Asianet Suvarna News Asianet Suvarna News

Zeeshan Khan: ಕಿಸ್​ ಕೊಟ್ರು, ಪ್ಯಾಂಟ್ ಬಿಚ್ಚು ಎಂದ್ರು: ಕರಾಳ ಅನುಭವ ತೆರೆದಿಟ್ಟ ನಟ!

ನಟ ಜೀಶಾನ್​ ಖಾನ್​ ಅವರು ಫಿಲ್ಮ್​ ಇಂಡಸ್ಟ್ರಿಯಲ್ಲಿ ತಮಗಾಗಿರುವ ಲೈಂಗಿಕ ಕಿರುಕುಳದ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 

Zeeshan Khan reveals a casting director asked him to drop his pants suc
Author
First Published Jun 16, 2023, 2:50 PM IST

ಮನರಂಜನಾ ಕ್ಷೇತ್ರದ ನಟರು ಹಲವು ವರ್ಷಗಳಿಂದ ಕಾಸ್ಟಿಂಗ್ ಕೌಚ್ (Casting Couch) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕ ಕಲಾವಿದರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಇಂತಹ ಸಂದರ್ಭಗಳನ್ನು ಎದುರಿಸಿದ್ದಾರೆ. ನಟಿಯರಷ್ಟೇ ಅಲ್ಲ, ಹಲವು ನಟರು ಕೂಡ ಕಾಸ್ಟಿಂಗ್ ಕೌಚ್ ಅನುಭವಿಸಿದ್ದಾರೆ. ಇತ್ತೀಚೆಗೆ ಜನಪ್ರಿಯ ನಟರೊಬ್ಬರು ತಮ್ಮ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಿಂದಿ ಧಾರಾವಾಹಿಗಳ ಜಗತ್ತಿನ ಜನಪ್ರಿಯ ನಟ ಜೀಶಾನ್ ಖಾನ್ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಈ ವೇಳೆ ತಮಗಾದ ಕೆಲವು ಆಘಾತಕಾರಿ ಅನುಭವಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಂಡಸ್ಟ್ರಿಯಲ್ಲಿನ ಖ್ಯಾತ ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು ತಮ್ಮೊಂದಿಗೆ ಒಮ್ಮೆ ತಪ್ಪು ಮಾಡಿದ್ದಾರೆ ಎಂದು ಹೇಳುವ ಮೂಲಕ ಅವರು ಉದ್ಯಮದಲ್ಲಿನ ಪಕ್ಷಗಳ ಇನ್ನೊಂದು ಬದಿಯನ್ನು ಬಹಿರಂಗಪಡಿಸಿದ್ದಾರೆ.

'ಚಿತ್ರರಂಗಕ್ಕೆ ಅವಕಾಶ ಕೇಳಿಕೊಂಡು ಹೋದ ಸಂದರ್ಭಧಲ್ಲಿ, ನಾವು ಅನೇಕ ದೊಡ್ಡ ಸೆಲೆಬ್ರಿಟಿಗಳಿಗೆ ಅವಕಾಶ ನೀಡಿದ್ದೇವೆ ಎನ್ನುತ್ತಾರೆ. ನಂತರ  ನಿಮ್ಮನ್ನು ದೈಹಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಾರೆ. ಕೆಲಸ ಪಡೆಯಲು ಇದನ್ನು ಮಾಡಬೇಕಾದ ಅನೇಕ ಜನರನ್ನು ನಾನು ಬಲ್ಲೆ. ಆದರೆ ನಾನು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಬಯಸುವ ಕಾರಣ ನಾನು ಅಂತಹ ಏನನ್ನೂ ಮಾಡಲಿಲ್ಲ' ಎಂದಿರುವ ಜಿಶಾನ್​, ಇಂಡಸ್ಟ್ರಿಯಲ್ಲಿ ಅತ್ಯಂತ ಹೆಸರಾಂತ ಕಾಸ್ಟಿಂಗ್ ಡೈರೆಕ್ಟರ್ (Director) ಒಬ್ಬರು ದೈಹಿಕ ಸಂಬಂಧ ಹೊಂದಲು ತಮ್ಮನ್ನು ಕೇಳಿದ್ದರು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ. 23ನೇ ವಯಸ್ಸಿನಲ್ಲಿ ನಟ  ಟಿವಿಯಲ್ಲಿ ತಮ್ಮ ಮೊದಲ ಶೋ ಮಾಡುತ್ತಿದ್ದರು. ಆಗ ಅವರಿಗೆ ಒಂದು ದಿನಕ್ಕೆ 3000 ಸಿಗುತ್ತಿತ್ತು. ಇಷ್ಟೊಂದು ಶ್ರಮ ವಹಿಸಿ ದುಡಿಯುತ್ತಿದ್ದರೂ ಇವೆಲ್ಲಾ ಅನುಭವಿಸಬೇಕಾಯಿತು ಎಂದಿದ್ದಾರೆ. 

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ
 
'ಅವರು ನನ್ನ ಬಳಿ ಅಸಭ್ಯವಾಗಿ ವರ್ತಿಸಿದರು.  ನಿಮ್ಮ ದೇಹವನ್ನು ನೋಡಬೇಕು, ನಿಮ್ಮ ಟೀ ಶರ್ಟ್ ತೆಗೆಯಿರಿ ಎಂದು ಕಾಸ್ಟಿಂಗ್ ನಿರ್ದೇಶಕರು ನನಗೆ ಹೇಳಿದರು. ನಾನು ನಿಮಗೆ ಫೋಟೋ ಕಳುಹಿಸುತ್ತೇನೆ ಎಂದು ಹೇಳಿದೆ. ಅದಕ್ಕೆ ಒಪ್ಪದ ಅವರು,  ನಾನು ಈಗಲೇ ನೋಡಲು ಬಯಸುತ್ತೇನೆ ಎಂದರು. ಟೀ ಶರ್ಟ್ ತೆಗೆಯಲು ಮನಸ್ಸಾಗಲಿಲ್ಲ. ಹಾಗಾಗಿ ಟೀ ಶರ್ಟ್ ತೆಗೆದೆ. ಅದರ ನಂತರ ಅವರು ನನಗೆ ನಿಮ್ಮ ಕಾಲುಗಳನ್ನು ನೋಡಬೇಕು ಆದ್ದರಿಂದ ನಿಮ್ಮ ಪ್ಯಾಂಟ್ ತೆಗೆದುಹಾಕಿ ಎಂದು ಹೇಳಿದರು. ನಾನು ಅದನ್ನು ನಿರಾಕರಿಸಿದೆ. ಆಗ ಡೈರೆಕ್ಟರ್ ಕೋಪಗೊಂಡರು ಮತ್ತು ನಿಮ್ಮಂತಹ ಹಲವಾರು ಜನರನ್ನು ನಾನು ನೋಡಿದ್ದೇನೆ, ಕೆಲಸ ಬೇಕು ಎಂದರೆ ಇವೆಲ್ಲಾ  ಮಾಡಬೇಕು. ಹೀಗೆ ಮಾಡದಿದ್ದರೆ ಮುಂದೆ ಪಶ್ಚಾತ್ತಾಪ ಪಡುತ್ತೀರಿ ಎಂದರು' ಎಂಬ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

 ಇನ್ನೊಮ್ಮೆ ಲಾಂಚ್ ಪಾರ್ಟಿಯಲ್ಲಿ ಒಬ್ಬರು ಡಿಸೈನರ್ ಅವರನ್ನು ಭೇಟಿಯಾದೆ, ಅವರನ್ನು ಹಗ್ ಮಾಡಿದಾಗ ಅವರು ನನ್ನ ತುಟಿಗೆ ಕಿಸ್ (Kiss) ಮಾಡಿದರು. ನಾನು ತಕ್ಷಣ ಅವರಿಂದ ಬಿಡಿಸಿಕೊಂಡೆ. ಅವರು ನನ್ನ ಕೆನ್ನೆಗೆ ಕಿಸ್ ಮಾಡಿದರು. ಇದನ್ನು ನನ್ನೊಂದಿಗೆ ಇನ್ನೊಮ್ಮೆ ಮಾಡಬೇಡಿ ಎಂದು ಅವರಿಗೆ ಹೇಳಿದೆ ಎಂದಿದ್ದಾರೆ ನಟ. ನಾನು ವ್ಯಕ್ತಿಯ ಹೆಸರು ಹೇಳುವುದಿಲ್ಲ. ಆತ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯ (Management Agency) ಹೆಡ್ ಆಗಿದ್ದ. ಆದರೆ ನಾನು ಅವನೊಂದಿಗೆ ಸಹನೆಯಿಂದ ಇದ್ದೆ. ಆತ ನನಗೆ ನನ್ನ ಹಣವನ್ನು ನೀಡುತ್ತಿರಲಿಲ್ಲ. ಒಂದು ದಿನ ನನ್ನ ಹಣ ಕೊಡು. ನೀವೊಂದು ಕಂಪೆನಿ ನಡೆಸುತ್ತಿದ್ದೀರಿ, ಆದರೆ ನನಗೆ 16 ಅಥವಾ 18 ಸಾವಿರ ಕೊಡಲು ಆಗುವುದಿಲ್ಲವೇ ಎಂದಿದ್ದೆ. ಇದು ಆತನಿಗೆ ಸಿಟ್ಟು ತರಿಸಿತ್ತು. ನಂತರ ನನ್ನೊಂದಿಗೆ ಈ ರೀತಿಯಾಗಿ ಅಸಭ್ಯವಾಗಿ ವರ್ತಿಸಿದರು ಎಂದಿದ್ದಾರೆ. 

ಕಾಫಿ ಕುಡಿಯೋಕೆ ರಾತ್ರಿ ಕರೆಯೋದಾ? ಕಾಸ್ಟಿಂಗ್​ ​ ಕೌಚ್​ ಅನುಭವ ಬಿಚ್ಚಿಟ್ಟ 'ಹೆಬ್ಬುಲಿ' ನಟ
 

Follow Us:
Download App:
  • android
  • ios