Asianet Suvarna News Asianet Suvarna News

KGF 2 Collection; 5ನೇ ದಿನದ ಹಿಂದಿ ಗಳಿಕೆಯ ಸಂಪೂರ್ಣ ಲೆಕ್ಕಾ ಇಲ್ಲಿದೆ

ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿದ್ದಾರೆ. ಕೆಜಿಎಫ್-2 ಬಿಡುಗಡೆಯಾಗಿ 5ನೇ ದಿನ ಹಿಂದಿಯಲ್ಲಿ 25.57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 219.56 ಕೋಟಿ ಬಾಚಿಕೊಂಡಿದೆ ಎಂದು ಹೇಳಿದ್ದಾರೆ.

 

yash starrer KGF 2 hindi version earn 25 crore in day 5
Author
Bengaluru, First Published Apr 19, 2022, 3:19 PM IST

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಹವಾಗೆ ಬಾಲಿವುಡ್ ಮಂಕಾಗಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿ 200 ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್-2 ಮತ್ತೊಂದು ದಾಖಲೆ ಮಾಡಿದೆ. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಅನ್ನು ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ.

ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಕೆಜಿಎಫ್-2 ಹಿಂದಿಯಲ್ಲಿ 193 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ 5ನೇ ದಿನಕ್ಕೆ 200 ಕೋಟಿ ರೂಪಾಯಿಗೂ ಅಧಿಕ ಬಾಚಿಕೊಳ್ಳುವ ಮೂಲಕ ಕಡಿಮೆ ಅವಧಿಯಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಕೆಜಿಎಫ್-2 ಪಾಲಿಗಿದೆ.

ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿದ್ದಾರೆ. ಕೆಜಿಎಫ್-2 ಬಿಡುಗಡೆಯಾಗಿ 5ನೇ ದಿನ ಹಿಂದಿಯಲ್ಲಿ 25.57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 219.56 ಕೋಟಿ ಬಾಚಿಕೊಂಡಿದೆ ಎಂದು ಹೇಳಿದ್ದಾರೆ.

KGF 2 ಆರ್ಭಟಕ್ಕೆ ಮಂಕಾದ ಬಾಲಿವುಡ್; ಹಿಂದಿಯಲ್ಲಿ 193 ಕೋಟಿ ರೂ. ಬಾಚಿದ ರಾಕಿ ಭಾಯ್

ಕೆಜಿಎಫ್-2 ಬಿಡುಗಡೆಯಾಗಿ 5ನೇ ದಿನಕ್ಕೆ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅಂದಹಾಗೆ ಬಾಹುಬಲಿ ಸಿನಿಮಾ 6ನೇ ದಿನ 200 ಕೋಟಿ ಬ್ಲಕ್ ಸೇರಿತ್ತು. ಗುರುವಾಗ 53.95 ಕೋಟಿ ರೂ., ಶುಕ್ರವಾರ 46.79 ಕೋಟಿ ರೂ., ಶನಿವಾರ 42.90 ಕೋಟಿ ರೂ., ಭಾನುವಾರ 50.35 ಕೋಟಿ ರೂ. ಸೋಮವಾರ 25.57 ಕೋಟಿ ರೂ. ಒಟ್ಟು 219.56 ಕೋಟಿ ರೂಪಾಯಿ ಹಿಂದಿಯಲ್ಲಿ ಕಲೆಕ್ಷನ್ ಮಾಡಿದೆ.

ಸದ್ಯ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದೆ ಸದ್ದು. ಎಲ್ಲಾ ಭಾಷೆಯಲ್ಲೂ ಕೆಜಿಎಫ್-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕೆಜಿಎಫ್-2 ನೋಡಿ ಹಾಡಿಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕೆಜಿಎಫ್2 ಸಿನಿಮಾದ್ದೇ ಸದ್ದು. ಸಿನಿಮಾ ಬಿಡುಗಡೆಯಾಗಿ 6ದಿನಗಳಾದರೂ ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ.


KGF 2 ಎಡಿಟರ್ 19 ವರ್ಷದ ಉಜ್ವಲ್ ಅನ್ನು ಪ್ರಶಾಂತ್ ಆಯ್ಕೆ ಮಾಡಿದ್ದೇಗೆ; ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

 

ಬಾಕ್ಸ್ ಆಫೀಸ್ ನಲ್ಲಿ ಆರ್ಭಟಿಸುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ 540 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮೊದಲ ದಿನ 165.37 ಕೋಟಿ ರೂ. ಎರಡನೇ ದಿನ 139.25 ಕೋಟಿ ರೂ. ಮೂರನೇ ದಿನ 115.08 ಕೋಟಿ ರೂ. ಒಟ್ಟು ಜಗತ್ತಿನಾದ್ಯಂತ 546 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

Latest Videos
Follow Us:
Download App:
  • android
  • ios