Asianet Suvarna News Asianet Suvarna News

KGF 2 ಅಬ್ಬರದ ನಡುವೆಯೂ 1100 ಕೋಟಿ ರೂ.ಬಾಚಿದ RRR; ಸಂಪೂರ್ಣ ಲೆಕ್ಕ ಇಲ್ಲಿದೆ

ತೆಲುಗು ಸ್ಟಾರ್ ನಟರಾದ ರಾಮ್ ಚರಣ್(Ram Charan) ಮತ್ತು ಜೂ. ಎನ್ ಟಿ ಆರ್(Jr NTR) ಅಭಿನಯದ ಆರ್ ಆರ್ ಆರ್(RRR) ಸಿನಿಮಾ ಇತ್ತೀಚಿಗಷ್ಟೆ ಅಂದರೆ ಬಿಡುಗಡೆಯಾಗಿ 16 ದಿನಗಳಲ್ಲಿ 1000 ಕೋಟಿ ರೂಪಾಯಿ ಗಡಿದಾಟುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದೀಗ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿ 4 ವಾರಗಳಲ್ಲಿ 1100 ಕೋಟಿ ರೂ. ಗಳಿಕೆ ಮಾಡಿದೆ.

 

SS Rajamouli directorial RRR earn 1100 crore in fourth week
Author
Bengaluru, First Published Apr 22, 2022, 4:08 PM IST

ತೆಲುಗು ಸ್ಟಾರ್ ನಟರಾದ ರಾಮ್ ಚರಣ್(Ram Charan) ಮತ್ತು ಜೂ. ಎನ್ ಟಿ ಆರ್(Jr NTR) ಅಭಿನಯದ ಆರ್ ಆರ್ ಆರ್(RRR) ಸಿನಿಮಾ ಇತ್ತೀಚಿಗಷ್ಟೆ ಅಂದರೆ ಬಿಡುಗಡೆಯಾಗಿ 16 ದಿನಗಳಲ್ಲಿ 1000 ಕೋಟಿ ರೂಪಾಯಿ ಗಡಿದಾಟುವ ಮೂಲಕ ಹೊಸ ದಾಖಲೆ ಬರೆದಿತ್ತು. ಈ ಮೂಲಕ ಆರ್ ಆರ್ ಆರ್ ಅನೇಕ ಸಿನಿಮಾ ಕಲೆಕ್ಷಗಳನ್ನು ದೂಳಿಪಟ ಮಾಡಿತ್ತು. ವಿಶ್ವದಾದ್ಯಂತ ಆರ್ ಆರ್ ಆರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿ 4 ವಾರಗಳಲ್ಲಿ 1100 ಕೋಟಿ ರೂ. ಗಳಿಕೆ ಮಾಡಿದೆ.ದೆ.

ಒಂದೆಡೆ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಸಿನಿಮಾದ ಅಬ್ಬರ ಜೋರಾಗಿದೆ. ಕೆಜಿಎಫ್-2 ದಾಖಲೆ ಮೇಲೆ ದಾಖಲೆ ಬರೆಯುತ್ತ ಕೋಟಿ ಕೋಟಿ ಗಳಿಕೆ ಮಾಡುತ್ತಾ ಮುನ್ನುಗ್ಗುತ್ತಿದೆ. ಕೆಜಿಎಫ್-2 ಆರ್ಭಟದ ನಡುವೆಯೂ ಆರ್ ಆರ್ ಆರ್ ಕೂಡ ಉತ್ತಮ ಕಲೆಕ್ಷನ್ ಮಾಡಿ ಬೀಗುತ್ತಿದೆ. ಆರ್ ಆರ್ ಆರ್ ಬಿಡುಗಡೆಯಾಗಿ 4 ವಾರಗಳಲ್ಲಿ ಸಿನಿಮಾ 1100 ಕೋಟಿ ದಾಟಿದೆ. ಇದೇ ಖುಷಿಗೆ ಸಿನಿಮಾತಂಡ ಹೊಸ ಪೋಸ್ಟ್ ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಆರ್ ಆರ್ ಆರ್ ಕೆಜಿಎಫ್-2 ಬಿಡುಗಡೆ ಬಳಿಕ ಆರ್ ಆರ್ ಆರ್ ಓಟಕ್ಕೆ ಬ್ರೇಕ್ ಬಿದ್ದಿತ್ತು.

1100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಆರ್ ಆರ್ ಆರ್ ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಮೂರನೆ ಸ್ಥಾನದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ ಟಾಪ್ 2 ಸ್ಥಾನದಲ್ಲಿ ಆಮೀರ್ ಖಾನ್ ನಟನೆಯ ದಂಗಲ್ ಮತ್ತು ಬಾಹುಬಲಿ ಕನ್ ಕ್ಲೂಷನ್ ಸಿನಿಮಾವಿದೆ. ಇದೀಗ ಮೂರನೆ ಸ್ಥಾನದಲ್ಲಿ ಆರ್ ಆರ್ ಆರ್ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ದಂಗಲ್(Dangal) ಸಿನಿಮಾ 2024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 1810 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಹುಬಲಿ -2(Bahubali 2) ಎರಡನೇ ಸ್ಥಾನದಲ್ಲಿದೆ. ಆರ್ ಆರ್ ಆರ್ 1100 ಕೋಟಿಯ ಕಡಿ ದಾಟುವ ಮೂಲಕ 3ನೇ ಸ್ಥಾನದಲ್ಲಿದೆ.

ಆರ್‌ಆರ್‌ಆರ್‌ ಚಿತ್ರದಲ್ಲಿ ಶ್ರೇಯಾ ಶರಣ್ ಪಡೆದುಕೊಂಡ ಸಂಭಾವನೆ ಎಷ್ಟು..?

ಈ ಎಲ್ಲಾ ಸಿನಿಮಾಗಳ ದಾಖಲೆ ಬದಿಗೊತ್ತಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಮೊದಲ ಸ್ಥಾನಕ್ಕೆ ಏರುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯ ಮುನ್ನುಗ್ಗುತ್ತಿರುವ ರೀತಿ ನೋಡಿದ್ರೆ ಕೆಜಿಎಫ್-2 ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅತೀ ಕಡಿಮೆ ಅವಧಿಯಲ್ಲಿ ಕೆಜಿಎಫ್-2 ಹೆಚ್ಚು ಕಲೆಕ್ಷನ್ ಮಾಡಿ ಬೀಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.

ರಾಜಮೌಳಿ ಜೊತೆ ಯಶ್ ಸಿನಿಮಾ; 'KGF 2' ಹೀರೋ ಹೇಳಿದ್ದೇನು?

ಇನ್ನು ಆರ್ ಆರ್ ಆರ್ ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

Latest Videos
Follow Us:
Download App:
  • android
  • ios