ಮಂಗಳೂರು(ಏ. 23) ಪ್ರಧಾನಿ ನರೇಂಧ್ರ ಮೋದಿ ಬಿಜಿಪಿಯ ಹಿರಿಯ ನಾಯಕರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ.  ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ ಮಾಡಿದ್ದಾರೆ.  ಪುತ್ತೂರಿನ ಮಾಜಿ ಶಾಸಕ ರಾಮ್ ಭಟ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಶಂಕರಮೂರ್ತಿಗೆ ಮೋದಿ ಕರೆ, ಆರೋಗ್ಯ ವಿಚಾರಿಸಿದ ಪ್ರಧಾನಿ

ಮೋದಿ ಅವರ ಮಾತು ಕೇಳಿಪುಳಕಿತನಾಗಿದ್ದೇನೆ ಎಂದು ರಾಮ್ ಭಟ್ ತಿಳಿಸಿದ್ದಾರೆ.    ಪ್ರಧಾನಿ ನರೇಂದ್ರ ಮೋದಿ  ಬಿಜೆಪಿ ಹಿರಿಯ ರಾಜಕಾರಣಿ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರಿಗೂ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

ಲಾಕ್ ಡೌನ್ ಅವಧಿಯಲ್ಲಿ ಹೇಗೆ ಸಮಯ ಕಳೆಯುತ್ತಿದ್ದೀರಿ ಎಂದು ಕೇಳಿದ್ದು ಅಲ್ಲದೇ ನಿಮ್ಮ ಮಾರ್ದರ್ಶನ ಮತ್ತು ಅನುಭವವನ್ನು ಕಾರ್ಯಕರ್ತರಿಗೆ ಧಾರೆ ಎರೆಯಬೇಕು ಎಂದು ಕೇಳಿಕೊಂಡಿದ್ದಾರೆ.