ಕೊರೋನಾ ಲಾಕ್‌ಡೌನ್: ಮಾಂಸಪ್ರಿಯರಿಗೆ ಗುಡ್‌ನ್ಯೂಸ್
ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಲಿಗೆ ಬೇಕರಿ ಬೆನ್ನಲ್ಲೇ ಇದೀಗ ಮೊಟ್ಟೆ ಮತ್ತು ಮಾಂಸದಂಗಡಿ ಸೇರಿಕೊಂಡಿದೆ. ಈ ಮೂಲಕ ರಾಜ್ಯ ಸರ್ಕಾರ ಮಾಂಸಪ್ರಿಯರಿಗೆ ರಿಲ್ಯಾಕ್ಸ್ ನೀಡಿದೆ.
ಬೆಂಗಳೂರು, (ಏ.09): ಲಾಕ್ ಡೌನ್ ನಿರ್ಬಂಧವನ್ನು ಕೊಂಚ ಸಡಿಲಗೊಳಿಸಿ ಬೇಕರಿ ಉತ್ಪನ್ನಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಇದೀಗ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಮೊಟ್ಟೆ ಮತ್ತು ಮಾಂಸದಂಗಡಿ ತೆರೆಯಲು ಅನುಮತಿ ನೀಡಿದೆ
ಈ ಬಗ್ಗೆ ಇಂದು (ಗುರುವಾರ) ಪಶು ಪಾಲನೆ ಮತ್ತು ಪಶುವೈದ್ಯಕೀಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಲಿಗೆ ಬೇಕರಿ ಬೆನ್ನಲ್ಲೇ ಇದೀಗ ಮೊಟ್ಟೆ ಮತ್ತು ಮಾಂಸದಂಗಡಿ ಸೇರಿಕೊಂಡಂತಾಗಿದೆ.
'ಮದ್ಯದಿಂದ ಕೊರೋನಾ ಹೋಗಲ್ಲ, ಚಿಕನ್ ತಿಂದ್ರೆ ಕೊರೋನಾ ಬರಲ್ಲ..'!
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಆದ್ರೆ, ಮೊಟ್ಟೆ ಮತ್ತು ಕೋಳಿ/ಕುರಿ/ಮೇಕೆ ಮಾಂಸದ ಮಾರಾಟಕ್ಕೆ ವಿನಾಯಿತಿ ನೀಡಲಾಗಿರುತ್ತದೆ.
ಆದ್ದರಿಂದ ತಮ್ಮ ಜಿಲ್ಲೆಯಲ್ಲಿರುವ ಮಾಸ ಮಾರಾಟ ಮಾಡುವ ಎಲ್ಲಾ ಅಂಗಡಿಗಳು ತೆರೆಯಲ್ಪಟ್ಟು ಗ್ರಾಹಕರಿಗೆ ಮೊಟ್ಟೆ ಮತ್ತು ಮಾಸಂಸ ಲಭ್ಯವಾಗುವಂತೆ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಸೂಚನೆ ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
ಭಾನುವಾರದ ಬಾಡೂಟ, ಮೈಸೂರಿನಲ್ಲಿ ಕೊಳೆತ ಚಿಕನ್ ಮಾರಾಟ!
ಈ ಹಿನ್ನೆಲೆಯಲ್ಲಿ ಮಾಂಸಪ್ರಿಯರಿಗೆ ಕೊಂಚ ರಿಲ್ಯಾಕ್ಸ್ ಸಿಕ್ಕಂತಾಗಿದೆ. ಮೊನ್ನೇ ಅಷ್ಟೇ ಬೇಕರಿಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಮಾಂಸದ ಅಂಗಡಿ ತೆಗಿಯಲು ಅನುಮತಿ ನೀಡಿದೆ.
ಕೋಳಿಯಿಂದ ಕೊರೋನಾ ರೋಗ ಹರಡುತ್ತವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಚಿಕನ್ ಮಾಂಸ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಕೋಳಿಗಳನ್ನು ಗುಂಡಿ ತೋಡಿ ಜೀವಂತ ಹೂತು ಹಾಕಿದ್ದನ್ನು ಇಲ್ಲಿ ಸ್ಮರಿಸಬಹದು.