- Home
- Entertainment
- Cine World
- ನಿಶ್ಚಿತಾರ್ಥ ಆಯ್ತು ಅಂದುಕೊಂಡ್ರೆ ತಂದೆ ತಾಯಿ ವಿವಾಹ ವಾರ್ಷಿಕೋತ್ಸವ ಎಂದ ನಟ ಕರಣ್ ಕುಂದ್ರಾ!
ನಿಶ್ಚಿತಾರ್ಥ ಆಯ್ತು ಅಂದುಕೊಂಡ್ರೆ ತಂದೆ ತಾಯಿ ವಿವಾಹ ವಾರ್ಷಿಕೋತ್ಸವ ಎಂದ ನಟ ಕರಣ್ ಕುಂದ್ರಾ!
ನಿಶ್ಚಿತಾರ್ಥದ ಮಾತುಕತೆ ಬಗ್ಗೆ ಸುಳಿವು ಕೊಟ್ಟ #TejRan. ತಿಲಕ ಧರಿಸಿ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡ ನಟ.....

ಬಿಗ್ ಬಾಸ್ ಸೀಸನ್ 15ರ ಮೂಲಕ ನಟ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಇಡೀ ಬಿ-ಟೌನ್‌ನಲ್ಲಿ #TejRan ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.
ಇಬ್ಬರು ತುಂಬಾನೇ ಪ್ರೀತಿಸುತ್ತಿದ್ದು ಬಿಬಿ ಮನೆಯಿಂದ ಹೊರ ಬರುತ್ತಿದ್ದಂತೆ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದರು. ಇದು ರೊಮ್ಯಾಂಟಿಕ್ ಸಾಂಗ್ ಎನ್ನಲಾಗಿದೆ.
ತೇಜಸ್ವಿ ನಾಗಿಣಿ 15 ಧಾರಾವಾಹಿ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದರು. ಹೀಗಾಗಿ ಪದೇ ಪದೇ ಕರಣ್ ಸೆಟ್‌ಗೆ ಆಗಮಿಸುತ್ತಿದ್ದು ಧಾರಾವಾಹಿಯಲ್ಲಿ ಸಣ್ಣ ಅವಕಾಶ ಪಡೆದುಕೊಂಡರು.
ಕೆಲವು ದಿನಗಳ ಹಿಂದೆ ಕರಣ್ ಕುಂದ್ರಾ ಮತ್ತು ಪೋಷಕರು ತೇಜಸ್ವಿ ಮನೆಯಿಂದ ಹೊರ ಬರುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.
ಫ್ಲೋರಲ್ ಶರ್ಟ್‌ನಲ್ಲಿ ಕಾಣಿಸಿಕೊಂಡಿರುವ ಕರಣ್ ಹಣೆಗೆ ತಿಲಕ ಇಟ್ಟುಕೊಂಡಿದ್ದಾರೆ.'ಒಳ್ಳೆಯದಾಗಲಿ ಶುಭಾಶಯಗಳು' ಎಂದು ಪ್ಯಾಪರಾಜಿಗಳು ಹೇಳಿದ್ದಾರೆ.
ಆಗ ಕರಣ್ ಕುಂದ್ರಾ ಇಲ್ಲ ನಿಶ್ಚಿತಾರ್ಥ ಅಲ್ಲ ಇಂದು ನಮ್ಮ ಅಪ್ಪ ಅಮ್ಮ ನಿವಾಹ ವಾರ್ಷಿಕೋತ್ಸವ ಅದಿಕ್ಕೆ ಬಂದಿದ್ದೀವಿ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.