ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಶಾಪಿಂಗ್ ನಲ್ಲಿ ಬ್ಯುಸಿ ಇರುವ ಸೋನಾಕ್ಷಿ ವಿಡಿಯೋ ಒಂದು ವೈರಲ್ ಆಗಿದೆ.
ಬಾಲಿವುಡ್ (Bollywood) ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆ ನಂತ್ರ ಪತಿ ಜಹೀರ್ ಇಕ್ಬಾಲ್ ಅವ್ರ ಜೊತೆ ದೇಶ ಸುತ್ತುತ್ತಿದ್ದಾರೆ. ಪ್ರಸ್ತುತ ತಮ್ಮ ಪತಿ ಜಹೀರ್ ಇಕ್ಬಾಲ್ ಜೊತೆ ಸ್ವಿಡ್ಜರ್ಲ್ಯಾಂಡ್ ನಲ್ಲಿದ್ದಾರೆ ಸೋನಾಕ್ಷಿ ಸಿನ್ಹಾ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಖಾನ್, ತಮ್ಮ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಸ್ವಿಡ್ಜರ್ಲ್ಯಾಂಡ್ (Switzerland) ನ ಕೆಲ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಒಂದು ವಿಡಿಯೋದಲ್ಲಿ ಜಹೀರ್ ಖಾನ್, ಸೋನಾಕ್ಷಿ ಜೊತೆ ತಮಾಷೆ ಮಾಡ್ತಿರೋದನ್ನು ನೀವು ಕಾಣ್ಬಹುದು. ಇದಕ್ಕೆ ಸೋನಾಕ್ಷಿ ನೀಡಿದ ರಿಯಾಕ್ಷನ್ ಅಧ್ಬುತವಾಗಿದೆ. ಹೆಣ್ಣು ಮಕ್ಕಳು ಎಲ್ಲೇ ಹೋದ್ರೂ ಶಾಪಿಂಗ್ ಬಿಡೋದಿಲ್ಲ. ಇದಕ್ಕೆ ಸೆಲೆಬ್ರಿಟಿಗಳು ಹೊರತಾಗಿಲ್ಲ. ಸೋನಾಕ್ಷಿ ಸಿನ್ಹಾ ಕೂಡ ಸ್ವಿಡ್ಜರ್ಲ್ಯಾಂಡ್ ನಲ್ಲಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಶಾಪಿಂಗ್ ಬ್ಯಾಗ್ ಕೆಳಗಿಟ್ಟು ಸೋನಾಕ್ಷಿ, ಮತ್ತೇನೋ ಶಾಪಿಂಗ್ ಮಾಡ್ತಿದ್ದಾರೆ. ಹೊರಗೆ ನಿಂತಿದ್ದ ಜಹೀರ್ ಇಕ್ಬಾಲ್, ಸೋನಾಕ್ಷಿಗೆ ತಿಳಿಯದಂತೆ ಕೆಳಗಿಟ್ಟ ಬ್ಯಾಗ್ ತೆಗೆದುಕೊಂಡಿದ್ದಾರೆ. ಶಾಪಿಂಗ್ ನಲ್ಲಿ ಬ್ಯುಸಿಯಿದ್ದ ಸೋನಾಕ್ಷಿ ಕೆಳಗಿಟ್ಟ ಬ್ಯಾಗ್ ನೋಡ್ತಾರೆ. ಆದ್ರೆ ಅಲ್ಲಿ ಬ್ಯಾಗ್ ಇರೋದಿಲ್ಲ. ಸ್ವಲ್ಪ ಆತಂಕಕ್ಕೊಳಗಾಗಿ ಅಲ್ಲಿ ಇಲ್ಲಿ ನೋಡ್ತಾರೆ. ಹೊರಗೆ ನೋಡ್ತಿದ್ದಂತೆ ಜಹೀರ್ ಕೈನಲ್ಲಿ ಬ್ಯಾಗ್ ಇರೋದು ಕಾಣಿಸುತ್ತೆ. ನಂತ್ರ ರಿಲ್ಯಾಕ್ಸ್ ಆಗುವ ಸೋನಾಕ್ಷಿ ಓಡಿ ಬರ್ತಾರೆ.
ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಸೋನಾಕ್ಷಿಗೆ ಒಮ್ಮೆ ಹೃದಯದ ಬಡಿತ ನಿಂತು ಹೋಗಿರ್ಬೇಕು ಅಂತ ಕಮೆಂಟ್ ಮಾಡಿದ್ದಾರೆ. ಇಬ್ಬರ ಜೋಡಿ ಸೂಪರ್. ಇಬ್ಬರು ಸದಾ ತಮಾಷೆಯಾಗಿ, ಜಾಲಿಯಾಗಿರ್ತಾರೆ ಎನ್ನುವ ಕಮೆಂಟ್ ಗಳು ಬಂದಿವೆ.
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್, ಸ್ಟಿಡ್ಜರ್ಲ್ಯಾಂಡ್ ನಲ್ಲಿ ರೋಮ್ಯಾಂಟಿಕ್ ಆಗಿ ತೆಗೆದ ಕೆಲ ಫೋಟೋ, ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಸೋನಾಕ್ಷಿ, ಜಹೀರ್ ಗೆ ಮುತ್ತಿಡುತ್ತಿರೋದನ್ನು ನೀವು ಕಾಣ್ಬಹುದು. ಇನ್ನೊಂದು ವಿಡಿಯೋ ಹಂಚಿಕೊಂಡಿದ್ದು, ರಾಂಗ್ ನಂಬರ್ ಅಂತ ಶೀರ್ಷಿಕೆ ಹಾಕಿದ್ದಾರೆ.
7 ವರ್ಷಗಳ ಡೇಟಿಂಗ್ ನಂತ್ರ ಮದುವೆ : ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಕಳೆದ ವರ್ಷ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ. ಇದಕ್ಕೂ ಮೊದಲು, ಇಬ್ಬರೂ ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಆದರೆ ಯಾರಿಗೂ ಅವ್ರ ಪ್ರೀತಿ ವಿಷ್ಯ ಗೊತ್ತಾಗಿರಲಿಲ್ಲ. ಕೊರೊನಾ ಟೈಂನಲ್ಲಿ ಫೋಟೋ ಹಂಚಿಕೊಂಡಿದ್ದ ಸೋನಾಕ್ಷಿ ಎಂಗೇಜ್ಮೆಂಟ್ ರಿಂಗ್ ತೋರಿಸಿದ್ದರು. ಆದ್ರೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದು ಯಾರ ಜೊತೆ ಎಂಬುದನ್ನು ಹೇಳಿರಲಿಲ್ಲ. ಹಿಂದಿನ ವರ್ಷ ಇಬ್ಬರೂ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದು ಸಾಕಷ್ಟು ಚರ್ಚೆಯಾಗಿದ್ದು. ಇಬ್ಬರೂ ಬೇರೆ ಬೇರೆ ಧರ್ಮದವರಾದ ಕಾರಣ, ಮನೆಯವರಿಗೆ ಇಷ್ಟವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಯಾವ ಮಾತಿಗೂ ತಲೆಕೊಡದೆ ಸೋನಾಕ್ಷಿ, ಜಹೀರ್ ಇಕ್ಬಾಲ್ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಪತಿ ಜೊತೆ ಮಸ್ತಿ ಮಾಡುವ ಸಾಕಷ್ಟು ವಿಡಿಯೋಗಳನ್ನು ಅವರು ಪೋಸ್ಟ್ ಮಾಡ್ತಿರುತ್ತಾರೆ. ಸದ್ಯ ಸೋನಾಕ್ಷಿ ನಿಕಿತಾ ರಾಯ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಇದೇ ಜುಲೈ 18 ರಂದು ಬಿಡುಗಡೆಯಾಗಲಿದೆ. ಇದನ್ನು ಸೋನಾಕ್ಷಿ ಸಹೋದರ ಕುಶ್ ಸಿನ್ಹಾ ನಿರ್ದೇಶಿಸಿದ್ದಾರೆ. ಅರ್ಜುನ್ ರಾಂಪಾಲ್ ಮತ್ತು ಪರೇಶ್ ರಾವಲ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
