KGF 2; OTTಯಲ್ಲಿ ದಾಖಲೆ ಬರೆಯಲು ಸಜ್ಜಾದ ರಾಕಿ ಭಾಯ್, ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಡೇಟ್ ಫಿಕ್ಸ್
ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ಕೆಜಿಎಫ್-2 ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಕೆಜಿಎಫ್-2 ಸಿನಿಮಾ ಜೂನ್ 3ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ. ಅಂದಹಾಗೆ KGF 2 ಒಟಿಟಿಗಳ ದೈತ್ಯಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashnth Neel) ಕಾಂಬಿನೇಷನ್‌ನಲ್ಲಿ ಬಂದ ಕೆಜಿಎಫ್-2(KGF 2) ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ(OTT Streaming ) ಸಜ್ಜಾಗಿದೆ. ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿರುವ ಕೆಜಿಎಫ್-2 ಇದೀಗ ಒಟಿಟಿಯಲ್ಲೂ ದಾಖಲೆ ಬರೆಯಲು ಸಿದ್ದವಾಗಿದೆ. ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2 ಸಿನಿಮಾ ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ.
ಕೆಜಿಎಫ್-2 ಸಿನಿಮಾ ಜೂನ್ 3ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ. ಅಂದಹಾಗೆ ಒಟಿಟಿಗಳ ದೈತ್ಯಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ(Amazon Prime Video) ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಮೆಜಾನ್ ಪ್ರೈಮ್ ಚಂದಾದರರಾಗಿರುವರು ಕೆಜಿಎಫ್-2 ಸಿನಿಮಾವನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು. ಅಂದಹಾಗೆ ಕೆಜಿಎಫ್-2 ಈಗಾಗಲೇ ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿತ್ತು. ಆದರೆ ಹಣ ಕೊಟ್ಟು ವೀಕ್ಷಿಸಬೇಕಿತ್ತು. ಇದೀಗ ಉಚಿತ ವೀಕ್ಷಣಗೆ ಲಭ್ಯವಾಗುತ್ತಿದೆ.
ಈ ಮೂಲಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು ಹಾಗೂ ಮತ್ತೆ ಮತ್ತೆ ಸಿನಿಮಾ ನೋಡಬೇಕು ಎಂದುಕೊಂಡವರು ಒಟಿಟಿಯಲ್ಲಿ ನೋಡಿ ಆನಂದಿಸಬಹುದು. ಅಂದಹಾಗೆ ಕೆಜಿಎಫ್-2 ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ತೆರೆಗೆ ಬಂದಿದೆ. ಸದ್ಯ ಒಟಿಟಿಯಲ್ಲೂ ಎಲ್ಲಾಭಾಷೆಯಲ್ಲೂ ಸಿನಿಮಾ ಲಭ್ಯವಿರಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿದ್ದು ಆಯಾಯ ಭಾಷೆಯ ಪ್ರೇಕ್ಷಕರು ಅವರ ಭಾಷೆಯಲ್ಲೆ ಸಿನಿಮಾ ವೀಕ್ಷಿಸಬಹುದು.
KGF ರಾಕಿ ಭಾಯ್ ಸ್ಫೂರ್ತಿ; ಒಂದು ಪ್ಯಾಕ್ ಸಿಗರೇಟ್ ಸೇದಿ 15 ವರ್ಷದ ಬಾಲಕ ಅಸ್ವಸ್ಥ
2018 ರಲ್ಲಿ ತೆರೆಕಂಡ ಕೆಜಿಎಫ್: ಚಾಪ್ಟರ್ 1 ರ ಮುಂದುವರಿದ ಭಾಗ ಚಾಪ್ಟರ್ 2. ಪಾರ್ಟ್-2 ನಲ್ಲಿ ರಾಕಿ ಭಾಯ್ ತನ್ನ ಮಿತ್ರರ ಜೊತೆಗೆ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದ್ದರೆ, ಸರ್ಕಾರ ಇವನನ್ನು ಮುಗಿಸಲು ಹೊಂಚು ಹಾಕುತ್ತಿರುತ್ತದೆ. ರಾಕಿ ಎಲ್ಲ ಕಡೆಯಿಂದಲೂ ಎದುರಾಗುವ ಶತ್ರುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಈ ಚಾಪ್ಟರ್‌ನಲ್ಲಿನ ಕುತೂಹಲಕರ ಸಂಗತಿಯಾಗಿದೆ. ನಾರಾಚಿಯಲ್ಲಿನ ಜನರಿಗೆ ಈತ ಹೀರೋ ಆದರೆ, ತನ್ನ ತಾಯಿಯ ಕನಸನ್ನು ಪೂರೈಸುವುದಕ್ಕೆ ಅಧೀರ, ಇನಾಯತ್ ಖಲೀಲ್ ಮತ್ತು ರಮಿಕಾ ಸೇನ್‌ರಿಂದ ಪ್ರತಿರೋಧವನ್ನೂ ಎದುರಿಸುತ್ತಾನೆ.
ಬಿಕಿನಿಯಲ್ಲಿ ಮಿಂಚಿದ KGF 2 ನಟಿ ಶ್ರೀನಿಧಿ ಶೆಟ್ಟಿ; ಹಳೆ ಫೋಟೋ ವೈರಲ್
ಕೆಜಿಎಫ್-2ನಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ಸಂಜಯ್ ದತ್, ನಟಿ ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್, ಈಶ್ವರಿ ರಾವ್, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್ ಹಾಗೂ ಇತರರು ಪ್ರಮುಖ ಪಾತ್ರದಲ್ಲಿದ್ದಾರೆ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್:ಚಾಪ್ಟರ್ 2 ಅನ್ನು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.