ಇದೀಗ ಹಲವು ಸಿನಿಮಾಗಳು ಮತ್ತೊಮ್ಮೆ ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದೆ. ಚಿತ್ರಮಂದಿರದಲ್ಲೇ ಸಣ್ಣ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಜಪಾನ್ ಸಿನಿ ವೀಕ್ಷಿಕರು ಹುಚ್ಚೆದ್ದು ಕುಣಿದಿದ್ದಾರೆ. 

ಟೋಕಿಯೋ(ಮಾ.19) ಯಶ್ ಅಭಿನಯದ ಕೆಜಿಎಫ್ ಚಿತ್ರ ಮಾಡಿದ ದಾಖಲೆ ಭಾರತೀಯ ಸಿನಿಮಾದಲ್ಲೇ ಅತ್ಯಂತ ಪ್ರಮುಖವಾಗಿದೆ. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಇದೀಗ ಈ ಪೈಕಿ ಕೆಜಿಎಫ್ 2 ಚಿತ್ರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೌದು ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ರಿ-ರಿಲೀಸ್ ಟ್ರೆಂಡ್ ಆಗುತ್ತಿದೆ. ಹಲವು ಚಿತ್ರಗಳು 2ನೇ ಬಾರಿಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಸಿನಿ ರಸಿಕರನ್ನು ಸೆಳೆಯುತ್ತಿದೆ. ಇದರ ನಡುವೆ ಕೆಜಿಎಫ್ 2 ಕೂಡ ರಿ-ರಿಲೀಸ್ ಆಗುತ್ತಿದೆ. ಇದು ಹಲವು ದಾಖಲೆ ಬರೆದ ಯಶ್ ಚಿತ್ರ. ವಿಶೇಷ ಅಂದರೆ ಈ ಕೆಜಿಎಫ್ 2 ಚಿತ್ರ ರಿ ರಿಲೀಸ್ ಆಗುತ್ತಿರುವುದು ಜಪಾನ್ ಚಿತ್ರಮಂದಿರದಲ್ಲಿ. 

ಜೂನ್ ತಿಂಗಳಲ್ಲಿ ಕೆಜಿಎಫ್ 2 ಚಿತ್ರ ಜಪಾನ್ ಬಹುತೇಕ ಚಿತ್ರಮಂದಿರದಲ್ಲಿ ರಿ-ರಿಲೀಸ್ ಆಗುತ್ತಿದೆ. ಇದೀಗ ಜಪಾನ್ ಚಿತ್ರಮಂದಿರದಲ್ಲಿ ಜಪಾನ್ ಸಿನಿಮಾಗಳು, ಹಾಲಿವುಡ್ ಸಿನಿಮಾಗಳ ನಡುವೆ ಕೆಜಿಎಫ್ 2 ರಿ-ರಿಲೀಸ್ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದ್ದಂತೆ ಎಂದು ಟ್ರೇಲರ್ ಪ್ರದರ್ಶನ ಮಾಡುತ್ತಿದ್ದಾರೆ. ಕೆಜಿಎಫ್ 2 ಚಿತ್ರದ ಟ್ರೇಲರ್ ಪ್ರದರ್ಶನಗೊಳ್ಳುತ್ತಿದ್ದಂತೆ ಜಾಪನ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಚಪ್ಪಾಳೆ, ಶಿಳ್ಳೆಗಳು ಕೇಳಿಬರುತ್ತಿದೆ.

ಶಿವಣ್ಣನ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ; ಇಲ್ಲಿದೆ ಶಿವ ರಾಜ್‌ಕುಮಾರ್ ಹೆಲ್ತ್ ಅಪ್ಡೇಟ್ಸ್!

ಜಪಾನ್ ಚಿತ್ರಮಂದಿರದಲ್ಲಿ ಕೆಜಿಎಫ್ 2 ಚಿತ್ರದ ಟ್ರೇಲರ್ ಪ್ರದರ್ಶನದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಜಪಾನ್ ಜನರು ಯಶ್ ಕೆಜಿಎಫ್ 2 ಮತ್ತೊಮ್ಮೆ ತೆರೆ ಮೇಲೆ ನೋಡಲು, ಅಬ್ಬರ ಫೈಟ್, ಡೈಲಾಗ್, ಸ್ವಾಗ್, ಸ್ಟೈಲ್ ನೋಡಲು ಕಾತರಗೊಂಡಿದ್ದಾರೆ. ಜಪಾನ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಅತೀ ದೊಡ್ಡ ಮಾರುಕಟ್ಟೆಯೂ ಇದೇ. ಈ ಪೈಕಿ ಯಶ್ ಜಪಾನ್ ಸಿನಿ ಪ್ರೇಕ್ಷಕರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. 

Scroll to load tweet…

ಕೆಜಿಎಫ್ 2 ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಭಾರತ ಮಾತ್ರವಲ್ಲ, ಹಲವು ದೇಶಗಳಲ್ಲಿ ಭಾರಿ ಮೆಚ್ಚುಗೆ ಪಡೆದ ಸಿನಿಮ ಆಗಿದೆ. 100 ಕೋಟಿ ರೂಪಾಯಿ ಬಂಡವಾಳದ ಈ ಸಿನಿಮಾ ಬರೋಬ್ಬರಿ 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ನಿರ್ಮಾಣ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿತ್ತು.

ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕಾರಣ ಟಾಕ್ಸಿಕ್ ಹಲವು ದಾಖಲೆ ಪುಡಿ ಪುಡಿ ಮಾಡುವ ಸಾಧ್ಯತೆ ಇದೆ.

Photos: ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ಮಗನ ಅದ್ದೂರಿ ನಾಮಕರಣದ ಝಲಕ್‌ ಇದು!