ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನ ಅಣ್ಣನ ಪಾತ್ರದಲ್ಲಿ ಮಿಂಚಿದ್ದಾರೆ. ಭಾರೀ ಹೈಟು-ಪರ್ಸನಾಲಿಟಿ ಹೊಂದಿರುವ ದರ್ಶನ್,  ಈ ಚಿತ್ರದಲ್ಲಿ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಗರಡಿ ಚಿತ್ರದಕ್ಕೆ ಕಿರೀಟ ಮೂಡಿದೆ. ದರ್ಶನ್ ತೆರೆಯ ಮೇಲೆ ಸ್ವಲ್ಪ ಟೈಮ್ ಕಾಣಿಸಿಕೊಂಡರೂ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ನಿರೀಕ್ಷೆ ನಿಜವಾಗಬಹುದೆಂಬ ನಂಬಿಕೆ ಫ್ಯಾನ್ಸ್ ಮನದಲ್ಲಿದೆ. 

ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾದ 'ಟೈಟಲ್ ಟ್ರಾಕ್' ಬಿಡುಗಡೆಯಾಗಿದೆ. "ಏನೇ ಬರಲಿ ರಟ್ಟೆ ತಟ್ಟು.." ಎಂದು ಪ್ರಾರಂಭವಾಗುವ ಗರಡಿ ಸಾಂಗ್ ಕಂಪ್ಲೀಟ್ 'ಮಾಸ್ ಅಫೀಲ್' ಹೊಂದಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಸಾಂಗ್, ನಾಯಕ ಸೂರ್ಯ 'ಗರಡಿ ಮನೆ ಸುತ್ತಲ ಸೆಟ್‌'ನಲ್ಲಿ ಹಾಡಿ ಕುಣಿಯುವ ದೃಶ್ಯ ವೈಭವ ಹೊಂದಿದೆ. ಹಾಡು ನೋಡಿದರೆ ಗರಡಿ ಚಿತ್ರ ಕೂಡ ಮಾಸ್ ಫೀಲ್ ಹೊಂದಿದೆ ಎಂಬ ಅಭಿಪ್ರಾಯ ಮೂಡುವಂತಿದೆ. 

ನಾಯಕ ಸೂರ್ಯ ಗರಡಿ ಮನೆ ಸೆಟ್‌ನಲ್ಲಿ ಗರಡಿ ಶಾಲೆಯ ಹುಡುಗರೊಂದಿಗೆ ಸಖತ್ ಜೋಶ್‌ನಲ್ಲಿ ಡಾನ್ಸ್ ಮಾಡುತ್ತಿದ್ದರೆ, ಹಿರಿಯ ನಟ 'ಕೌರವ' ಖ್ಯಾತಿಯ ಬಿಸಿ ಪಾಟೀಲ್ ಹಾಡಿನಲ್ಲಿ ಕಾಣಿಸಿಕೊಂಡು ಹಾಡಿಗೆ ಇನ್ನಷ್ಟು ಖದರ್ ತುಂಬಿದ್ದಾರೆ. ಹಾಡಿನ ಹಿನ್ನೆಲೆಯಲ್ಲಿ ಗರಡಿ ಮನೆ ಸೆಟ್‌ ಸಂಪೂರ್ಣ ಧೂಳುಮಯವಾಗಿದ್ದು, ಇಡೀ ಹಾಡಿಗೆ ತೆಳುಗೆಂಪು ಬಣ್ಣ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗರಡಿ ಟ್ರಾಕ್ ಮ್ಯೂಸಿಕ್ ಕೇಳುಗರನ್ನು ಕುಣಿಸುವಂತಿದ್ದು, ಚಿತ್ರ ನೋಡುವ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. 

ವಿ ಹರಿಕೃಷ್ಣ ಸಂಗೀತ ಹಾಗೂ ಮೇಘನಾ ಹಳಿಯಾಳ್ ಧ್ವನಿಯಲ್ಲಿ ಮೂಡಿಬಂದಿರುವ 'ಹೊಡಿರಲೆ ಹಲಗಿ' ಹಾಡು ಈಗಾಗಲೇ ಧೂಳೆಬ್ಬಿಸಿದೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಿಗೆ ಮತ್ತು ಹುಡುಗರ ಬಾಡಿಗೆ ಕಿಕ್ಕೇರುವಂತೆ ಕುಣಿದಿದ್ದು ಥಿಯೇಟರ್‌ನಲ್ಲಿ ಮತ್ತೆ ಮತ್ತೆ ನೋಡಿವಂತಿದೆ ಎಂಬಷ್ಟು ಮೋಡಿ ಮಾಡಿದ್ದಾರೆ. ನಾಯಕಿಯಾಗಿ ಸೋನಲ್ ಮಂಥೆರೋ ನಟಿಸಿದ್ದು, ವಿಲನ್ ಪಾತ್ರದಲ್ಲಿ ನಟ ರವಿಶಂಕರ್ ಗರಡಿ ಮನೆಯ ಮೈದಾನದಲ್ಲಿ ಭಾರೀ ಧೂಳೆಬ್ಬಿಸಿದ್ದಾರೆ ಎನ್ನಲಾಗಿದೆ.

ಗರಡಿ ಸಿನಿಮಾದಲ್ಲಿ ಸೂರ್ಯ ನಾಯಕನಟರಾಗಿ ನಟಿಸಿದ್ದು 'ಪೈಲ್ವಾನ್' ಪಾತ್ರ ಮಾಡಿದ್ದಾರೆ. ಫಿಟ್‌ನೆಸ್ ಹಾಗೂ ಪೈಲ್ವಾನ್ ಪಾತ್ರದ 'ವಿಶೇಷ ಲುಕ್‌'ಗಾಗಿ ನಟ ಸೂರ್ಯ ಜಿಮ್‌ನಲ್ಲಿ ಬೆವರಿಸಿಳಿಸುವ ಜತೆಗೆ ಸೂಕ್ತ ಡಯಟ್ ಪ್ಲಾನ್ ಕೂಡ ಮಾಡಿಕೊಂಡು ದೇಹವನ್ನು ಹುರಿಗೊಳಿಸಿಕೊಂಡಿರುವುದು ಹಾಡಿನಲ್ಲಿ ಸಾಕ್ಷಿಯಂತೆ ಕಾಣಿಸುತ್ತಿದೆ. 

ಮತ್ತೆ ಮೋಡಿ ಮಾಡಲು ರೆಡಿಯಾದ ಯೋಗರಾಜ್ ಭಟ್; ಗರಡಿ ಕಮಾಲ್‌ಗೆ ಮುಹೂರ್ತ ಫಿಕ್ಸ್

ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ನಿರ್ಮಾಣದ 'ಗರಡಿ' ಚಿತ್ರದಲ್ಲಿ ನಟ ಹಾಗೂ ಮಾಜಿ ಶಾಸಕ ಬಿಸಿ ಪಾಟೀಲ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಬಿಸಿ ಪಾಟೀಲ್ ಚಿತ್ರವೊಂದರಲ್ಲಿ ನಟಿಸಿದ್ದು, ಸಹಜವಾಗಿಯೇ ಅವರ ಪಾತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಚಿತ್ರದಲ್ಲಿ ನಾಯಕನ 'ಗುರು'ವಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅದಿತಿ ಪ್ರಭುದೇವ 'ಅಲೆಕ್ಸಾ' ಚಿತ್ರದ ಬಿಡುಗಡೆ ನವೆಂಬರ್ 3ಕ್ಕೆ!

ಇತ್ತೀಚೆಗೆ 'ಗಾಳಿಪಟ-2' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಪ್ರೇಕ್ಷಕರಿಗೆ ಕಮಾಲ್ ಮಾಡಿದ್ದ ಯೋಗರಾಜ್ ಭಟ್ಟರು, ಮತ್ತೆ 'ಗರಡಿ' ಮೂಲಕ ಇನ್ನೂ ಹೆಚ್ಚಿನ ಮೋಡಿ ಮಾಡುವ ವಿಶ್ವಾಸ ಹೊಂದಿದ್ದಾರೆ. ಸದ್ಯ ಗರಡಿ ಟೀಮ್ ಜತೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಹೀರೋ ಯಶಸ್ ಸೂರ್ಯ. ಅಂದಹಾಗೆ, ಗರಡಿ ಚಿತ್ರವು ನವೆಂಬರ್ 10 ರಂದು (10 ನವೆಂಬರ್ 2023) ರಿಲೀಸ್ ಆಗಲಿದೆ.