ಬಿಕಿನಿಯಲ್ಲಿ ಮಿಂಚಿದ KGF 2 ನಟಿ ಶ್ರೀನಿಧಿ ಶೆಟ್ಟಿ; ಹಳೆ ಫೋಟೋ ವೈರಲ್
ಶ್ರೀನಿಧಿ ಶೆಟ್ಟಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲು ಮಾಡೆಲ್ ಆಗಿ ಖ್ಯಾತಿಗಳಿಸಿದ್ದರು. 2015ರಲ್ಲಿ ಶ್ರೀನಿಧಿ ಶೆಟ್ಟಿ ಮಿಸ್ ಕರ್ನಾಟಕ ಆಗಿ ಹೊರಹೊಮ್ಮಿದ್ದರು. 2016ರಲ್ಲಿ ಮಿಸ್ ಸೂಪ್ರಾನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮಿಸ್ ದಿವಾ ಕಿರೀಟವನ್ನು ಗೆದ್ದು ಬೀಗಿದ್ದರು.
ಕೆಜಿಎಫ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ. ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಯಶಸ್ಸು ಕಂಡ ನಟಿ ಶ್ರೀನಿಧಿ ಶೆಟ್ಟಿ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್-2 ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿದೆ.
ಕೆಜಿಎಫ್ ಸಿನಿಮಾದಲ್ಲಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ. ಒಂದೇ ಸಿನಿಮಾಗಾಗಿ ತನ್ನ ಸಿನಿ ಜೀವನದ ಅನೇಕ ವರ್ಷಗಳನ್ನು ಮೀಸಲಿಡುವ ಮೂಲಕ ನಟಿ ಶ್ರೀನಿಧಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.
ಅಂದಹಾಗೆ ಶ್ರೀನಿಧಿ ಶೆಟ್ಟಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲು ಮಾಡೆಲ್ ಆಗಿ ಖ್ಯಾತಿಗಳಿಸಿದ್ದರು. 2015ರಲ್ಲಿ ಶ್ರೀನಿಧಿ ಶೆಟ್ಟಿ ಮಿಸ್ ಕರ್ನಾಟಕ ಆಗಿ ಹೊರಹೊಮ್ಮಿದ್ದರು. 2016ರಲ್ಲಿ ಮಿಸ್ ಸೂಪ್ರಾನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮಿಸ್ ದಿವಾ ಕಿರೀಟವನ್ನು ಗೆದ್ದು ಬೀಗಿದ್ದರು.
ಕೆಜಿಎಫ್ ಸಿನಿಮಾದಲ್ಲಿ ರೀನಾ ಆಗಿ ಮಿಂಚಿದ್ದ ನಟಿ ಶ್ರೀನಿಧಿ ಶೆಟ್ಟಿ ಅವರ ಹಳೆಯ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಬಿಕಿನಿ ತೊಟ್ಟು ಕ್ಯಾಂಪ್ ಮೇಲೆ ಹೆಜ್ಜೆಹಾಕಿದ್ದ ಶ್ರೀನಿಧಿಯ ಹಳೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶ್ರೀನಿಧಿ ಶೆಟ್ಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಕಾರ್ಯಕ್ರಮ ಅಥವಾ ಕೆಜಿಎಫ್ ಸಿನಿಮಾ ಪ್ರಮೋಷನ್ ಗಳಲ್ಲೂ ಶ್ರೀನಿಧಿ ಸರಳವಾದ ಸಹಜ ಉಡುಗೆಯಲ್ಲಿ ಮಿಂಚಿದ್ದರು. ಹಾಗಾಗಿ ಶ್ರೀನಿಧಿ ಬಿಕಿನಿಯಲ್ಲಿ ಮಿಂಚಿದ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಬಳಿಕ ಶ್ರೀನಿಧಿ ನಟಿಸಿದ ಸಿನಿಮಾ ತಮಿಳಿನ ಕೋಬ್ರ. ವಿಕ್ರಮ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಸಿ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ.