Asianet Suvarna News Asianet Suvarna News

1000 ಕೋಟಿ ರೂ. ಗಡಿದಾಟಿದ KGF 2; 4ನೇ ಸ್ಥಾನದಲ್ಲಿ ಯಶ್ ಸಿನಿಮಾ

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಹಿಂದಿಯಲ್ಲಿ ಈಗಾಗಲೇ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬೀಗುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ ಕೆಜಿಎಫ್-2 ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.

Yash starrer KGF 2 crosses Rs 1000 cr gross worldwide and is 4th Indian film to achieve the feat sgk
Author
Bengaluru, First Published Apr 30, 2022, 12:58 PM IST

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಹಿಂದಿಯಲ್ಲಿ ಈಗಾಗಲೇ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬೀಗುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ ಕೆಜಿಎಫ್-2 ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಗಳಿಕೆ(KGF 2 crosses Rs 1000 cr) ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಭಾರತದಲ್ಲಿ ಈ ಸಾಧನೆ ಮಾಡಿದ 4ನೇ ಸಿನಿಮಾ ಕೆಜಿಎಫ್-2 ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದೆ.

ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಮೊದಲೇ ಅನೇಕ ದಾಖಲೆಗಳನ್ನು ಮಾಡಿತ್ತು. ಬಿಡುಗಡೆ ಬಳಿಕವೂ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಅನೇಕ ಘಟಾನುಘಟಿ ಕಲಾವಿದರ ಸಿನಿಮಾಗಳನ್ನು ಹಿಂದಿಕ್ಕಿ 1000 ಕೋಟಿ ಗಡಿ ದಾಟಿದೆ. ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ರಾಜಮೌಳಿ ನಿರ್ದೇಶಕ ಆರ್ ಆರ್ ಆರ್ ಸಿನಿಮಾ 1000 ಕೋಟಿ ರೂಪಾಯಿ ಗಡಿ ದಾಟಿದೆ. ಈ ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡಿತ್ತು. ಕೆಜಿಎಫ್-2 ಸಿನಿಮಾ ಕೂಡ 16 ದಿನಗಳಲ್ಲಿ 1000 ಕೋಟಿ ಗಡಿ ದಾಟಿದೆ.

ಈ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಕೆಜಿಎಫ್-2 ಕಲೆಕ್ಷನ್ ಅಪ್ ಡೇಟ್ ನೀಡಿರುವ ರಮೇಶ್ ಬಾಲ 1000 ಕೋಟಿ ರೂ. ಗಡಿದಾಟಿರುವ ವಿಚಾರ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಭಾರತೀಯ ಸಿನಿಮಾರಂಗದಲ್ಲಿ 1000 ಕೋಟಿ ಗಡಿದಾಟಿದ 4ನೇ ಸಿನಿಮಾ ಕೆಜಿಎಫ್-2 ಆಗಿದೆ. ಈ ಮೊದಲ ಸ್ಥಾನದಲ್ಲಿ ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾವಿದೆ. 2ನೇ ಸ್ಥಾನದಲ್ಲಿ ಬಾಹುಬಲಿ-2 ಚಿತ್ರವಿದ್ದರೇ 3ನೇ ಸ್ಥಾನದಲ್ಲಿ ಆರ್ ಆರ್ ಆರ್ ಸಿನಿಮಾವಿದೆ.

ಗೋವಾ ಸಮುದ್ರ ತೀರದಲ್ಲಿ KGF 2 ತಂಡದ ಗೆಲುವಿನ ಸಂಭ್ರಮ

ಭಾರತದ ಟಾಪ್ 3 ಸಿನಿಮಾಗಳ ಕಲೆಕ್ಷನ್ ವಿವರ

ಮೊದಲ ಸ್ಥಾನದಲ್ಲಿರುವ ದಂಗಲ್(Dangal) ಸಿನಿಮಾ 2024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 1810 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಹುಬಲಿ -2(Bahubali 2) ಎರಡನೇ ಸ್ಥಾನದಲ್ಲಿದೆ. ಆರ್ ಆರ್ ಆರ್ 1100 ಕೋಟಿಯ ಕಡಿ ದಾಟುವ ಮೂಲಕ 3ನೇ ಸ್ಥಾನದಲ್ಲಿದೆ. ಇದೀಗ 1000 ಕೋಟಿ ಗಳಿಕೆ ಮಾಡುವ ಮೂಲಕ 4ನೇ ಸ್ಥಾನದಲ್ಲಿದೆ ರಾಕಿ ಭಾಯ್ ಕೆಜಿಎಫ್-2. 

KGF 2 ಅಬ್ಬರದ ನಡುವೆಯೂ 1100 ಕೋಟಿ ರೂ.ಬಾಚಿದ RRR; ಸಂಪೂರ್ಣ ಲೆಕ್ಕ ಇಲ್ಲಿದೆ

ಹಿಂದಿ ಕಲೆಕ್ಷನ್ ವಿವರ

ಕೆಜಿಎಫ್-2 ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 16 ದಿನಗಳಲ್ಲಿ ಕೆಜಿಎಫ್-2 ಬರೋಬ್ಬರಿ 353 ಕೋಟಿ ರೂಪಾಯಿ ಲೆಕ್ಷನ್ ಮಾಡಿದೆ. ಅಜಯ್ ದೇವಗನ್ ರನ್ ವೇ 34 ಮತ್ತು ಹೀರೋಪಂಕ್ತಿ ಸಿನಿಮಾಗಳ ನಡುವೆಯೂ ಕೆಜಿಎಫ್-2 ಉತ್ತಮ ಕಲೆಕ್ಷನ್ ಮಾಡಿದೆ. ಏಪ್ರಿಲ್ 29 ಶುಕ್ರವಾರವೂ ಸಹ ಕೆಜಿಎಫ್-24.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅಂದಹಾಗೆ ಹಿಂದಿಯಲ್ಲಿ ಕೆಜಿಎಫ್-2 ಬಿಡುಗಡೆಯಾಗಿ 2ನೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿತ್ತು. ಹಿಂದಿ ಕಲೆಕ್ಷನ್ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಪ್ರೇಕ್ಷಕರ ಮನಸೆಳೆದಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಾಗಿದ್ದರೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios