ಧೂಮ್‌ ಚಿತ್ರದಲ್ಲಿ ಹೃತಿಕ್‌ ರೋಷನ್‌ ಜೊತೆ ಲಿಪ್‌ಲಾಕ್‌ ಮಾಡಿದ್ದ ನಟಿ ಐಶ್ವರ್ಯ ರೈ ಅವರು ಕಾನೂನು ಸಮರವನ್ನೂ ನಡೆಸಬೇಕಾಗಿತ್ತು. ಈ ಕುರಿತು ಅವರು ಹೇಳಿದ್ದೇನು? 

ಚಿತ್ರಗಳಲ್ಲಿ ಲಿಪ್‌ಲಾಕ್‌ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಇದೇ ಲಿಪ್‌ಲಾಕ್‌ ನಟಿ ಐಶ್ವರ್ಯ ರೈ ಅವರಿಗೆ ಸಂಕಷ್ಟವನ್ನೂ ತಂದಿಟ್ಟ ಕುತೂಹಲದ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಅಂದಹಾಗೆ ಇದು ನಡೆದಿದ್ದು ಧೂಮ್‌-2 ಚಿತ್ರದ ಸಂದರ್ಭದಲ್ಲಿ 2006ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಕುರಿತಾಗಿ ಇಂಟರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆದಿತ್ಯ ಚೋಪ್ರಾ (Aditya Chopra) ನಿರ್ಮಾಣದ ಈ ಚಿತ್ರವು ಬ್ಲಾಕ್‌ಬಸ್ಟರ್‌ ಎಂದು ಸಾಬೀತಾಗಿತ್ತು. 42 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಈ ಚಿತ್ರ 15೦ ಕೋಟಿಗೂ ಹೆಚ್ಚು ಗಳಿಸಿ ಸುದ್ದಿ ಮಾಡಿತ್ತು. ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಮುಖ್ಯ ಭೂಮಿಕೆಯಲ್ಲಿದ್ದರೆ, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ ಮತ್ತು ಬಿಪಾಶಾ ಬಸು ಕೂಡ ನಟಿಸಿದ್ದಾರೆ.

ಇದೇ ಚಿತ್ರದ ಕುತೂಹಲದ ಮಾಹಿತಿ ಈಗ ವೈರಲ್‌ ಆಗುತ್ತಿದೆ. ಅದೇನೆಂದರೆ, ನಟಿ ಐಶ್ವರ್ಯ ಮತ್ತು ಹೃತಿಕ್‌ ರೋಷನ್‌ ಲಿಪ್‌ಲಾಕ್‌ ಮಾಡಿದ್ದ ಕಾರಣಕ್ಕೆ ಐಶ್ವರ್ಯ ರೈ ಅವರಿಗೆ ಲೀಗಲ್‌ ನೋಟಿಸ್‌ ಬಂದಿತ್ತಂತೆ! ಲಿಪ್ ಟು ಲಿಪ್ ಕಿಸ್ ಮಾಡುವ ದೃಶ್ಯ ನೋಡಿ ಅನೇಕರು ಐಶ್ವರ್ಯಾ ರೈ ಅವರನ್ನು ಟೀಕೆ ಮಾಡಿದ್ದರು. ಮಾತ್ರವಲ್ಲದೇ ಐಶ್ವರ್ಯ ರೈ ಅವರು ಕಾನೂನು ತೊಂದರೆಗೆ ಸಿಲುಕಿದ್ದರಂತೆ. ಮಾತ್ರವಲ್ಲದೇ ಈ ದೃಶ್ಯವನ್ನು ನೋಡಿ ಬಚ್ಚನ್ ಕುಟುಂಬವೂ ಐಶ್ವರ್ಯ ಅವರ ಮೇಲೆ ಕೋಪಗೊಂಡಿದ್ದುದಾಗಿ ವರದಿಯಾಗಿದೆ.

ಪಾಕಿಸ್ತಾನದಲ್ಲಿ ನಟಿ ಐಶ್ವರ್ಯ ರೈ! ಹಲ್​ಚಲ್​ ಸೃಷ್ಟಿಸಿದ ವೈರಲ್ ಫೋಟೋ

ಟೀಕೆಗಳನ್ನು ಎದುರಿಸುತ್ತಲೇ ನಟಿ ‘ಧೂಮ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಕಿಸ್ ಮಾಡುವಾಗ ನನಗೆ ಮುಜುಗರ ಎನಿಸುತ್ತಿತ್ತು ಎಂದು ಕೂಡ ಹೇಳಿದ್ದರು. ಆದರೆ ಇವರು ಕಾನೂನು ಸಮರವನ್ನೂ ಎದುರಿಸಬೇಕಾಗಿತ್ತು. ಅಷ್ಟಕ್ಕೂ ಇವರ ವಿರುದ್ಧ ದೂರು ದಾಖಲು ಮಾಡಿದವರು ಮತ್ತಾರೂ ಅಲ್ಲ, ಖುದ್ದು ಈಕೆಯ ಅಭಿಮಾನಿಗಳೇ. ಹೌದು. ಈ ಬಗ್ಗೆ ಖುದ್ದು ಐಶ್ವರ್ಯ ರೈ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ನಾನು ಧೂಮ್ ಸಿನಿಮಾದಲ್ಲಿ ನಾಯಕನ ಜೊತೆ ಲಿಪ್‌ಲಾಕ್‌ ಮಾಡಿದ್ದಕ್ಕೆ ಅನೇಕರು ಲೀಗಲ್‌ ನೋಟಿಸ್ ಕಳುಹಿಸಿದ್ದರು’ ಎಂದು ನಟಿ ಹೇಳಿದ್ದಾರೆ. ‘ನೀವು ಅನೇಕರಿಗೆ ಮಾದರಿ. ಹೀಗಿರುವಾಗ ಈ ರೀತಿಯ ದೃಶ್ಯವನ್ನು ಹೇಗೆ ಮಾಡುತ್ತೀರಿ’ ಎಂದು ನೋಟಿಸ್​ನಲ್ಲಿ ಪ್ರಶ್ನೆ ಮಾಡಲಾಗಿತ್ತು. 

ಲಿಪ್ ಟು ಲಿಪ್ ಕಿಸ್ ಮಾಡುವ ದೃಶ್ಯ ನೋಡಿ ಅನೇಕರು ಐಶ್ವರ್ಯಾ ರೈ ಅವರನ್ನು ಟೀಕೆ ಮಾಡಿದ್ದರು. ಅಷ್ಟಕ್ಕೂ ನನಗೆ ಇದು ಇಷ್ಟವಿರಲಿಲ್ಲ. ಪರದೆಯ ಮೇಲೆ ಕೆಲವು ಇಂಟಿಮೇಟ್‌ ಸೀನ್‌ಗಳನ್ನು ಮಾಡಲು ಕಂಫರ್ಟೇಬಲ್‌ ಅಲ್ಲದ ಕಾರಣದಿಂದ ಅನೇಕ ಹಾಲಿವುಡ್ ಸ್ಕ್ರಿಪ್ಟ್‌ಗಳನ್ನು ತಿರಸ್ಕರಿಸಿದ್ದೇನೆ ಕೂಡ. ಆದರೆ ಧೂಮ್‌-2 ಚಿತ್ರದಿಂದ ಅಭಿಮಾನಿಗಳು ತುಂಬಾ ನೊಂದುಕೊಂಡಿದ್ದರು. ನಾನು ಕೇವಲ ನಟಿ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಎರಡು ಗಂಟೆ ಮೂವತ್ತು ನಿಮಿಷದ ಸಿನಿಮಾದಲ್ಲಿ ಕೆಲವೇ ಸೆಕೆಂಡ್​ನ ದೃಶ್ಯಕ್ಕೆ ನನ್ನನ್ನು ಪ್ರಶ್ನೆ ಮಾಡಲಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ರೀತಿ ಕಿಸ್‌ ಮಾಡುವುದು ನನ್ನ ಫ್ಯಾನ್ಸ್‌ಗೆ ಇಷ್ಟವಾಗುವುದಿಲ್ಲ ಎನ್ನುವುದು ಅರಿವಾಗಿದೆ ಎಂದಿದ್ದಾರೆ.

ಪಕ್ಕದಲ್ಲೇ ಪತಿ ಇದ್ರೂ ಮಾಜಿ ಪ್ರೇಮಿ ಸಲ್ಮಾನ್​ ಹೆಸ್ರು ಕೇಳಿ ಐಶ್ವರ್ಯ ರೈ ಮುಖ ಹೀಗಾಗೋದಾ?