ಎಲ್ಲಿ ಹೋಗಲಿ, ಯಾರನ್ನು ತಬ್ಬಿಕೊಳ್ಳಲಿ; ಅಗಲಿದ ತಾಯಿಗೆ ರಾಖಿ ಸಾವಂತ್ ಭಾವುಕ ಪತ್ರ
ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಸಾವಂತ್ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಭಾವುಕ ಪೋಸ್ಟ್....
ಹಿಂದಿ ಚಿತ್ರರಂಗದಲ್ಲಿ ದಿನಕ್ಕೊಂದು ವಿಚಾರಕ್ಕೆ ಹೆಡ್‌ಲೈನ್ಸ್ ಕ್ರಿಯೇಟ್ ಮಾಡುತ್ತಿದ್ದ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಜನವರಿ 28ರಂದು ತಾಯಿ ಜಯಾ ಭೇದಾ ಅವರನ್ನು ಕಳೆದುಕೊಂಡಿದ್ದಾರೆ. ಎರಡು ಮೂರು ವರ್ಷಗಳಿಂದ ರಾಖಿ ತಾಯಿ ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಕೊನೆ ಹಂತದ ಚಿಕಿತ್ಸೆ ಪಡೆಯುತ್ತಿದ್ದರು. ಬಹುತೇಕ ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನ ರಾಖಿ ಆಪ್ತ ಸ್ನೇಹಿತೆ ಮಾಧ್ಯಮಗಳಿಗೆ ಜಯಾ ಇನ್ನಿಲ್ಲ ಅನ್ನೋ ವಿಚಾರವನ್ನು ತಿಳಿಸಿದ್ದಾರೆ. ತಾಯಿ ಅಗಲಿದ ಬೆನ್ನಲ್ಲೇ ರಾಖಿ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.
ಜಯಾ ಸಾವಂತ್ ಕೊನೆ ಕ್ಷಣದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ ರಾಖಿ. 'ಜೀಸಸ್ ನನ್ನ ತಾಯಿಗೆ ಕಷ್ಟ ಕೊಡಬೇಡ. ಆಕೆಯನ್ನು ಉಳಿಸು. ನಿನ್ನನ್ನು ಪ್ರಾರ್ಥಿಸುತ್ತೇನೆ. ತಾಯಿ ಬಿಟ್ಟು ನನಗೆ ಯಾರೂ ಇಲ್ಲ' ಎಂದು ರಾಖಿ ಅಳುತ್ತಿದ್ದಾರೆ. ಮಾಧ್ಯಮಗಳ ಎದುರು ಬಂದಾಗ ನನ್ನ ತಾಯಿ ನನ್ನು ಬಿಟ್ಟು ಹೋಗಿದ್ದಾರೆ. ಆದಿಲ್ ಎಲ್ಲಿದ್ದಾರೆ? ಅವರನ್ನು ಕರೆಯಿರಿ ಎಂದಿದ್ದಾರೆ. ಈ ಸಮಯದಲ್ಲಿ ಸಹೋದರ ಬಿಗ್ ಬ್ರದರ್ ರೀತಿ ಸಪೋರ್ಟ್‌ಗೆ ನಿಂತ ಸಲ್ಮಾನ್ ಖಾನ್‌ನ ನೆನಪಿಸಿಕೊಂಡಿದ್ದಾರೆ.
Rakhi Sawant Mother Passes Away: ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಕ್ಯಾನ್ಸರ್‌ನಿಂದ ನಿಧನ
'ಬಿಗಿಯಾಗಿ ಹಿಡಿದುಕೊಂಡಿದ್ದ ನನ್ನ ಕೈಯನ್ನು ಅಮ್ಮ ಇಂದು ಶಾಶ್ವತವಾಗಿ ಬಿಟ್ಟಿದ್ದಾರೆ. ಜೀವನದಲ್ಲಿ ನಾನು ಕಳೆದುಕೊಳ್ಳಲು ಏನೂ ಉಳಿದಿಲ್ಲ. ಐ ಲವ್ ಯು ಮಾ. ನೀನು ಇಲ್ಲದೆ ಜೀವನ ಹೇಗೆ ನಡೆಸಲಿ ನಿನ್ನ ಬಿಟ್ಟು ನನಗೆ ಏನೂ ಇಲ್ಲ. ಈಗ ನನ್ನ ಮಾತುಗಳನ್ನು ಯಾರು ಕೇಳಿಸಿಕೊಳ್ಳುತ್ತಾರೆ, ಯಾರು ನನ್ನನ್ನು ತಬ್ಬಿಕೊಳ್ಳುತ್ತಾರೆ. ಈಗ ನಾನು ಎನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಎಲ್ಲಿ ಹೋಗಬೇಕು. ಮಿಸ್ ಯು ಅಮ್ಮ' ಎಂದು ರಾಖಿ ಬರೆದುಕೊಂಡಿದ್ದಾರೆ.
ರಾಖಿ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿ-ಟೌನ್ ನಟ-ನಟಿಯರು ಪ್ರಾರ್ಥಿಸಿದ್ದಾರೆ. 'ನಿಮ್ಮ ನೋವು ನನಗೆ ಅರ್ಥವಾಗುತ್ತಿದೆ ಏಕೆಂದರೆ ನಾನು ಕೂಡ ನನ್ನ ತಾಯಿ, ತಂದೆ ಮತ್ತು ಸಹೋದರ ಕಳೆದುಕೊಂಡಿರುವೆ. ಅವರ ಆತ್ಮ ಮತ್ತು ಪ್ರೀತಿ ಸಹಾ ನಮ್ಮ ಜೊತೆಗಿರುತ್ತದೆ' ಎಂದು ಜಾಕಿ ಶ್ರಾಫ್ ಕಾಮೆಂಟ್ ಮಾಡಿದ್ದಾರೆ. 'ಪ್ರೀತಿಯಾ ರಾಖಿ ಈ ಸಮಯದಲ್ಲಿ ನೀನು ಧೈರ್ಯ ತೆಗೆದುಕೊಳ್ಳಬೇಕು. ಅಂಟಿ ಸದಾ ಸುಂದರವಾಗಿ ಡ್ರೆಸ್ ಮಾಡಿಕೊಂಡು ನಗುತ್ತಿರುವುದು ನಾನು ನೋಡಿರುವೆ. ಈ ಪರಿಸ್ಥಿತಿಯಲ್ಲಿ ಆಕೆಯನ್ನು ನೋಡುವುದಕ್ಕೆ ಬೇಸರವಾಗುತ್ತದೆ ಮನಸ್ಸು ಮುರಿದಿದೆ. ಆಕೆ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಪ್ರಾರ್ಥಿಸುವೆ. ನಿನಗೆ ದೇವರು ಶಕ್ತಿ ಕೊಡಲಿ' ಎಂದು ನಟಿ ನಿಶಾ ಕಾಮೆಂಟ್ ಮಾಡಿದ್ದಾರೆ. 'ಈ ನೋಡು ತಡೆದುಕೊಳ್ಳಲು ದೇವರು ನಿನಗೆ ಶಕ್ತಿ ಕೊಡಲಿ ಎಂದು ಬೇಡುವೆ' ಎಂದು ಸಂಜಯ್ ದತ್ ಪತ್ನಿ ಮಾನ್ಯತಾ ಕಾಮೆಂಟ್ ಮಾಡಿದ್ದಾರೆ.
ಮುನ್ಸಿಪಲ್ ಕ್ರಿಶ್ಚಿಯನ್ ಸ್ಮಶಾನ, ಓಶಿವಾರಾ, ಅಂಧೇರಿ, ಪಶ್ಚಿಮದಲ್ಲಿ ಜಯಾ ಸಾವಂತ್ ಅಂತ್ಯಕ್ರಿಯೆ ನಡೆಯಲಿದೆ.