'ಮದ್ಯದಿಂದ ಕೊರೋನಾ ಹೋಗಲ್ಲ, ಚಿಕನ್ ತಿಂದ್ರೆ ಕೊರೋನಾ ಬರಲ್ಲ..'!

ಮದ್ಯಪಾನದಿಂದ ಕೊರೋನಾ ಬರೋದಿಲ್ಲ ಎಂಬ ವದಂತಿ ಬಗ್ಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಮಾತನಾಡಿದ್ದಾರೆ. ಎರಡು ಪೆಗ್ ಜಾಸ್ತಿ ಹಾಕೋಣ ಎಂದು ಯಾರೋ ಕುಟುಕರು ಈ ರೀತಿ‌ ಹೇಳಿರಬೇಕು ಎಂದು ಅವರು ತಿಳಿಸಿದ್ದಾರೆ.

 

ct ravi talks about coronavirus and using alcohol as precaution

ಬೆಂಗಳೂರು(ಮಾ.14): ಮದ್ಯಪಾನದಿಂದ ಕೊರೋನಾ ಬರೋದಿಲ್ಲ ಎಂಬ ವದಂತಿ ಬಗ್ಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಮಾತನಾಡಿದ್ದಾರೆ. ಎರಡು ಪೆಗ್ ಜಾಸ್ತಿ ಹಾಕೋಣ ಎಂದು ಯಾರೋ ಕುಟುಕರು ಈ ರೀತಿ‌ ಹೇಳಿರಬೇಕು ಎಂದು ಅವರು ತಿಳಿಸಿದ್ದಾರೆ.

ಮದ್ಯಪಾನದಿಂದ ಕೊರೋನಾ ಬರುವುದಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಯಾರೋ ಕುಡುಕರಿಗೆ ಅನ್ನಿಸಿರಬೇಕು. ಎರಡು ಪೆಗ್ ಜಾಸ್ತಿ ಹಾಕೋಣ ಎಂಬ ಕಾರಣಕ್ಕೆ ಈ ರೀತಿ‌ ಹೇಳಿರಬೇಕು. ಮದ್ಯಪಾನದಿಂದ ಕಾಯಿಲೆ ವಾಸಿಯಾಗೋದಾಗಿದ್ದರೆ ಎಲ್ಲರು‌ ಅದನ್ನೇ ಮಾಡುತ್ತಿದ್ದರು. ಅದಕ್ಕೂ ಇದಕ್ಕೂ ಯಾವ್ದೇ‌ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ರಾಜ್ಯಾದ್ಯಂತ ಬಾರ್‌ಗಳು ಬಂದ್!

ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ದೊಡ್ಡ ಸಮಾರಂಭಗಳು, ಹೆಚ್ಚು ಹೆಚ್ಚು ಜನ ಸೇರೋ ಕಾರ್ಯಕ್ರಮಗಳನ್ನ ನಡೆಸ ಬಾರದು ಎಂದು ಸರ್ಕಾರ ಹೇಳಿದೆ. ಇದು ಮುನ್ನೆಚ್ಚರಿಕೆ ಕ್ರಮವಾಗಿ ಹೇಳಿರೋ ವಿಷಯ. ಅಗಂತ ಜನರೇ ಸೇರಬಾರದು ಮನುಷ್ಯರನ್ನೆ ಮಾತನಾಡಿಸಬಾರದು ಅಂತ ಎಲ್ಲೂ‌ ಹೇಳಿಲ್ಲ. ಹೀಗಾಗಿ ಯಾರು ಅತಂಕಕ್ಕೆ‌ ಒಳಗಾಗೋದು ಬೇಡ ಎಂದಿದ್ದಾರೆ.

ಎಲ್ಲಾ ಕ್ಷೇತ್ರಗಳಿಗೆ ಹೊಡೆತ ಬಿದ್ದಾಗೆ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಹೀಗಾಗಿ ಭಯ ಬೇಡ ಎಚ್ಚರಿಕೆ ಇರಲಿ ಅಂತ ಪ್ರಧಾನ ಮಂತ್ರಿಯವರು ಹೇಳಿದ್ದಾರೆ. ಹಾಗೇ ನಾನು ಸಹ ಭಯ ಬೇಡ ಎಚ್ಚರಿಕೆ ಇರಲಿ ಅಂತ ಹೇಳುತ್ತೇನೆ ಎಂದಿದ್ದಾರೆ.

ಕೋಳಿ ತಿಂದ್ರೆ ಕೊರೋನಾ ಬರಲ್ಲ:

ಕೋಳಿ ತಿಂದ್ರೆ ಕೊರೋನಾ ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೋಳಿ ತಿನ್ನೋದಕ್ಕೂ ಈ ಕಾಯಿಲೆಗೂ ಯಾವುದೆ ಸಂಬಂಧವಿಲ್ಲ. ಯಾರೋ ಹಬ್ಬಿಸಿರೋ ಸುದ್ದಿಗೆ ಅದ್ಯತೆ ಕೊಡಬೇಡಿ. ಇದರಿಂದ ಕೋಳಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಬೇಯಿಸಿ ತಿನ್ನೋ ಯಾವ್ದೇ ವಸ್ತುವಿನಿಂದ ಕಾಯಿಲೆ ಬರಲ್ಲ. ಹೀಗಾಗಿ ಸ್ವಚ್ಚತೆಯತ್ತ ಗಮಹರಿಸಿ ಎಂದಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

Latest Videos
Follow Us:
Download App:
  • android
  • ios