Priyanka Chopra: ಅಂಡರ್ವೇರ್ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ
ಹಾಲಿವುಡ್ನಲ್ಲಿ ಸದ್ಯ ಬಿಜಿ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ನಿರ್ದೇಶಕರೊಬ್ಬರಿಂದ ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಕಾಸ್ಟಿಂಗ್ ಕೌಚ್ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ವಿಚಿತ್ರ ಎಂದರೆ ಕೇವಲ ನಟಿಯರ ಮೇಲಷ್ಟೇ ಅಲ್ಲದೆ ನಟರ ಮೇಲೂ ಕಾಸ್ಟಿಂಗ್ ಕೌಚ್ ನಡೆದಿದೆ. ಈ ಕುರಿತು 'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಹಿಂದಿಯ 'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಮಹಿಳೆಯೊಬ್ಬರಿಂದ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದರು. ನಂತರ ನಟ, ಬಿಜೆಪಿ ಸಂಸದ ರವಿ ಕಿಶನ್ (Ravi Kishan)ಕಾಸ್ಟಿಂಗ್ ಕೌಚ್ ಅನುಭವವನ್ನು ಶೇರ್ ಮಾಡಿ ತಮಗಾಗಿರುವ ಅನುಭವವನ್ನು ಬಿಚ್ಚಿಟ್ಟಿದ್ದರು.
ಇದೀಗ ಅಂಥದ್ದೇ ಒಂದು ಅತಿ ಕೆಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ನಲ್ಲಿಯೂ ಛಾಪು ಮೂಡಿಸಿರೋ ಪ್ರಿಯಾಂಕಾ ಚೋಪ್ರಾ ಇದಾಗಲೇ ತಮಗಾಗಿದ್ದ ಬಾಡಿ ಷೇಮಿಂಗ್ ಕುರಿತು ಮಾತನಾಡಿದ್ದರು. 'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದರು. ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದರು. 'ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ ಹಿಂಸೆ ಅನುಭವಿಸಿದೆ' ಎಂದಿದ್ದಾರೆ. ಈ ಮೂಲಕ ನಟನಾ ವೃತ್ತಿಯ ಆರಂಭದ ದಿನಗಳಲ್ಲಿ ಅನುಭವಿಸಿದ ಬಾಡಿ ಶೇಮಿಂಗ್ ಕುರಿತು ಹೇಳಿಕೊಂಡಿದ್ದರು.
ಆರಂಭದ ದಿನಗಳಲ್ಲಿ ಕರಿಬೆಕ್ಕು ಎನ್ನುತ್ತಿದ್ದರು: ಘಟನೆ ನೆನೆದು ಭಾವುಕರಾದ Priyanka Chopra
ಇದೀಗ ನಟಿ ತಮಗಾಗಿರುವ ಕಾಸ್ಟಿಂಗ್ ಕೌಚ್ (Casting Couch) ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಹಿಂದಿ ನಿರ್ದೇಶಕನೊಬ್ಬನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ. ‘ಆಗಷ್ಟೇ ನಾನು ಬಾಲಿವುಡ್ಗೆ ಕಾಲಿಟ್ಟಿದ್ದೆ. ನಾನೊಂದು ಸಿನಿಮಾ ಒಪ್ಪಿಕೊಂಡಿದ್ದೆ. ಅದರಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಉಳ ಉಡುಪಗಳನ್ನೆಲ್ಲ ಕಳಚಬೇಕು, ನಾನು ನಿಮ್ಮ ಅಂಡರ್ವೇರ್ ನೋಡಬೇಕು ಎಂದು ಹೇಳಿದರು. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ’ ಎಂಬುದಾಗಿ ಪ್ರಿಯಾಂಕಾ ಚೋಪ್ರಾ ಹಳೆ ಘಟನೆ ನೆನಪಿಸಿಕೊಂಡಿದ್ದಾರೆ.
ಅದು ಅಂಡರ್ ಕವರ್ ಪಾತ್ರವಾಗಿತ್ತು. ಒಬ್ಬ ವ್ಯಕ್ತಿಯನ್ನು ಮಾಯೆ ಮಾಡಿ ಆತನೊಂದಿಗೆ ಶೃಂಗಾರದ ಮೂಲಕ ಹಿಡಿದುಕೊಳ್ಳುವ ಸನ್ನಿವೇಶ ಇತ್ತು. ಈ ದೃಶ್ಯಕ್ಕಾಗಿ ಧರಿಸಿದಂತ ಬಟ್ಟೆಯಲ್ಲೇ ಒಂದು ವಸ್ತ್ರ ತೆಗೆದರೆ ಸಾಕು ಎಂದು ನಾನು ಅಂದುಕೊಂಡಿದ್ದೆ. ಆದರೆ ನಿರ್ದೇಶಕ ಅದಕ್ಕೆ ನಿರಾಕರಿಸಿ ನಾನು ಒಳ ಉಡುಪು ನೋಡಬೇಕು ಎಂದು ಅಸಭ್ಯಕರವಾಗಿ ಹೇಳಿದ್ದರು. ಅದೇ ಮಾದರಿಯಲ್ಲಿ ಕಾಸ್ಟ್ಯೂಮ್ಸ್ ಸಹ ಸಿದ್ಧ ಮಾಡುವಂತೆ ಸ್ಟೈಲಿಷ್ಟ್ ಗೆ ಹೇಳಿದ್ದರು ಎಂದು ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ (Shooting Set) ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನೇನೂ ಹೇಳಲಿಲ್ಲ. ಅವನ ವಿರುದ್ಧ ಮಾತನಾಡಲಿಲ್ಲ. ಆತನ ವಿರುದ್ಧ ಪ್ರತಿಭಟಿಸಲು ನನಗೆ ಭಯವಿತ್ತು ಎಂದಿದ್ದಾರೆ.
Sonali Bendre: ಮಧ್ಯರಾತ್ರಿ ಕರೆ ಮಾಡಿ ಓಡಿಹೋಗೋಣ ಬಾ ಎಂದ: ಭಯಾನಕ ಅನುಭವ ಬಿಚ್ಚಿಟ್ಟ ನಟಿ
‘ನಾನು ಅಂದು ಸುಮ್ಮನೆ ಆ ಸಿನಿ ನಿರ್ಮಾಪಕನ (Producer) ಕಚೇರಿಯಿಂದ ಹೊರಟೆ. ನಿಜಕ್ಕೂ ದಿಗ್ಭ್ರಮೆಯಾಗಿತ್ತು. ಆದರೆ ಈಗಲೂ ಅನ್ನಿಸುತ್ತದೆ, ನಾನು ಅಂದು ಆ ವ್ಯಕ್ತಿಯನ್ನು ಎದುರಿಸಬೇಕಿತ್ತು. ನೀವು ಹೇಳುತ್ತಿರುವುದು ತಪ್ಪು ಎಂದು ಅವರಿಗೆ ಕಠಿಣವಾಗಿ ಹೇಳಬೇಕಿತ್ತು. ಆ ಕ್ಷಣಕ್ಕೆ ಭಯಗೊಂಡು, ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತ್ತು. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ ಎಂದು ಆ ಕರಾಳ ದಿನವನ್ನ ಪ್ರಿಯಾಂಕಾ ರಿವೀಲ್ ಮಾಡಿದ್ದಾರೆ.