Bigg Boss Kannada 10: ಡಾ.ಬ್ರೋ ಸೇರಿ ದೊಡ್ಮನೆಗೆ ಇವ್ರೆಲ್ಲಾ ಹೋದ್ರೆ ಮಜಾ ಬರುತ್ತೆ ಅಂತಿದ್ದಾರೆ ಕನ್ನಡಿಗರು
ಕನ್ನಡ ಬಿಗ್‌ಬಾಸ್ ಸೀಸನ್ 10 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆಯಂತೆ. ಈ ಮಧ್ಯೆ ಮನೆಯೊಳಗೆ ಯಾರೆಲ್ಲಾ ಇರ್ತಾರೆ ಅನ್ನೋ ಕುತೂಹಲ ಸಹ ಹೆಚ್ಚಿದೆ. ಇದೆಲ್ಲದರ ಮಧ್ಯೆ ಜನರು ದೊಡ್ಡ ಮನೆಯೊಳಗೆ ಇಂಥವರು ಕೆಲವ್ರು ಇದ್ರೆ ಮಜಾ ಬರುತ್ತೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ.

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್‌ಗೆ ತಯಾರಿ ಶುರುವಾಗಿದ್ದು, ಅತೀ ಶೀಘ್ರದಲ್ಲೇ ಆರಂಭವಾಗಲಿದೆ. ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದ ಮೊಟ್ಟ ಮೊದಲ ಪ್ರೋಮೋ ಸಹ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈ ಮಧ್ಯೆ ಮನೆಯೊಳಗೆ ಯಾರೆಲ್ಲಾ ಇರ್ತಾರೆ ಅನ್ನೋ ಕುತೂಹಲ ಸಹ ಹೆಚ್ಚಿದೆ. ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆಯಂತೆ. ಇದೆಲ್ಲದರ ಮಧ್ಯೆ ಜನರು ದೊಡ್ಡ ಮನೆಯೊಳಗೆ ಇಂಥವರು ಕೆಲವ್ರು ಇದ್ರೆ ಮಜಾ ಬರುತ್ತೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ.
ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್. ಹೀಗಾಗಿ ಎಲ್ಲರೂ ಈ ಶೋ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಈ ಬಾರಿ ಕೂಡ ಮೊದಲು ಓಟಿಟಿ ಸೀಸನ್ ಬಳಿಕವೇ 10 ನೇ ಸೀಸನ್ ಆರಂಭಿಸಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ. ಆ ಪ್ರಕಾರ ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
Bigg Boss Season 10 ಆರಂಭ, ಈ ಮೂರು ಫೇಮಸ್ ಸೀರಿಯಲ್ ಮುಕ್ತಾಯ
ಬಿಗ್‌ಬಾಸ್ ಓಟಿಟಿ ಎರಡನೇ ಸೀಸನ್‌ಗೆ ತಯಾರಿ ನಡೆಸುತ್ತಿರುವ ವಾಹಿನಿ ಮತ್ತು ಶೋ ತಂಡ ಸದ್ಯ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆಯಂತೆ. ಅದರ ಜೊತೆಗೆ ಬಿಗ್‌ಬಾಸ್ ಸೀಸನ್ 10 ಕ್ಕೂ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಶೋ ಫ್ಯಾನ್ಸ್ ಅಪ್ಡೇಟ್ ಹಾಕಿಕೊಂಡಿದ್ದಾರೆ. ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಶೋಗೆ ದೊಡ್ಡ ಸೆಟ್ ಹಾಕಲಾಗಿದೆ. ಇವೆಲ್ಲದರ ಮಧ್ಯೆ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ವಾಹಿನಿಯ ನಿರ್ಧಾರ ಏನೇ ಇರಲಿ, ಆದ್ರೆ ಈ ಬಾರಿ ದೊಡ್ಮನೆಯಲ್ಲಿ ಇಂಥಿಂಥವರು ಇದ್ರೆ ಚೆನ್ನಾಗಿರುತ್ತಪ್ಪಾ ಅನ್ನೋ ಲಿಸ್ಟ್‌ನ್ನೇ ರೆಡಿ ಮಾಡಿದ್ದಾರೆ. ಇದರಲ್ಲಿ ಟ್ರಾವೆಲ್ ವ್ಲಾಗರ್ ಡಾ.ಬ್ರೋ, ಶಾಸಕ ಪ್ರದೀಪ್ ಈಶ್ವರ್, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್, ಕಾಫಿ ನಾಡು ಚಂದ್ರು ಹೆಸರು ಕೇಳಿ ಬರ್ತಿದೆ.
ಡಾ.ಬ್ರೋ
ಸಾಮಾನ್ಯವಾಗಿ ವರ್ಷದಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದರು ಬಿಗ್‌ಬಾಸ್‌ಗೆ ಹೋಗುವುದು ರೂಢಿ. ಈ ಬಾರಿ ಕನ್ನಡಿಗರ ನೆಚ್ಚಿನ ಯೂಟ್ಯೂಬರ್, ನಮಸ್ಕಾರ ದೇವ್ರು ಎಂದು ಹೇಳುತ್ತಲೇ ವಿಡಿಯೋ ಮಾಡೋ ಟ್ರಾವೆಲ್ ವ್ಲಾಗರ್ ಡಾ.ಬ್ರೋ ಹೆಚ್ಚು ಸುದ್ದಿಯಲ್ಲಿದ್ದಾರೆ. ದೇಶ-ವಿದೇಶ ಸುತ್ತಿ ಅಲ್ಲಿನ ಮಾಹಿತಿ ನೀಡುವ ಡಾ.ಬ್ರೋಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಶೋಗೂ ಅವರನ್ನು ಕರೆಸಬೇಕು ಎಂಬ ವಿಚಾರ ಕೇಳಿ ಬಂದಿತ್ತು. ಅವರೇನು ಸಾಧನೆ ಮಾಡಿದ್ದಾರೆ. ನಿಮ್ಮ ತಾಯಿ, ಅಜ್ಜಿಗೆ ಡಾ.ಬ್ರೋ ಗೊತ್ತಾ ಅನ್ನೋ ವಿಚಾರ ಟ್ರೋಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಡಾ,ಬ್ರೋ ಪರವಾಗಿ ಚರ್ಚೆ ನಡೆದಿತ್ತು. ಹೀಗಾಗಿ ಕನ್ನಡಿಗರ ನೆಚ್ಚಿನ ಡಾ.ಬ್ರೋ ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋ ಸಾಧ್ಯತೆ ಹೆಚ್ಚಿದೆ.
ಚಿರತೆಗೇ ಹುಟ್ಟುಹಬ್ಬ ಮಾಡಿದ ಡಾ.ಬ್ರೋ: ಅಬ್ಬಬ್ಬೋ ಅಂತಿದ್ದಾರೆ ಫ್ಯಾನ್ಸ್!
ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹಲವಾರು ವಿಚಾರಗಳಿಂದ ಚರ್ಚೆಯಾಗುತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಮಾತನಾಡುವಾಗ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಹಾಗೂ ಜೆಡಿಎಸ್ ನವರು ಒಂದು ಸಾವಿಗೆ ಇಷ್ಟೆಲ್ಲಾ ಧರಣಿ ಮಾಡ್ತಿದಾರಲ್ಲಾ, ಕೋವಿಡ್ ವೇಳೆ ಇಷ್ಟೆಲ್ಲಾ ಸಾವಾದಾಗ ನ್ಯಾಯ ಕೊಡಿ ಎಂದು ಕೇಳೋಕೆ ಆಗಲಿಲ್ಲವಾ ಎಂದು ಕೇಳಿದರು. ಈ ವೇಳೆ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು 'ಸಾವಾಗ್ಲಿಲ್ಲ ಮಾರೆ ಪ್ರದೀಪ್, ಕೂತ್ಕೊ ಪ್ರದೀಪ್...' ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ ಹೇಳಿದ್ದರು. ಇಂಥಾ ಘಟನೆಗಳಿಂದ ಪ್ರದೀಪ್ ಈಶ್ವರ್ ಹೆಚ್ಚು ಸುದ್ದಿಯಲ್ಲಿದ್ದಾರೆ.
ಇನ್ನು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್, ಕಾಫಿ ನಾಡು ಚಂದ್ರು ಸಹ ಶೋನಲ್ಲಿ ಇರ್ಬೇಕು ಅಂತ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಇನ್ನು ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್ ಅವರು ಸ್ಪರ್ಧಿಗಳಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಮಾತು ಸಹ ಕೇಳಿ ಬರ್ತಿದೆ.