ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ವಿರುದ್ದ ಗಂಭೀರ ಆರೋಪ... ಆತ್ಮಹತ್ಯೆಗೆ ಶರಣಾಗಿದ್ದ ರಾಜಮೌಳಿ ಆಪ್ತಮಿತ್ರ  ಶ್ರೀನಿವಾಸ್, ಸಾವಿಗೂ ಮುನ್ನ ವಿಡಿಯೋ ಮಾಡಿ... ನಿರ್ದೇಶಕ ರಾಜಮೌಳಿಯಿಂದ ತನ್ನ ಬದುಕು ಹಾಳಾಯ್ತು.. ಆತನೇ ನನ್ನ ಸಾವಿಗೆ ಕಾರಣ ಎಂದು ಆರೋಪ... 

ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಜಗತ್ಪ್ರಸಿದ್ಧ ನಿರ್ದೇಶಕ ಆಗಿರುವ ರಾಜಮೌಳಿ ಅವರಿಗೆ ಈಗ ಹೊಸ ಕಂಟಕ ಎದುರಾಗಿದೆ. ಆತ್ಮಹತ್ಯೆಗೆ ಶರಣಾಗಲಿದ್ದೇನೆ ಎಂದು ರಾಜಮೌಳಿ ಆಪ್ತಮಿತ್ರ ಶ್ರೀನಿವಾಸ್ ರಾವ್ (Srinivas Rao) ವಿಡಿಯೋ ಮಾಡಿದ್ದಾರೆ. ಅದೀಗ ಹೊರಗಡೆ ಬಂದು ವೈರಲ್ ಆಗ್ತಿದೆ. ರಾಜಮೌಳಿ ವಿರುದ್ದ ಆರೋಪ ಹೊರಿಸಿದ್ದಾರೆ. ಜೂನಿಯರ್ ಎನ್‌ಟಿಅರ್ ನಟನೆಯ 'ಯಮದೊಂಗ' ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದರು ಶ್ರೀನಿವಾಸ್ ರಾವ್. 

ಶ್ರೀನಿವಾಸ ರಾವ್ ಅವರು 'ನಿರ್ದೇಶಕ ರಾಜಮೌಳಿಯಿಂದ ತನ್ನ ಬದುಕು ಹಾಳಾಯ್ತು.. ಆತನೇ ನನ್ನ ಸಾವಿಗೆ ಕಾರಣ..' ಎಂದು ಆರೋಪ ಮಾಡಿರುವ ಶ್ರೀನಿವಾಸ್ ರಾವ್.. 'ಒಬ್ಬ ಯುವತಿಯ ವಿಚಾರಕ್ಕೆ ನನಗೂ ರಾಜಮೌಳಿಗೂ ನಡುವೆ ಮನಸ್ತಾಪ ಆಗಿತ್ತು..' ಎಂದು ಹೇಳಿದ್ದಾರೆ. 55 ವರ್ಷದ ಶ್ರೀನಿವಾಸ್ ರಾವ್ ಏಕಾಂಗಿಯಾಗಿ ಉಳಿಯಲು ಕಾರಣವೇ ರಾಜಮೌಳಿ ಎನ್ನುವ ಆರೋಪ ಇದೀಗ ಬಂದಿದೆ.. ಶ್ರೀನಿವಾಸ್ ರಾವ್ ಆರೋಪಗಳ ಕುರಿತು ಪೊಲೀಸ್ ತನಿಖೆಯೆ ಸಾಧ್ಯತೆ ದಟ್ಟವಾಗಿದೆ. ನಿರ್ದೇಶಕ ರಾಜಮೌಳಿಗೆ ಈ ವಿಚಾರದಲ್ಲಿ ವಿಚಾರಣೆ ಕಂಟಕ ಎದುರಾಗುವ ಸಾಧ್ಯತೆ ಎದ್ದು ಕಾಣಿಸುತ್ತಿದೆ. 

ರಾಜಮೌಳಿ-ಮಹೇಶ್ ಬಾಬು ಮಾಡ್ತಿರೋದು ಅಂತಿಂಥದ್ದಲ್ಲ, ಆಫ್ರಿಕಾದಲ್ಲೇ ಯಾಕೆ ಶೂಟ್?

ಆತ್ಮಹತ್ಯೆಗೆ ಶರಣಾಗಿದ್ದ ರಾಜಮೌಳಿ ಆಪ್ತಮಿತ್ರ ಶ್ರೀನಿವಾಸ್ ರಾವ್ ಅವರು ಸಾವಿಗೂ ಮುನ್ನ ವಿಡಿಯೋ ಮಾಡಿರುವುದಾಗಿ ರಾಜಮೌಳಿ ವಿರುದ್ದ ಆರೋಪ ಹೊರಿಸಿದ್ದಾರೆ. ಜೂನಿಯರ್ ಎನ್‌ಟಿಅರ್ ನಟನೆಯ 'ಯಮದೊಂಗ' ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದರು ಶ್ರೀನಿವಾಸ್ ರಾವ್. ಅವರು ಒಂದು ಯುವತಿ ವಿಚಾರಕ್ಕೆ ನಿರ್ದೇಶಕ ರಾಜಮೌಳಿ ಜೊತೆ ಮನಸ್ತಾಪ ಮಾಡಿಕೊಂಡಿದ್ದರು. ಬಹಳ ವರ್ಷಗಳಿಂದ ಅವರು ಈ ಕಾರಣಕ್ಕೆ ಮದುವೆಯಾಗದೇ ಒಬ್ಬಂಟಿ ಆಗಿಯೇ ಇದ್ದರು ಎನ್ನಲಾಗಿದೆ. 

ಆದರೆ, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಇಲ್ಲವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಡೆತ್ ನೋಟ್ ಮಾತ್ರ ಸಿಕ್ಕಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ. ಇದೀಗ ಅವರು ಕೊನೆಯದಾಗಿ ಮಾಡಿರುವ ವಿಡಿಯೋ ಎನ್ನುವುದು ಬಹಿರಂಗವಾಗಿದೆ. ಇದರಲ್ಲಿ, ರಾಜಮೌಳಿ ಆಪ್ತ ಸ್ನೇಹಿತ ಶ್ರೀನಿವಾಸ್ ರಾವ್ ಅವರು ತಮ್ಮ ಮಿತ್ರ ರಾಜಮೌಳಿ ತಮಗೆ ಹುಡುಗಿ ವಿಷಯದಲ್ಲಿ ಹೇಗೆಲ್ಲಾ ಅನ್ಯಾ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಕೀರವಾಣಿ ಸೇರಿದಂತೆ ಹಲವರ ಹೆಸರು ಈ ವಿಡಿಯೋದ ಆಡಿಯೋದಲ್ಲಿ ಹೇಳಿದ್ದಾರೆ ಆ ಶ್ರೀನಿವಾಸ್ ರಾವ್. 

ರಜನಿಕಾಂತ್ ಸ್ಟಾರ್‌ಡಂ ಸೀಕ್ರೆಟ್‌ ಕೊನೆಗೂ ಗೊತ್ತಾಯ್ತು! ಯೋಗ-ಪ್ರಾಣಾಯಾಮ ಅಲ್ಲ, ಆದ್ರೆ ಮತ್ತೊಂದು...

ಈ ವಿಡಿಯೋ ಈಗತಾನೇ ಬಹಿರಂಗ ಆಗಿದ್ದು ಇದೀಗ ಪೋಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಸದ್ಯದಲ್ಲೇ ತೀವ್ರ ತನಿಖೆ ಎದುರಿಸಬೇಕಾಗಬಹುದು ಎನ್ನಲಾಗುತ್ತಿದೆ. ಸದ್ಯಕ್ಕೆ ಈ ವಿಡಿಯೋ ಬಹಿರಂಗವಾಗಿದೆ,. ಮುಂದಿನ ಸಂಗತಿ ಇನ್ನಷ್ಟೇ ಹೊರಗೆ ಬರಬೇಕಿದೆ.