The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೀತಿದೆ ಎಂದು ಸದಾ ಸುಳ್ಳು ಬೊಗಳುವ ಎಡಪಂಥೀಯ ಬುದ್ಧಿಜೀವಿಗಳ ಮುಖಕ್ಕೆ ಹೊಡೆದಂತಿದೆ ಈ ಸಿನಿಮಾ.
ಕಾಶ್ಮೀರದಲ್ಲಿ (Kashmir) ಏನ್ ನಡೀತಿದೆ ಎಂಬ ಬಗ್ಗೆ ನಮ್ಮ ಮುಖ್ಯವಾಹಿನಿಯ ಕೆಲವು ಮೀಡಿಯಾಗಳಲ್ಲೂ, ಹೊಸದೇಶಗಳಲ್ಲಿ ಪಾಪ್ಯುಲರ್ ಆಗಿರುವ ಬಿಬಿಸಿಯಂಥ ಮೀಡಿಯಾಗಳಲ್ಲೂ ಸದಾ ಸುಳ್ಳುಗಳು ಅರೆಸತ್ಯಗಳು ಹರಿದಾಡ್ತಾ ಇರುತ್ತವೆ. ಕಾಶ್ಮೀರದಲ್ಲಿ ಸೆಕ್ಷನ್ 370(Section 370) ರದ್ದು ಮಾಡಿದ ಸಂದರ್ಭದಲ್ಲಿಯಂತೂ, ಆ ರಾಜ್ಯದಲ್ಲಿ ಮುಸ್ಲಿಮರ (Muslim) ಮಾರಣಹೋಮವೇ ನಡೆಯುತ್ತಿದೆಯೇನೋ ಎಂಬ ಹಾಗೆ ಚಿತ್ರಣ ಕೊಡಲಾಯಿತು. ಅಮೆರಿಕ ಮುಂತಾದ ಕಡೆ ಕೂಡ ಭಾರತ ಸರಕಾರದ ಬಗ್ಗೆ ನೆಗೆಟಿವ್ ಕಥನ ಕಟ್ಟುವ ಕೆಲಸ ನಡೆಯಿತು. ಪಾಕಿಸ್ತಾನ ಮತ್ತು ಚೀನಾ ಕೂಡ ಸದಾ ಅದೇ ಕೆಲಸದಲ್ಲಿ ಇದ್ದವಷ್ಟೆ. ಮುಸ್ಲಿಮರೆನ್ನೆಲ್ಲ ಟಾರ್ಗೆಟ್ ಮಾಡಲಾಗುತ್ತಿದೆ ಎಂತಲೂ ಹೇಳಲಾಯಿತು. ವಾಸ್ತವವಾಗಿ ಸೆಕ್ಷನ್ 377 ತೆಗೆದದ್ದರಿಂದ ಅಲ್ಲಿ ಇದ್ದ ಮುಸ್ಲಿಮರಿಗೇ ಪ್ರಯೋಜನವಾಗುತ್ತಿದೆ. ಅವರಿಗೆ ಭಯೋತ್ಪಾದನೆ ಬಿಟ್ಟು ಆಚೆ ಬರಲು, ಹೊಸ ಬದುಕಿನ, ಉದ್ಯೋಗದ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯ ಆಗ್ತಾ ಇದೆ. ಆದ್ರೆ ಕಾಮಾಲೆ ಕಣ್ಣಿನ ಎಡಪಂಥೀಯ (Leftist) ಇತಿಹಾಸಕಾರರಿಗೆ, ಬುದ್ಧಿಜೀವಿಗಳಿಗೆ ಸದಾ ಮುಸ್ಲಿಮರ ಮೇಲೆ ಹಿಂದೂಗಳ ಹಲ್ಲೆ ನಡೆಯುತ್ತಿದೆ ಎಂದು ಚಿತ್ರಿಸಿ ಹೊರದೇಶಗಳ ಫಂಡ್ ಕೀಳುವ ಧ್ಯಾನ.
ಕಾಶ್ಮೀರಿ ಪಂಡಿತರ (Kashmiri Pandiths) ಹತ್ಯಾಕಾಂಡವನ್ನು ಅದೊಂದು ಹತ್ಯಾಕಾಂಡ (Genocide) ಅಂತಲೇ ಕಾಂಗ್ರೆಸ್ (Congress) ನಿಯೋಜಿತ ಆಯೋಗಗಳು ಒಪ್ಪಿಕೊಳ್ಳಲಿಲ್ಲ. ದೇಶವಿದೇಶದ ಪತ್ರಿಕೆಗಳಲ್ಲೂ ಅದು ದೊಡ್ಡ ಮಟ್ಟದಲ್ಲಿ ವರದಿಯಾಗಲಿಲ್ಲ. ಬಾಲಿವುಡ್‌ನಲ್ಲಿ (Bollywood) ಬಂಧ ಕೆಲವು ಫಿಲಂಗಳಲ್ಲಿ, ಅಲ್ಲಿನ ಮುಸ್ಲಿಮರನ್ನೇ ಬಡಪಾಯಿಗಳು ಎಂಬಂತೆ ಚಿತ್ರಿಸಲಾಯಿತಷ್ಟೇ ಹೊರತು, ಅಲ್ಲಿನ ಪಂಡಿತ ಸಮುದಾಯಕ್ಕೆ ಏನಾಯಿತು ಎಂದು ಯಾರೂ ಹೇಳಲೇ ಇಲ್ಲ. ಕಾಶ್ಮೀರಿ ಪಂಡಿತ ಸಮುದಾಯದ ಬಗ್ಗೆ ಹೊರದೇಶಗಳಲ್ಲಿ ಬಿಡಿ, ನಮ್ಮ ದೇಶದ ಒಳಗೂ ತಿಳಿದವರು ಅತ್ಯಲ್ಪ. ಇವರ ಬಲು ಸಂಕಷ್ಟದ ಯಾತನಾಮಯ ದಿನಗಳ ಕತೆಯನ್ನೇ ಈ ಫಿಲಂ ಬಿಚ್ಚಿಡುತ್ತಿದೆ.
The Kashmir Files ವಿಡಿಯೋ ಮೂಲಕ ಕ್ಷಮೆ ಕೋರಿದ ನಟ ಪ್ರಕಾಶ್ ಬೆಳವಾಡಿ
ಡೋಗ್ರಾ ಆಡಳಿತದ (1846-1947) ಸಮಯದಲ್ಲಿ ಕಾಶ್ಮೀರಿ ಪಂಡಿತರದು ಕಾಶ್ಮೀರ ಕಣಿವೆಯಲ್ಲಿ ಗೌರವಯುತ ಪಂಗಡವಾಗಿತ್ತು. ಅವರು ಕಣಿವೆಯ ಜನಸಂಖ್ಯೆಯ. ಸುಮಾರು ಶೇ.30ರಷ್ಟು ಇದ್ದರು. 1948ರಲ್ಲಿ ಹಿಂದು-ಮುಸ್ಲಿಂ ಕೋಮು ಘರ್ಷಣೆ ಮತ್ತು 1950ರ ಭೂಸುಧಾರಣೆಗಳ ಪರಿಣಾಮ ಸುಮಾರು ಪಂಡಿತರು ಕಣಿವೆಯನ್ನು ತೊರೆದರು. 1981ರಲ್ಲಿ ಪಂಡಿತ ಜನಸಂಖ್ಯೆ ಕೇವಲ ಶೇಕಡಾ 5ರಷ್ಟಿತ್ತು. ಜನವರಿ 1990ರಲ್ಲಿ, ಮಸೀದಿಗಳಿಂದ, "ಕಾಶ್ಮೀರಿ ಪಂಡಿತರು ಕಾಫಿರರು, ಗಂಡಸರು ಕಾಶ್ಮೀರ ಬಿಟ್ಟು ತೊಲಗಬೇಕು ಇಲ್ಲವೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು; ಇಲ್ಲದಿದ್ದರೆ ಅವರನ್ನು ಕೊಲ್ಲಲಾಗುವುದು" ಎಂದು ಘೋಷಣೆಗಳು ಮೊಳಗಿದವು. 'ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಉಪಾಧ್ಯಕ್ಷ ಟಿಕಾ ಲಾಲ್ ಟಪ್ಲೂ ಕಣಿವೆಯ ಮುಸ್ಲಿಂ ಪ್ರತ್ಯೇಕತಾವಾದಿಗಳ ಗುಂಡಿಗೆ ಬಲಿಯಾದರು. ಅವರ ಗೌರವಾರ್ಥವಾಗಿ ಮುಚ್ಚಿದ್ದ ಅಷ್ಟೂ ಅಂಗಡಿ ಮುಂಗಟ್ಟುಗಳನ್ನೂ ಒಂದು ಕಡೆಯಿಂದ ಬಲಾತ್ಕಾರವಾಗಿ ಬಾಗಿಲು ತೆಗೆಯುವಂತೆ ಮಾಡಿದ ಪ್ರತ್ಯೇಕತಾವಾದಿಗಳು ಸಂತೋಷ ಆಚರಿಸಿದರು.
1990ರ ಜನವರಿ 4ರಂದು ಸ್ಥಳೀಯ ಉರ್ದು ಪತ್ರಿಕೆ ‘ಅಫ್ತಾಬ್’ನಲ್ಲಿ ಹಿಜ್ಬುಲ್ ಮುಜಾಹಿದೀನ್ (Hijbul Mujahideen) ಸಂಘಟನೆ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿತು. ಹಿಂದೂಗಳು ಕಾಶ್ಮೀರ ಬಿಟ್ಟು ತೊಲಗಬೇಕು ಹಾಗೂ ಕಾಶ್ಮೀರ ಪಾಕಿಸ್ತಾನಕ್ಕೆ ಸೇರ್ಪಡೆಯಾಗಬೇಕು ಎಂಬ ಆಗ್ರಹಿಸಿತ್ತು. ಅದರ ಬೆನ್ನಲ್ಲೇ ಕಣಿವೆಯಲ್ಲಿ ಬಂದೂಕಿನ ಘರ್ಜನೆ ಹಾಗೂ ಪ್ರತ್ಯೇಕತಾವಾದಿಗಳ ತುಚ್ಛ ಘೋಷಣೆಗಳು ಒಟ್ಟೊಟ್ಟಿಗೇ ಮೊಳಗತೊಡಗಿದವು. ‘ಗಡಿ ದಾಟುತ್ತೇವೆ. ಕಲಾಷ್ನಿಕೋವ್ ತರುತ್ತೇವೆ ’ ಅಂತ ಒಂದು ಧ್ವನಿವರ್ಧಕ ಅರಚಿಕೊಂಡರೆ, ‘ಪಂಡಿತರೇ ನಿಮ್ಮ ಹೆಂಡಂದಿರನ್ನು ಇಲ್ಲಿಯೇ ಬಿಟ್ಟು ಹೊರಹೋಗಿ, ನಾವು ಜತೆ ಸೇರಿ ಪಾಕಿಸ್ತಾನ (Pakisthan) ನಿರ್ಮಿಸುತ್ತೇವೆ ’ ಎಂಬ ಇನ್ನೊಂದು ಘೋಷಣೆ ಪ್ರತ್ಯೇಕತಾವಾದಿಗಳು ಮನುಷ್ಯರಾಗಿ ಉಳಿದಿಲ್ಲ ಎಂಬುದನ್ನು ಸಾರಿ ಹೇಳುತ್ತಿತ್ತು. ಹಿಂದುಗಳು ಮನೆಯಿಂದಲೇ ಹೊರಬೀಳದ ಪರಿಸ್ಥಿತಿ ನಿರ್ಮಾಣವಾಗಿಹೋಯಿತು. ಜೀವ ಕೈಯಲ್ಲಿ ಹಿಡಿದು ಯಾವಾಗಲೋ ಒಮ್ಮೆ ಹೊರಗೆ ಕಾಲಿಟ್ಟ ಹಿಂದುಗಳಿಗೆ ಕಂಡದ್ದು , ‘ಅಲ್ಲಾನನ್ನು ಒಪ್ಪಿಕೊಳ್ಳಿ; ಇಲ್ಲವೇ ಕಾಶ್ಮೀರ ಬಿಟ್ಟು ತೊಲಗಿ’ ಎಂದು ಜಿಹಾದಿಗಳು ಮನೆ ಬಾಗಿಲಿಗೆ ಅಂಟಿಸಿಹೋಗಿದ್ದ ಭಿತ್ತಿಪತ್ರ. ಕಾಶ್ಮೀರದ ಬೀದಿಗಳಲ್ಲಿ ಒಂದೊಂದಾಗಿ ಹಿಂದುಗಳ ಹೆಣ ಬೀಳತೊಡಗಿತು.
ನಿಶ್ಚಿತಾರ್ಥ ಆಯ್ತು ಅಂದುಕೊಂಡ್ರೆ ತಂದೆ ತಾಯಿ ವಿವಾಹ ವಾರ್ಷಿಕೋತ್ಸವ ಎಂದ ನಟ ಕರಣ್ ಕುಂದ್ರಾ!
ಟಿಕಾ ಹತ್ಯೆ ನಡೆದ ಕೆಲ ತಿಂಗಳುಗಳಲ್ಲೇ 300 ಹಿಂದುಗಳನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಶ್ರೀನಗರ ಹೈಕೋರ್ಟ್ ನ್ಯಾಯಮೂರ್ತಿ ಕೆ. ಎನ್. ಗಂಜು ಅವರೇ ಹತ್ಯೆಯಾಗಿ ಹೋದರು ಎಂದರೆ ಇನ್ನು ಸಾಮಾನ್ಯರ ಕತೆಯೇನಾಗಿರಬಹುದು? ೮೦ರ ವೃದ್ಧ ಸರ್ವಾನಂದ ಸ್ವಾಮಿ ಹಾಗೂ ಅವರ ಮಗನನ್ನು ಅಪಹರಿಸಿದ ಜಿಹಾದಿಗಳು ಇಬ್ಬರ ಕಣ್ಣುಗಳನ್ನು ಕಿತ್ತು ಹಿಂಸಾವಿನೋದ ಅನುಭವಿಸಿ ಸಾಯಿಸಿದರು. ಶ್ರೀನಗರದ ಸೌರಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಯಿತು. ಅತ್ಯಾಚಾರಕ್ಕೊಳಗಾದ ಇನ್ನೊಬ್ಬ ಮಹಿಳೆಯ ದೇಹವನ್ನು ಶಾಮಿಲ್‌ನಲ್ಲಿಟ್ಟು ತುಂಡು ತುಂಡು ಮಾಡಲಾಗಿತ್ತು. ಇಷ್ಟೆಲ್ಲ ನಡೆಯುತ್ತಿದ್ದರೆ ಫರೂಕ್ ಅಬ್ದುಲ್ಲಾ ಸರಕಾರ ಇದ್ದೂ ಇಲ್ಲದ ಹಾಗಿತ್ತು.
ತಾಯ್ನಾಡನ್ನು ತೊರೆಯುವ ಯಾತನಾಮಯ ನಿರ್ಧಾರ ತೆಗೆದುಕೊಳ್ಳದೇ ಕಾಶ್ಮೀರಿ ಪಂಡಿತರಿಗೆ ಬೇರೆ ದಾರಿಯೇ ಇರಲಿಲ್ಲ. ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಒಂದಿಡೀ ಸಮುದಾಯವೇ ಕಾಶ್ಮೀರ ತೊರೆದು ಜಮ್ಮು ಹಾಗೂ ದಿಲ್ಲಿಯಲ್ಲಿ ಬಂದು ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿತು. ಅಲ್ಲಿಗೆ ೫ ಸಾವಿರ ವರ್ಷಗಳ ನಾಗರಿಕತೆಯೊಂದು ಸುದ್ದಿಯಾಗದಂತೆ ಸತ್ತುಹೋಯಿತು. ಹಿಂದು ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಾಗುವ ಯಾವುದೇ ದೌರ್ಜನ್ಯಕ್ಕೂ ‘ಮಾರಣಹೋಮ’, ‘ಜನಾಂಗೀಯ ದಮನ’ ಎಂಬ ಪದಪುಂಜಗಳನ್ನು ಪ್ರಯೋಗಿಸುವ ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳ ಕಣ್ಣಿಗೆ ಕಾಶ್ಮೀರಿ ಪಂಡಿತರ ಗೋಳು ಕೊನೆಪಕ್ಷ ನಿರಾಶ್ರಿತರ ಸಮಸ್ಯೆಯಾಗಿಯೂ ಕಾಣಲಿಲ್ಲ.
ಸುಮಾರು ಏಳು ಲಕ್ಷ (ಕೆಲವರು ಎಂಟು ಲಕ್ಷವೆಂದು ಹೇಳುತ್ತಾರೆ) ಕಾಶ್ಮೀರಿ ಪಂಡಿತರು ಬಲವಂತವಾಗಿ ಹಾಗೂ ಅತಿ ಕ್ರೂರವಾಗಿ ತಮ್ಮ ತಾಯ್ನಾಡಿನ ಬೇರುಗಳಿಂದ ಬೇರ್ಪಟ್ಟು ಜಮ್ಮು ಹಾಗೂ ದಿಲ್ಲಿಯಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ೧೯೯೦ರಿಂದಲೇ ಕಾಶ್ಮೀರಿ ಪಂಡಿತರ ಒಕ್ಕಲೆಬ್ಬಿಸುವ ಕಾರ್ಯ ಆರಂಭವಾಯಿತು. ೨೦೨೨ಕ್ಕೆ ಪಂಡಿತರ ಸಮುದಾಯದ ಕರುಣಾಜನಕ ಕತೆಗೆ 23 ವರ್ಷಗಳು ತುಂಬಿಹೋದವು.
ದಿ ಕಾಶ್ಮೀರ್ ಫೈಲ್ಸ್ (The Kashmir Files) ಫಿಲಂನಲ್ಲಿ ತೋರಿಸಲಾಗಿರುವ ಒಟ್ಟೂ ಕತೆ ಕಾಲ್ಪನಿಕವಲ್ಲ; ಅದರಲ್ಲಿರುವ ಒಂದೊಂದು ದೃಶ್ಯವೂ ಅಕ್ಷರಶಃ ಸತ್ಯ. ಇದನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಸ್ವತಃ ಕಾಶ್ಮೀರಿ ಪಂಡಿತರಾದ ಅನುಪಮ್ ಖೆರ್ (Anupam Kher) ಅವರ ಅಭಿನಯ ಕಣ್ಣೀರು ತರಿಸುವಂತಿದೆ. ಹೀಗಾಗಿ ಅದೀಗ ಬುದ್ಧಿಜೀವಿಗಳಿಗೆ ಎಲ್ಲೆಲ್ಲೋ ಮೆಣಸು ತಿಕ್ಕಿದಂತೆ ಉರಿಯತೊಡಗಿದೆ. ಇದುವರೆಗೂ ಭಾರತೀಯರನ್ನು ಕಾಶ್ಮೀರಿ ಪಂಡಿತರ ದುರವಸ್ಥೆ ಬಗ್ಗೆ ಕತ್ತಲಿನಲ್ಲಿ ಇಟ್ಟಿದ್ದವರು ಈಗ ಮಾತಾಡಲೇಬೇಕಾಗಿದೆ. ಈ ಫಿಲಂಗಾಗಿ ಯಾರೂ ದೊಡ್ಡ ದೊಡ್ಡ ಪ್ರಮೋಷನ್ ಇವೆಂಟ್‌ಗಳನ್ನು ಮಾಡಲಿಲ್ಲ. ಶಾರುಕ್, ಸಲ್ಮಾನ್ (Sharukh Khan, Salman Khan) ಥರದ ಸ್ಟಾರ್‌ಗಳು ಮಾತನಾಡಲಿಲ್ಲ. ಬಾಲಿವುಡ್ ಮೌನವಾಗಿತ್ತು. ಆದರೆ ಸತ್ಯ ಎಂದಾದರೂ ಹೊರ ಬರಲೇಬೇಕು ತಾನೆ? ಹೀಗಾಗಿ ಅದು ಥಿಯೇಟರುಗಳಲ್ಲಿ ದೊಡ್ಡ ಸದ್ದು ಮಾಡುತ್ತ ತುಂಬಿದ ಬಾಕ್ಸಾಫೀಸ್‌ನಲ್ಲಿ ಓಡುತ್ತಿದೆ. ನಟನೆ, ನಿರ್ದೇಶನ, ಮೇಕಿಂಗ್ ಎಲ್ಲವೂ ಅಚ್ಚುಕಟ್ಟಾಗಿವೆ.
ತಪ್ಪದೇ ನೋಡಿ. ಸ್ವತಂತ್ರ ಭಾರತದಲ್ಲಿ ನಡೆದ ಹಿಂದೂಗಳ ಮಾರಕ ಹತ್ಯಾಕಾಂಡದ ಕಥನ ನೋಡಿ ನಿಮ್ಮ ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳಿ.
The Kashmir Files ಯಾವ ಕಾರಣಕ್ಕೆ ನೀವು ಕಾಶ್ಮೀರಿ ಪಂಡಿತರ ವಲಸೆ ಕುರಿತ ಸಿನಿಮಾ ನೋಡಬೇಕು?