Asianet Suvarna News Asianet Suvarna News

ಪ್ರಭಾಸ್‌ನ ಮದುವೆ ಆಗ್ತೀನಿ: ಬಹಿರಂಗವಾಗಿ ಒಪ್ಪಿಕೊಂಡ ಕೃತಿ ಸನೊನ್, ಗಾಸಿಪ್‌ಗೆ ಬ್ರೇಕ್!

ಸಿನಿಮಾ ಪ್ರಚಾರದ ವೇಳೆ ಡೇಟಿಂಗ್ ಆಂಡ್ ಮ್ಯಾರೇಜ್ ಬಗ್ಗೆ ಮಾತನಾಡಿದ ಕೃತಿ ಸನೊನ್. ಗಾಸಿಪ್‌ಗೆ ಇದು ಬಿಗ್ ಬ್ರೇಕ್....

Will marry prabhas flirt tiger says actress Kriti sanon vcs
Author
First Published Nov 27, 2022, 9:42 AM IST

ಬಾಲಿವುಡ್ ಟಾಲ್ ಬ್ಯೂಟಿ ಕೃತಿ ಸನೊನ್ ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಆದಿಪುರುಷ್ ಸಿನಿಮಾ ಪೋಸ್ಟರ್‌ಯಿಂದ ಹಿಡಿದು ಟ್ರೈಲರ್‌ವರೆಗೂ ಸುದ್ದಿ ಜೊತೆಗೆ ಟ್ರೋಲ್ ಆಗುತ್ತಿದೆ. ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಇವರಿಬ್ಬರ ಕೆಮಿಸ್ಟ್ರಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಇಬ್ಬರೂ ಸೈಲೆಂಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಶುರುವಾಗಿದೆ. ಇತ್ತೀಚಿಗೆ ನಡೆದ ಪ್ರೆಸ್‌ಮೀಟ್‌ವೊಂದರಲ್ಲಿ ಪ್ರಭಾಸ್‌ನ ಮದುವೆ ಆಗುವುದಾಗಿ ಕೃತಿ ಹೇಳಿದ್ದರು.

ಹೌದು! ಕೃತಿ ಸನೊನ್ ಮತ್ತು ವರುಣ್ ದವನ್ ನಟಿಸಿರುವ Bhediya ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಿರೂಪಕಿ ಒಂದು ಪ್ರಶ್ನೆ ಹಾಕುತ್ತಾರೆ, ಟೈಗರ್ ಶ್ರಾಫ್- ಪ್ರಭಾಸ್ ಮತ್ತು ಕಾರ್ತಿಕ್ ಆರ್ಯನ್‌ ಈ ಮೂವರಲ್ಲಿ ಒಬ್ಬರನ್ನು ಮದುವೆ ಆಗಬೇಕು, ಫ್ಲರ್ಟ್‌ ಮಾಡಬೇಕು, ಮತ್ತು ಡೇಟ್ ಮಾಡಬೇಕು ಎಂದು ಕೇಳಿದ್ದರೆ ಯಾರ ಹೆಸರು ಹೇಳುತ್ತೀರಾ ಎಂದು. ಒಂದು ನಿಮಿಷವೂ ಯೋಚಿಸದೆ ಕೃತಿ ಕಾರ್ತಿಕ್ ಆರ್ಯನ್‌ನ ಫ್ಲರ್ಟ್‌ ಮಾಡ್ತೀನಿ, ಟೈಗರ್ ಶ್ರಾಫ್‌ನ ಡೇಟ್ ಮಾಡ್ತೀನಿ ಹಾಗೆ ಪ್ರಭಾಸ್‌ನ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ.

Will marry prabhas flirt tiger says actress Kriti sanon vcs

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದು ನಿಜವಾಗಲಿ ಎಂದು ವಿಶ್ ಮಾಡುತ್ತೀವಿ ಎಂದಿದ್ದಾರೆ. ಏನೋ ತಮಾಷೆ ಅಂದುಕೊಂಡು ಸುಮ್ಮನಾಗಲು ಆಗುವುದಿಲ್ಲ ಏಕೆಂದರೆ ಈ ಹಿಂದೆ ಮತ್ತೊಂದು ಸಂದರ್ಶನದಲ್ಲಿ ಕೃತಿ ಉದ್ದ ಹುಡುಗನನ್ನು ಡೇಟ್ ಮಾಡುತ್ತಿರುವುದಾಗಿ ವರುಣ್ ಸುಳಿವು ಕೊಟ್ಟಿದ್ದರು. ಆಗ ಕೃತಿ ಮುಖದಲ್ಲಿ ಮುಗುಳು ನಗೆ ಕಂಡಿತ್ತು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ # ಪ್ರಭಾಸ್ ಮತ್ತು #ಕೃತಿ ಟ್ರೆಂಡ್ ಆಗುತ್ತಿದೆ. 

'ಯಾಕೆ ಪ್ರಭಾಸ್‌ನ ಎಲ್ಲೂ ಗಂಡ ಆಗಬೇಕು ಎಂದು ಹೇಳುತ್ತಾರೆ? ನಮ್ಮ ಹುಡುಗನ ಜೊತೆ ಸ್ವಲ್ಪ ದಿನ ಡೇಟಿಂಗ್ ಎಲ್ಲಾ ಮಾಡಿ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು. 

ಬಾಲಿವುಡ್ ಸೀರೆ ಸಂಸ್ಕೃತಿ ಹಾಳು ಮಾಡ್ತಿದೆ; ಸೀರೆಗೆ ಬಿಕಿನಿ ಬ್ಲೌಸ್ ಧರಿಸಿದ ಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ

ಆದಿಪುರುಷ್ ಟ್ರೋಲ್?

ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಆದಿಪುರುಷ್ ಸಿನಿಮಾದಲ್ಲಿ ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಉದ್ದ ಗಡ್ಡ ಇರುವ ರಾವಣನನ್ನು ನೋಡಿದ ನೆಟ್ಟಿಗರು ಅಲ್ಲಾ ವುದ್ದೀನ್ ಖಿಲ್ಜಿ ಹಾಗೆ ತೋರಿಸಲಾಗಿದೆ, ರಾವಣನನ್ನು ಮತಾಂತರ ಮಾಡಲಾಗಿದೆ ಎಂದು ಟ್ರೋಲ್ ಮಾಡಿದ್ದರು. ವಿಎಫ್‌ಎಕ್ಸ್ ಕೂಡ ಕಳಪೆ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಟ್ರೋಲ್‌ಗಳ ಬಳಿಕ ಮೊದಲ ಬಾರಿಗೆ ಕೃತಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ನಿರ್ದೇಶಕ ಓಂ ರಾವುತ್ ಅವರು ಈಗಾಗಲೇ ಹೇಳಿದ ಹಾಗೆ, ಈ ಸಿನಿಮಾದ ಬಗ್ಗೆ ನಮಗೆಲ್ಲರಿಗೂ ತುಂಬಾ ಹೆಮ್ಮೆ ಇದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬರ್ತಿದೆ. ಇದು ನಮ್ಮ ಇತಿಹಾಸದ ಒಂದು ಭಾಗವಾಗಿದೆ ಹಾಗೂ ಅತ್ಯಂತ ಮಹತ್ವದಾಗಿದೆ.  ಈ ಸಿನಿಮಾವನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಡಬೇಕಿದೆ. ಅದನ್ನೇ ನಿರ್ದೇಶಕ ಓಂ ರಾವುತ್ ಮಾಡುತ್ತಿದ್ದಾರೆ.1 ನಿಮಿಷ 35 ಸೆಕೆಂಡ್ ಟೀಸರ್ ರಿಲೀಸ್ ಆಗಿದೆ. ಇನ್ನೂ ಈ ಚಿತ್ರದ ಕೆಲಸ ಸಾಕಷ್ಟಿಸಿದೆ.  ಹಾಗಾಗಿ ಸಮಯ ಬೇಕಾಗಿದೆ.  ನಾವೆಲ್ಲರೂ ಇದಕ್ಕೆ ಅತ್ಯುತ್ತಮವಾದುದ್ದನ್ನು ನೀಡಲು ಬಯಸುತ್ತೇವೆ. ಇದು ನಮ್ಮ ಇತಿಹಾಸವನ್ನು ಹಾಗೂ ನಮ್ಮ ಧರ್ಮವನ್ನು ಜಾಗತಿಕವಾಗಿ ತೋರಿಸುವ ಅವಕಾಶಸಿಕ್ಕಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ಕಥೆಯಾಗಿದೆ. ಹಾಗಾಗಿ ಇದನ್ನು ಅತ್ಯುತ್ತಮ ರೀತಿಯಲ್ಲಿ ಮಾಡಬೇಕಿದೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಅತ್ಯುತ್ತಮವಾಗಿ ಕಟ್ಟಿಕೊಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಕೃತಿ ರಿಯಾಕ್ಟ್‌ ಮಾಡಿದ್ದಾರೆ. 

Follow Us:
Download App:
  • android
  • ios