ನವದೆಹಲಿ(ಏ.10): ದಿಲ್ಲಿಯ ನಿಜಾಮುದ್ದೀನ್‌ನ ಮಸೀದಿಯಲ್ಲಿ ಧರ್ಮಸಭೆ ನಡೆಸಿದ್ದ ತಬ್ಲೀಘಿ ಜಮಾತ್‌ ಸಂಘಟನೆಯ ನೂರಾರು ಸದಸ್ಯರಿಗೆ ಕೊರೋನಾ ವೈರಸ್‌ ಅಂಟಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡ ಎಲ್ಲ ತಬ್ಲೀಘಿ ಸದಸ್ಯರಿಗೆ ಕೊರೋನಾ ತಪಾಸಣೆಗೆ ಒಳಪಡುವಂತೆ ಸರ್ಕಾರ ಸೂಚಿಸಿದ್ದರೂ, ಅವರ ಅಸಹಕಾರ ಧೋರಣೆ ಮುಂದುವರಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

500 ತಬ್ಲೀಘಿ ಸದಸ್ಯರ ಪತ್ತೆ ಇನ್ನೂ ಆಗಿಲ್ಲ. ಅವರೆಲ್ಲಿದ್ದಾರೋ ತಿಳಿಯುತ್ತಿಲ್ಲ. ಅವರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳುತ್ತಿದೆ.

ಕೊರೋನಾ ಲಾಕ್‌ಡೌನ್: ಮಾಂಸಪ್ರಿಯರಿಗೆ ಗುಡ್‌ನ್ಯೂಸ್

ಮಾಚ್‌ರ್‍ 1ರಿಂದ 15ರವೆರೆಗೆ ನಡೆದ ತಬ್ಲೀಘಿ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದು ಸುಮಾರು 8 ಸಾವಿರ ಜನ. ಸಭೆ ಮುಗಿದ ಬಳಿಕವೂ ದಿಲ್ಲಿಯ ಮಸೀದಿಯಲ್ಲೇ ಠಿಕಾಣಿ ಹೂಡಿದ್ದ ಸುಮಾರು 2000 ಜನರನ್ನು ವಶಕ್ಕೆ ಪಡೆದು ಕೊರೋನಾ ತಪಾಸಣೆ ನಡೆಸಲಾಗಿದೆ. ಆದರೆ ಉಳಿದ 6 ಸಾವಿರ ಜನ ದಿಲ್ಲಿ ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದರು.

'ಮದ್ಯದಿಂದ ಕೊರೋನಾ ಹೋಗಲ್ಲ, ಚಿಕನ್ ತಿಂದ್ರೆ ಕೊರೋನಾ ಬರಲ್ಲ..'!

ಊರಿಗೆ ತೆರಳಿದವರ ಪತ್ತೆ ಕಾರ್ಯವೂ ನಡೆಯುತ್ತಿದೆ. ಆದರೆ ಇವರಲ್ಲಿ ಇನ್ನೂ 500 ಮಂದಿ ಪತ್ತೆ ಆಗಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಒಟ್ಟಾರೆ ತಬ್ಲೀಘಿ ಜಮಾತ್‌ನ ಸದಸ್ಯರು ಹಾಗೂ ಅವರ ನೇರ ಸಂಪರ್ಕಕ್ಕೆ ಬಂದ 25,500 ಮಂದಿಯನ್ನು ಈವರೆಗೆ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.