Asianet Suvarna News Asianet Suvarna News

ದುರಂತ ನಾಯಕಿ ಮಧುಬಾಲಾಳ ನೆನೆದು ಕಣ್ಣೀರಿಟ್ಟ ಪ್ರೇಮಿ ದಿಲೀಪ್​ ಕುಮಾರ್​

ದುರಂತ ನಾಯಕಿ ಎಂದೇ ಬಿಂಬಿತವಾಗಿರುವ ನಟಿ ಮಧುಬಾಲಾ ಅವರ ಪುಣ್ಯತಿಥಿ ಇವತ್ತು. ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಮಧುಬಾಲಾ ಅವರ ಕೊನೆಯ ದಿನಗಳನ್ನು ನೆನೆದು ತಮ್ಮ ಆತ್ಮಕಥೆಯಲ್ಲಿ ದಿಲೀಪ್​ ಕುಮಾರ್​ ಬರೆದದ್ದೇನು?
 

When a weak and ill Madhubala met Dilip Kumar one last time
Author
First Published Feb 23, 2023, 3:33 PM IST

ಬಾಲಿವುಡ್ ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ (Mdhubhala). ಭಾರತೀಯ ಚಿತ್ರರಂಗ ಕಂಡಂತಹ ಅತೀ ಸುಂದರ ನಟಿಯರಲ್ಲಿ ಒಬ್ಬರು ಈಕೆ. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ  ಮುಮ್ತಾಜ್ ಜಹಾನ್ ಬೇಗಂ ದೆಹೆಲ್ವಿ  ಅವರು ಮಧುಬಾಲಾ ಆಗಿ ಚಿತ್ರರಂಗದಲ್ಲಿ ನೆಲೆಯೂರಿದ್ದೇ ಕುತೂಹಲ ಕಥನ. ಆದರೆ ಇವರು ದುರಂತ ನಾಯಕಿಯಾದರು. 1940 ರ ದಶಕದ ಅಂತ್ಯ ಮತ್ತು 1960 ರ ದಶಕದ ಆರಂಭದ ನಡುವೆ ಭಾರತದ ಅತ್ಯಂತ ಜನಪ್ರಿಯ ಮತ್ತು ಉತ್ತಮ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಮಿಂಚಿದ್ದ ಮಧುಬಾಲಾ ಅವರು 36ನೇ ವಯಸ್ಸಿಗೇ ಇಹಲೋಹ ತ್ಯಜಿಸಿದರು.  60 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಹೃಯದ ಸಮಸ್ಯೆಯಿಂದ (Heart Problem) ಬಳಲಿ ಬಾರದ ಲೋಕಕ್ಕೆ ಪಯಣಿಸಿದರು.  

ನೀಲ್ ಕಮಾಲ್‌ನಿಂದ ಬಾದಲ್‌, ಮೊಘಲ್-ಎ-ಆಜಮ್‌ವರೆಗಿನ ಚಿತ್ರಗಳಲ್ಲಿನ ನಟನೆಯಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರೋ ಮಧುಬಾಲಾ ತಮ್ಮ ಕಾಲಘಟ್ಟಕ್ಕಿಂತಲೂ ಮುಂದಿದ್ದರು, ಅವರ ಉಡುಗೆ ತೊಡುಗೆಗಳ ಮೂಲಕ ಗಮನ ಸೆಳೆದಿದ್ದರು. ಇವರ ಸೌಂದರ್ಯಕ್ಕೆ ಮನಸೋತವರು ಈಕೆಯನ್ನು ಬಾಲಿವುಡ್​​ನ ಮರ್ಲಿನ್ ಮನ್ರೋ ಎನ್ನುತ್ತಿದ್ದರು. 1942 ರಲ್ಲಿ ಬಸಂತ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ,  ಬರ್ಸಾತ್ ಕಿ ರಾತ್, ಕಾಲಾ ಪಾನಿ, ಹೌರಾ ಬ್ರಿಡ್ಜ್, ಚಲ್ತಿ ಕಾ ನಾಮ್ ಗಾಡಿ, ಶರಾಬಿ (Sharabi), ಮತ್ತು ಇತರ ಚಿತ್ರಗಳಲ್ಲಿನ ನಟನಾ ಕೌಶಲ್ಯದೊಂದಿಗೆ ಅವರು ಅಂತರಾಷ್ಟ್ರೀಯ ಖ್ಯಾತಿಗೆ ಏರಿದರು.

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
 
1933ರಲ್ಲಿ ಜನಿಸಿ 1969ರ ಫೆ.23ರಂದು ನಿಧನರಾದ ಮಧುಬಾಲಾ ಅವರ 54ನೇ ಪುಣ್ಯತಿಥಿ ಇವತ್ತು. ಪ್ರೇಮಿಗಳ ದಿನವಾದ ಫೆ.14ರಂದು ಇವರು ಜನಿಸಿದರೂ ಇವರ ನಿಜ ಜೀವನದ ಪ್ರೇಮ ಕಥೆ ಮಾತ್ರ ದುಃಖಭರಿತವಾದದ್ದು. ನಟ ದಿಲೀಪ್ ಕುಮಾರ್ ಅವರೊಂದಿಗಿನ ಅವರ ಸಂಬಂಧವು ಆಗ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ತರಾನಾ ಚಿತ್ರದ ನಂತರ ಈ ಇಬ್ಬರು ಎರಡು ವರ್ಷಗಳ ಕಾಲ ಪ್ರೀತಿಸಿದ್ದರು.ಆದರೆ ಕೊನೆಗೆ ಮಧುಬಾಲಾ ಹಿನ್ನೆಲೆ ಗಾಯಕ ಮತ್ತು ನಟ ಕಿಶೋರ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದರು. ಅವರ ಪುಣ್ಯತಿಥಿಯ ಈ ದಿನದಂದು ದಿಲೀಪ್​ ಕುಮಾರ್​ ನಟಿ ಮಧುಬಾಲಾ ಅವರ ನೆನಪು ಮಾಡಿಕೊಂಡಿರುವ ಬಗ್ಗೆ ಇಲ್ಲಿ ವಿವರಿಸಲಾಗಿದೆ.  ದಿಲೀಪ್ ಕುಮಾರ್ ಅವರ ಆತ್ಮಚರಿತ್ರೆ ( autobiography) ದಿಲೀಪ್ ಕುಮಾರ್: ದಿ ಸಬ್‌ಸ್ಟೆನ್ಸ್ ಅಂಡ್ ದಿ ಶಾಡೋದಲ್ಲಿ (Dilip Kumar: The Substance and the Shadow. ) ಏನು ಬರೆದಿದ್ದಾರೆ ಎಂಬುದನ್ನು ನಾವು ನೋಡೋಣ.  

1954ರಲ್ಲಿ, ಮಧುಬಾಲಾ ಅವರು ಮದ್ರಾಸ್‌ನಲ್ಲಿ ಬಹುತ್ ದಿನ್ ಹೂವೆ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಅವರ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ನಂತರ ಸುಮಾರು ಒಂಬತ್ತು ವರ್ಷಗಳ ಕಾಲ ಅವರು ಹಾಸಿಗೆ ಹಿಡಿದರು. 36 ನೇ ಹುಟ್ಟುಹಬ್ಬದ ಆಚರಣೆಯ ಕೆಲವೇ ದಿನಗಳ ಬಳಿಕ ಅವರು ನಿಧನರಾದರು. ಈ ಸಂದರ್ಭದಲ್ಲಿ, ದಿಲೀಪ್​ ಕುಮಾರ್​ ಅವರಿಗೆ  ನಟಿ ಸೈರಾ ಬಾನು ಅವರ ಜೊತೆ ಮದುವೆಯಾಗಿತ್ತು. ಇದು ಅವರ ಎರಡನೆಯ ಮದುವೆಯಾಗಿತ್ತು. ಮಧುಬಾಲಾ ಅವರು ಹಾಸಿಗೆ ಹಿಡಿದಾಗ ತಾವು ಆಕೆಯನ್ನು ಭೇಟಿ ಮಾಡಿರುವ ಕುರಿತು ದಿಲೀಪ್​ ಕುಮಾರ್​ ಇದರಲ್ಲಿ ಬರೆದುಕೊಂಡಿದ್ದಾರೆ.

ಗಂಡ ಬದುಕಿರುವಾಗ್ಲೇ ಇದೆಂಥ ವೇಷನಮ್ಮಾ? ಭಾರಿ ಟ್ರೋಲ್​ ಆಗ್ತಿರೋ Kiara Advani
 
'ಸೈರಾ ಬಾನು ಅವರ ಜೊತೆಗೆ  ಮದುವೆಯ ನಂತರ  ನಾವು ಮದ್ರಾಸಿನಲ್ಲಿ (Madras) ಇದ್ದೆವು. ಮಧುಬಾಲಾ  ನನ್ನನ್ನು ತುರ್ತಾಗಿ ನೋಡಬೇಕೆಂದು ಕೇಳಿಕೊಂಡಳು.  ನಾವು ಬಾಂಬೆಗೆ ಹಿಂತಿರುಗಿ ಈ ಬಗ್ಗೆ ಸೈರಾಗೆ ವಿಷಯ ತಿಳಿಸಿದೆ. ಆಕೆ ಕೂಡ ದುಃಖಿತಳಾದಳು.  ನಾನು ಮಧುವಿನ ಮನೆಗೆ ಹೋದೆ. ಆಕೆ ತುಂಬಾ ದುರ್ಬಲಳಾಗಿದ್ದಳು. ಅವಳ ಮುಖ ಬಾಡಿ ಹೋಗಿತ್ತು.  ಆದರೆ ನನ್ನನ್ನು ನೋಡಿದ ತಕ್ಷಣ ಅವಳ ಮುಖದಲ್ಲಿ ಭವ್ಯವಾದ, ನಿಷ್ಕಪಟವಾದ ನಗು ಹೊರಹೊಮ್ಮಿತು.  ಅವಳು ನನ್ನನ್ನು ನೋಡಿ ಸಂತೋಷಪಟ್ಟಳು. ನನ್ನ ರಾಜಕುಮಾರನಿಗೆ ಅವನ ರಾಜಕುಮಾರಿ ಸಿಕ್ಕಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ (Happy) ಎಂದಳು. ನಾವಿಬ್ಬರೂ ತುಂಬಾ ಚರ್ಚಿಸೆದೆವು.  ಅದೇ ನಾನು ಅವಳನ್ನು ಕೊನೆಯ ಬಾರಿ ನೋಡಿದ್ದು' ಎಂದು ದಿಲೀಪ್​ ಕುಮಾರ್​ ಬರೆದುಕೊಂಡಿದ್ದಾರೆ.

 1951 ರಲ್ಲಿ ತಮ್ಮ ಚಿತ್ರದ ತರಾನಾ ಸೆಟ್‌ನಲ್ಲಿ ಮೊದಲ ಬಾರಿಗೆ ಮಧುಬಾಲಾ, ದಿಲೀಪ್​ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಮೊಳಗಿತ್ತು. ಅವರು ನಿಶ್ಚಿತಾರ್ಥನೂ (Engagement) ಮಾಡಿಕೊಂಡಿದ್ದರು. ಆದರೆ ಈ ಮದುವೆಗೆ ಮಧುಬಾಲಾ ಅವರ ತಂದೆ ಒಪ್ಪಿಗೆ ನೀಡಿರಲಿಲ್ಲ. ಅನಿವಾರ್ಯವಾಗಿ ಇಬ್ಬರೂ ಬೇರೆಬೇರೆಯಾದರು. 

Follow Us:
Download App:
  • android
  • ios