KGF 2 ಎಡಿಟರ್ 19 ವರ್ಷದ ಉಜ್ವಲ್ ಅನ್ನು ಪ್ರಶಾಂತ್ ಆಯ್ಕೆ ಮಾಡಿದ್ದೇಗೆ; ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

KGF2 ಸಿನಿಮಾದಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ 19 ವರ್ಷದ ಯುವಕ ಉಜ್ವಲ್ ನನ್ನು ಆಯ್ಕೆ ಮಾಡಿದ್ದರ ಹಿಂದೆ ಇಂಟ್ರಸ್ಟಿಂಗ್ ಸಂಗತಿಯಿದೆ. ಯಾವುದೇ ಸಿನಿಮಾದಲ್ಲಿ ಕೆಲಸ ಮಾಡದ ಉಜ್ವಲ್ ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಗುರುತಿಸಿ ಕೆಜಿಎಫ್-2 ಸಿನಿಮಾಗೆ ಆಯ್ಕೆ ಮಾಡಿದ್ದಾರೆ. 

interesting facts about KGF 2 editor Ujwal Kulkarni

ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashanth Neel) ಕಾಂಬಿನೇಷನ್ KGF 2 ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ದಾಖಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಈಗಾಗಲೇ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಸಿನಿಮಾ ಬಿಡುಗಡೆಯಾಗಿ 3 ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬೀಗುತ್ತಿರುವ ಕೆಜಿಎಫ್-2 ಬಾಲಿವುಡ್ ನಲ್ಲಿ ಇತಿಹಾಸ ಸೃಷ್ಟಿಸಿದೆ. ಘಟಾನುಘಟಿ ಸ್ಟಾರ್ ಕಲಾವಿದರನ್ನು ಹಿಂದಿಕ್ಕಿ ಯಶ್ ಕೆಜಿಎಫ್-2 ರಾರಾಜಿಸುತ್ತಿದೆ. ಎಲ್ಲಾ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕಲಾವಿದರು ಸಹ ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಹ ಸಿನಿಮಾ ವೀಕ್ಷಿಸಿ ಹಾಡಿಹೊಗಳಿದ್ದಾರೆ.

ಇದು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಚಾರವಾಗಿದೆ. ಅಷ್ಟೆಯಲ್ಲ ಕೆಜಿಎಫ್-2 ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬರು ಸಹ ಹೀರೋ ಆಗಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಕೆಲವು ವ್ಯಕ್ತಿಗಳ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾದ ಎಡಿಟರ್ ಕೇವಲ 19 ವರ್ಷದ ಯುವಕ ಉಜ್ವಲ್ ಕುಲಕರ್ಣಿ(Ujwal Kulkarni). ಈ ಉಜ್ವಲ್ ಅವರನ್ನು ಸಿನಿಮಾ ಎಡಿಟರ್ ಆಗಿ ಆಯ್ಕೆ ಮಾಡಿದ ಸಂಗತಿ ನಿಜಕ್ಕೂ ಇಂಟ್ರಸ್ಟಿಂಗ್ ಆಗಿದೆ.

ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಎಡಿಟ್ ಮಾಡಿ ಸೈ ಎನಿಸಿಕೊಳ್ಳುವುದು ನಿಜಕ್ಕೂ ಒಂದು ಸಾಧನೆ. ಉಜ್ವಲ್ ಗೆ ಕೆಜಿಎಫ್-2 ಚೊಚ್ಚಲ ಸಿನಿಮಾ. ಈ ಮೊದಲು ಯಾವ ಸಿನಿಮಾವನ್ನು ಎಡಿಟ್ ಮಾಡಿರಲಿಲ್ಲ. ಮೊದಲ ಸಿನಿಮಾವೇ ಇಷ್ಟು ಕೆಜಿಎಫ್-2 ಆಗಿರುವುದು ಉಜ್ವಲ್ ಕುಲಕರ್ಣಿ ವೃತ್ತಿ ಜೀವನದ ಒಂದು ದೊಡ್ಡ ಮೈಲಿಗಲ್ಲು. ಅಂದಹಾಗೆ ಉಜ್ವಲ್ ಅವರಿಗೂ ಇಷ್ಟು ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎನ್ನುವ ಸುಳಿವು ಕೂಡ ಇರಲಿಲ್ಲ ಅನ್ಸುತ್ತೆ. ಯಾಕೆಂದರೆ ಉಜ್ವಲ್ ಯಾವುದೇ ಸಿನಿಮಾಗಳಲ್ಲಿ ಕೆಲಸ ಮಾಡಿದ್ದವರಲ್ಲ. ಉಜ್ವಲ್ ಅವರನ್ನು ಕೆಜಿಎಫ್-2 ಸಿನಿಮಾಗೆ ಆಯ್ಕೆ ಮಾಡಿದ್ದು ಯೂಟ್ಯೂಬ್ ನಲ್ಲಿ ಎಡಿಟ್ ಮಾಡಿದ ಶೈಲಿ ನೋಡಿ. ಕೆಜಿಎಫ್ 1 ಬಿಡುಗಡೆಯಾದ ಸಮಯದಲ್ಲಿ ಒಂದು ವಿಡಿಯೋವನ್ನು ಎಡಿಟ್ ಮಾಡಿ ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದರು. ಫ್ಯಾನ್ ಮೇಡ್ ವಿಡಿಯೋ ನೋಡಿ ಇಂಪ್ರೆಸ್ ಆದ ಪ್ರಶಾಂತ್ ನೀಲ್ ಮತ್ತು ಅವರ ಪತ್ನಿ ಉಜ್ವಲ್ ಅವರನ್ನು ಕರೆಸಿ ಕೆಜಿಎಫ್-2 ಸಿನಿಮಾದ ಎಡಿಟಿಂಗ್ ಜವಾಬ್ದಾರಿ ವಹಿಸಿದ್ದರು.

ಕೆಜಿಎಫ್-2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್, ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!

ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಸಹ ಮೆಚ್ಚುಗೆ ಮಾತಾನಾಡಿದ್ದರು. ಸಂದರ್ಶನ ವೊಂದರಲ್ಲಿ ಮಾತನಾಡಿದ್ದ ಯಶ್ ಉಜ್ವಲ್ ಅವರನ್ನು ಹೇಗೆ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದ್ದರು. ಪಾರ್ಟ್-1 ಬಿಡುಗಡೆ ವೇಳೆ ಸೆಲೆಬ್ರೇಷನ್ ಮತ್ತು ಫ್ಯಾನ್ಸ್ ವಿಡಿಯೋಗಳನ್ನು ಎಡಿಟ್ ಮಾಡಿ ಶೇರ್ ಮಾಡಿದ್ದ ಉಜ್ವಲ್ ಕೆಲಸ ನೋಡಿ ಪ್ರಶಾಂತ್ ನೀಲ್ ಪತ್ನಿ ಕರೆದು ಕೆಜಿಎಫ್-2 ಸಿನಿಮಾ ಎಡಿಟರ್ ಸ್ಥಾನದಲ್ಲಿ ಕೂರಿಸಿದರು ಎಂದಿದ್ದರು. ಕೆಜಿಎಫ್-2 ಸಿನಿಮಾದ ಎಡಿಟಿಂಗ್ ಕೂಡ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಸಿನಿಮಾದ ಎಡಿಟಿಂಗ್ ಜವಾಬ್ದಾರಿ ವಹಿಸಿಕೊಂಡು ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ ರೀತಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.


KGF Chapter 2: ಕೆಜಿಎಫ್ ರಣಧೀರನ ಆರ್ಭಟಕ್ಕೆ ಬೆಚ್ಚಿದ ಬಾಲಿವುಡ್!

 

ಕೆಜಿಎಫ್-2 ಸಿನಿಮಾ ಭಾರತೀಯ ಸಿನಿಮಾರಂಗದ ಮೈಲುಗಲ್ಲು. ಎಲ್ಲಾ ಸಿನಿಮಾಗಳ ದಾಖಲೆ ಬ್ರೇಕ್ ಮಾಡಿ ಇತಿಹಾಸ ಸೃಷ್ಟಿಸಿರುವ ಕೆಜಿಎಫ್-2 4ನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 4ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios