.21.9ರಷ್ಟುಜನ ಒಂದು ತಿಂಗಳಿಗೆ ಆಗುವಷ್ಟು, ಶೇ.20.4ರಷ್ಟುಜನ ಹಲವು ವಾರಗಳಿಗೆ ಆಗುವಷ್ಟು, ಶೇ.15.8ರಷ್ಟುಜನರ ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ, ಶೇ.5.6ರಷ್ಟುಜನ 3 ವಾರಗಳಿಗೆ ಆಗುವಷ್ಟು, ಶೇ.12.3ರಷ್ಟುಜನ ಒಂದು ವಾರಕ್ಕಿಂತ ಕಡಿಮೆ ಅವಧಿಗೆ ಅಗುವ ಸಂಗ್ರಹ ಇದೆ ಎಂದಿದ್ದಾರೆ.

ಸಮೀಕ್ಷೆ ಫಲಿತಾಂಶ - ಕೊರೋನಾ ನಿರ್ವಹಣೆ

ಮಾ.25ಕ್ಕೆ 76.8%

ಏ.21ಕ್ಕೆ 93.5

ಕೇಂದ್ರದ ವಿಶ್ವಾಸಾರ್ಹತೆ

ಮಾ.31ಕ್ಕೆ 79.4%

ಏ.21ಕ್ಕೆ 89.9%

Follow Us:
Download App:
  • android
  • ios