Asianet Suvarna News Asianet Suvarna News

Rakhi Sawant Mother Passes Away: ನಟಿ ರಾಖಿ ಸಾವಂತ್‌ ತಾಯಿ ಜಯಾ ಭೇದಾ ಕ್ಯಾನ್ಸರ್‌ನಿಂದ ನಿಧನ

ಹಿಂದಿ ಕಿರುತೆರೆ ಹಾಗೂ ಬಾಲಿವುಡ್ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ ಅವರು ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 
 

Actress Rakhi Sawant Mother Jaya Bheda Passes Away gvd
Author
First Published Jan 28, 2023, 11:35 PM IST

ಮುಂಬೈ (ಜ.28): ಹಿಂದಿ ಕಿರುತೆರೆ ಹಾಗೂ ಬಾಲಿವುಡ್ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ ಅವರು ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಯಾ ಭೇದಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 

ಅವರಿಗೆ ಸುದೀರ್ಘವಾಗಿ ಚಿಕಿತ್ಸೆ ನೀಡಿದರೂ ಕ್ಯಾನ್ಸರ್‌ ದೇಹದ ಹಲವು ಭಾಗಗಳಿಗೆ ವಿಸ್ತರಿಸಿತ್ತು. ಹಾಗಾಗಿ, ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿತ್ತು. ರಾಖಿ ಸಾವಂತ್‌ ತಾಯಿಯ ನಿಧನಕ್ಕೆ ಬಾಲಿವುಡ್‌ನ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ. 'ನನ್ನ ತಾಯಿ ಅಗಲಿದ್ದಾರೆ' ಎಂಬುದಾಗಿ ರಾಖಿ ಸಾವಂತ್‌ ದುಃಖ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ, ರಾಖಿ ಸಾವಂತ್‌ ಅವರು ತಾಯಿ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತ, ನೀವೂ ತಾಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. 

ಅಮ್ಮನಿಗೆ ಕ್ಯಾನ್ಸರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ; ಕಣ್ಣೀರಿಟ್ಟ ರಾಖಿ ಸಾವಂತ್

ಜಯ ಭೇದಾ ಅವರ ಕಾಯಿಲೆ ಕೊನೆ ಹಂತದಲ್ಲಿತ್ತು ಶ್ವಾಸಕೋಶಕ್ಕೂ ಹರಡಿತು ಎಂದು ವೈದ್ಯರು ಹೇಳಿದ್ದರು. ರಾಖಿ ಸಾವಂತ್ ಅವರ ತಾಯಿ ಏಪ್ರಿಲ್ 2021ರಲ್ಲೇ ಕ್ಯಾನ್ಸರ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇನ್ನು ತಾಯಿಯ ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದ ಬಾಲಿವುಡ್ ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೊಹೈಲ್ ಖಾನ್​ಗೆ ರಾಕಿ ಈ ಹಿಂದೆ ಕೃತಜ್ಞತೆ ಸಲ್ಲಿಸಿದ್ದರು.

Follow Us:
Download App:
  • android
  • ios