ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ೨೯ನೇ ಚಿತ್ರದ ಮುಹೂರ್ತ ಜನವರಿ ೨, ೨೦೨೫ರಂದು ನೆರವೇರಿದೆ. ಆಫ್ರಿಕಾ, ಹೈದರಾಬಾದ್ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ ನಾಯಕಿ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಭಾಗಿಯಾಗಿದ್ದಾರೆ. 'ಇಂಡಿಯಾನಾ ಜೋನ್ಸ್' ಸಿನಿಮಾದಿಂದ ಸ್ಫೂರ್ತಿ ಪಡೆದ ಕಾಡಿನ ಸಾಹಸ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಪ್ರಥ್ವಿರಾಜ್ ಸುಕುಮಾರನ್ ಖಲನಾಗಿ ನಟಿಸುತ್ತಿದ್ದಾರೆ.

ಭಾರತದ ಸಿನಿಮಾ ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರು (SS Rajamouli) ಸಿನಿಮಾ ಮಾಡ್ತಾರೆ ಅಂದರೆ ಇಡೀ ಜಗತ್ತು ಕುತೂಹಲದಿಂದ ಕಾಯುತ್ತದೆ. ಈ ಬಾರಿ ಮಹೇಹ್ ಬಾಬು (Mahesh Babu) ನಾಯಕರಾಗಿರುವ ಹೊಸ ಸಿನಿಮಾವನ್ನು ಆಫ್ರಿಕಾದ ಕಾಡಿನಲ್ಲಿ ಡೈರೆಕ್ಟರ್ ರಾಜಮೌಳಿಯವರು ಸದ್ಯ ಶೂಟ್ ಮಾಡಲು ನಿರ್ಧರಿಸಿದ್ದಾರೆ. ಕೇವಲ ಆಫ್ರಿಕಾದಲ್ಲಿ ಮಾತ್ರ ಅಲ್ಲ, ಹೈದ್ರಾಬಾದ್ ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ರಾಜಮೌಳಿ ಸಿನಿಮಾ ಶೂಟಿಂಗ್ ನಡೆಸಲಿದ್ದಾರೆ. 02 ಜನವರಿ 2025ರಂದು ಹೈದ್ರಾಬಾದಿನಲ್ಲಿಈ ಸಿನಿಮಾದ ಮಹೂರ್ತ ಅಧಿಕೃತವಾಗಿ ನೆರವೇರಿದ್ದು, ಶೂಟಿಂಗ್ ಕೆಲಸ ಶುರುವಾಗಿದೆ.

ಈ ಹಿಂದೆ ಬಿಡುಗಡೆಯಾಗಿ ಸಕತ್ ಸದ್ದು ಮಾಡಿದ್ದ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಹಾಡು ಆಸ್ಕರ್ ಪ್ರಶಸ್ತಿ ಗಳಿಸಿತ್ತು. ಇದೀಗ ಮಹೇಶ್‌ ಬಾಬು ಹೀರೋ ಆಗಿರುವ ಮುಂಬರುವ ಸಿನಿಮಾ ಈ ಮೊದಲಿನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ಸದ್ದು ಮಾಡೋದು ಕನ್ಫರ್ಮ್ ಎನ್ನಲಾಗುತ್ತಿದೆ. ಕಾರಣ, ಬಜೆಟ್ ಹಾಗೂ ಮೇಕಿಂಗ್ ದೃಷ್ಟಯಿಂದಲೂ ಮುಂಬರುವ ಸಿನಿಮಾ ಹಳೆಯ ಎಲ್ಲಾ ಸಿನಿಮಾಗಳನ್ನು ಮೀರಿಸುವಂತಿದೆಯಂತೆ. ಇನ್ನು ರಾಜಮೌಳಿಯವರ ಕಥೆಯ ಆಯ್ಕೆ ಬಗ್ಗೆಯಂತೂ ಮಾತನಾಡೋಹಾಗೇ ಇಲ್ಲ. 

ಗಂಡನ ಬಿಟ್ಟು ಬರಲಾರೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಇದ್ದಾರೆ ಏಕೆ?

ನಾಯಕರಾಗಿ ಮಹೇಶ್ ಬಾಬು ನಟಿಸುತ್ತಿದ್ದರೆ ಅವರಿಗೆ ಜೋಡಿ ನಾಯಕಿಯಾಗಿ ಬಾಲಿವುಡ್ ಮಿಂಚಿದ್ದ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಆಯ್ಕೆಯಾಗಿದ್ದಾರೆ, ವಿಲನ್ ಆಗಿ ಪ್ರಥ್ವಿರಾಜ್ ಸುಕುಮಾರನ್ ಇದ್ದರೆ ಹಲವು ಮುಖ್ಯ ಪಾತ್ರಗಳಲ್ಲಿ ಹಾಲಿವುಡ್ ಕಲಾವಿದರು ಇರಲಿದ್ದಾರೆ. ಜೊತೆಗೆ, ಮೇಕಿಂಗ್ ಹಾಗೂ ತಾಂತ್ರಿಕ ವರ್ಗದಲ್ಲಿ ಬಹಳಷ್ಟು ಹಾಲಿವುಡ್ ಕಲಾವಿದರೂ ಕೆಲಸ ಮಾಡಲಿದ್ದಾರೆ. 

ಮಹೇಶ್ ಬಾಬು ನಟನೆಯ 29ನೇ ಸಿನಿಮಾ ಇದಾಗಲಿದ್ದು, ಈ ಸಿನಿಮಾ ಅರಣ್ಯದಲ್ಲಿ ನಡೆಯುವ ಆಕ್ಷನ್ ಕಥೆಯನ್ನು ಒಳಗೊಂಡಿರಲಿದೆ. ಸಿನಿಮಾದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜೊತೆಗೆ, ಹಾಲಿವುಡ್​ನ ನಟಿಯೊಬ್ಬರು ಸಹ ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ. ಅಷ್ಟೇ ಅಲ್ಲ, ಹಾಲಿವುಡ್​ನ ಖ್ಯಾತ ನಟ, 'ಥೋರ್' ಖ್ಯಾತಿಯ ಕ್ರಿಸ್ ಹ್ಯಾಮ್ಸ್​ವರ್ತ್​ ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 

ವಿಧಿಯ ಆಟಕೆ ಪುನೀತ ರಾಜ ಕೇಳದೆ ಬಲಿಯಾದ; ಅರ್ಜುನ 'ಜೋಗಿ ಪದ' ಹೇಳಿದ್ದೇನು?

ಸ್ಟಿವನ್ ಸ್ಪೀಲ್​ಬರ್ಗ್​ ಅವರ ಹಾಲಿವುಡ್​ ಸಿನಿಮಾ 'ಇಂಡಿಯಾನಾ ಜೋನ್ಸ್' ನಿಂದ ಸ್ಪೂರ್ತಿ ಪಡೆದ ಕಥೆ ಇದಾಗಿದ್ದು, ರಾಜಮೌಳಿ ಹಲವು ವರ್ಷಗಳಿಂದಲೂ ಒಂದು 'ಜಂಗಲ್ ಅಡ್ವೇಂಚರ್' ಸಿನಿಮಾ ಮಾಡಲು ಯೋಜಿಸಿದ್ದರಂತೆ. ಅದರಂತೆ ಈಗ ಮಹೇಶ್ ಬಾಬು ಜೊತೆ ಈ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಅಮೆಜಾನ್ ಕಾಡುಗಳು ಸೇರಿದಂತೆ ಹಲವು ದೇಶಗಳಲ್ಲಿ ನಡೆಯಲಿದೆ. 'ಮಿಷನ್ ಇಂಪಾಸಿಬಲ್' ಸಿನಿಮಾಗಳಲ್ಲಿ ಇರುವಂತೆ ಈ ಸಿನಿಮಾದ ಕಥೆ ಸಹ ಹಲವು ದೇಶಗಳಲ್ಲಿ ನಡೆಯಲಿದೆಯಂತೆ. ಆದರೆ ಅರಣ್ಯದಲ್ಲಿ ನಡೆಯುವ ಸಾಹಸವೇ ಸಿನಿಮಾದ ಪ್ರಧಾನ ಅಂಶವಂತೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆಯುತ್ತಿದ್ದಾರೆ. ಈ ಸಿನಿಮಾಗೆಂದು ಆಫ್ರಿಕಾದಲ್ಲಿ ಬಹುದೊಡ್ಡ ಸೆಟ್ ನಿರ್ಮಿಸಲಾಗಿದೆ. ರಾಜಮೌಳಿ ಮುಂಬರುವ ಚಿತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಮಹೇಶ್‌ ಬಾಬು ಜೊತೆಗೆ, ಮೆಗಾ ಸ್ಟಾರ್ ಫ್ಯಾಮಿಲಿಯ ನಟರುಗಳೂ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಅದೆಷ್ಟು ಕಾಲ ಶೂಟಿಂಗ್‌ ಮಾಡಿ, ಯಾವಾಗ ತೆರೆಗೆ ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕು!

ಮತ್ತೆ ಒಂದಾದ ಗಣೇಶ್-ಪೂಜಾಗಾಂಧಿ: 'ಮುಂಗಾರು ಮಳೆಯಲ್ಲಿ' ಕಣ್ಣೀರು ಹಾಕಿಲ್ಲ ಯಾಕೆ?