Manitnam And Suhasini: ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾಗಲು ನಟಿ ಸುಹಾಸಿನಿ ಒಂದು ಷರತ್ತು ಹಾಕಿದ್ದರು. ಆ ಷರತ್ತಿನ ಮೇಲೆಯೇ ಸುಹಾಸಿನಿ ಮತ್ತು ಮಣಿರತ್ನಂ ಅವರ ಮದುವೆ ನಡೆದಿದೆ. ಆ ಷರತ್ತು ಏನು ಎಂಬುದನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು: ಭಾರತೀಯ ಸಿನಿಮಾ ಇತಿಹಾಸದ ಯಶಸ್ವಿ ನಿರ್ದೇಶಕ ಅಂದ್ರೆ ಮಣಿರತ್ನಂ. ಇವರ ಸಿನಿಮಾಗಳಲ್ಲಿ ಕೆಲಸ ಮಾಡಲು ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಕಾಯುತ್ತಿರುತ್ತಾರೆ. ಮಣಿರತ್ನಂ ಸಿನಿಮಾ ರಿಲೀಸ್ ಅಂದ್ರೆ ಸ್ಟಾರ್ ಹೀರೋಗಳು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿಕೊಳ್ಳುತ್ತಾರೆ. 2ನೇ ಜೂನ್ 1956ರಲ್ಲಿ ಜನಿಸಿದ ಮಣಿರತ್ನಂ ಭಾರತೀಯ ಸಿನಿಮಾ ಲೋಕಕ್ಕೆ ಹಲವು ವಿಶೇಷ ಸಿನಿಮಾಗಳನ್ನು ನೀಡಿದ್ದಾರೆ. ಯಶಸ್ವಿ ನಿರ್ದೇಶಕರಾಗಿರುವ ಮಣಿರತ್ನಂ ಅವರನ್ನು ಮದುವೆಯಾಗಲು ನಟಿ ಸುಹಾಸಿನಿ ಮದುವೆಯಾಗಲು ಷರತ್ತು ಹಾಕಿದ್ದರು. ಆ ಷರತ್ತಿನ ಮೇಲೆ ಸುಹಾಸಿನಿ-ಮಣಿರತ್ನಂ ಮದುವೆಯಾದರು. ಆ ಷರತ್ತು ಏನು ಗೊತ್ತಾ?
ತಂದೆ ಗೋಪಾಲರತ್ನಂ ಸಿನಿಮಾ ವಿತರಕರಾಗಿದ್ದರಿಂದ ಮಣಿರತ್ನಂ ಬಣ್ಣದ ಲೋಕದತ್ತ ಆಕರ್ಷಿತರಾಗಿದ್ದರು. ಮಣಿರತ್ನಂ ಹಿರಿಯ ಸೋದರ ಕೃಷ್ಣಮೂರ್ತಿ ಸಹ ಸಿನಿಮಾ ನಿರ್ದೇಶಕ, ಕಿರಿಯ ಸೋದರ ವೆಂಕಟೇಶ್ವರಂ ಸಿನಿಮಾ ಅಂಗಳದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಪತ್ನಿ ಸುಹಾಸಿನಿ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ಸುಪ್ರಭಾತ, ಮುತ್ತಿನ ಹಾರ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ, ತಮಿಳು, ತೆಲಗು, ಮಲಯಾಳಂ ಭಾಷೆಯಲ್ಲಿ ಸುಹಾಸಿನಿ ನಟಿಸಿದ್ದಾರೆ. ಇಂದಿಗೂ ಸುಹಾಸಿನಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.
ಮದುವೆಯಾಗುವ ಸಂದರ್ಭದಲ್ಲಿ ಸುಹಾಸಿನಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದರು. ಆದ್ರೆ ಮಣಿರತ್ನಂ ಸಾಮಾನ್ಯ ನಿರ್ದೇಶಕರಾಗಿದ್ದರು. ಮಣಿರತ್ನಂ ಮೊದಲ ಬಾರಿಗೆ ಲವ್ ಪ್ರಪೋಸ್ ಮಾಡಿದಾಗ ಸುಹಾಸಿನಿ ತಿರಸ್ಕರಿಸಿದ್ದರಂತೆ. ನಾನು ಸಾಮಾನ್ಯ ಕುಟುಂಬದ ಸಾಂಪ್ರದಾಯಿಕ ಹುಡುಗಿಯಾಗಿದ್ದು, ಪ್ರೀತಿಯಲ್ಲಿ ನಂಬಿಕೆ ಇಲ್ಲ ಎಂದಿದ್ದರಂತೆ. ಇದಾದ ಬಳಿಕ 1988ರಲ್ಲಿ ಸುಹಾಸಿನಿ ಮತ್ತು ಮಣಿರತ್ನಂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಸುಹಾಸಿನಿ ಮತ್ತು ಮಣಿರತ್ನಂ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇಂದಿಗೂ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸುಹಾಸಿನಿ ಹಲವು ಸಂದರ್ಶನಗಳಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ವೃತ್ತಿ ಮತ್ತು ಮನೆಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ನಗುತ್ತಾ ಉತ್ತರಿಸಿದ ಸುಹಾಸಿನಿ, ನನ್ನ ಪತಿ ತುಂಬಾ ಸಿಂಪಲ್ ಆಗಿರೋದು ನನಗೆ ಲಾಭವಾಗಿದೆ. ನಮ್ಮಿಬ್ಬರ ಆಲೋಚನೆಗಳು ಒಂದೇ ಆಗಿವೆ ಎಂದು ಹೇಳಿದ್ದರು.
ಇದನ್ನೂ ಓದಿ: ನೂರೆಂಟು ವಿಘ್ನಗಳನ್ನು ದಾಟಿ ತೆರೆಗೆ ಬಂದಿತ್ತು ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ'..!
ಸುಹಾಸಿನಿ ಷರತ್ತು
ನಾನು ಕೆಲಸದಲ್ಲಿರುವಾಗ ಮಣಿರತ್ನಂ ನನಗೆ ಡಿಸ್ಟರ್ಬ್ ಮಾಡಲ್ಲ. ಮನೆಯಲ್ಲಿ ಏನೇ ಸಮಸ್ಯೆಗಳಾದರೂ ಅವರೇ ಪರಿಹರಿಸಿಕೊಳ್ಳುತ್ತಾರೆ. ಒಂದು ವೇಳೆ ಮಣಿರತ್ನಂ ಸಿನಿಮಾ ಕೆಲಸದಲ್ಲಿದ್ದಾಗ ಮನೆಯಲ್ಲಿ ಸಮಸ್ಯೆಗಳಾದ್ರೆ, ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ ಎಂಬ ನಂಬಿಕೆ ನನಗಿಲ್ಲ. ಕೆಲಸದ ಬಗ್ಗೆ ತುಂಬಾ ಶ್ರದ್ಧೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ನನ್ನಿಂದ ಏನೇ ತಪ್ಪುಗಳಾದ್ರೆಮ ನೇರವಾಗಿಯೇ ಮಣಿ ಜೊತೆ ಮಾತನಾಡುತ್ತೇನೆ. ಆದ್ರೆ ಯಾವ ಕಾರಣಕ್ಕೂ ಮಣಿ ಕೋಪ ಮಾಡಿಕೊಳ್ಳಲ್ಲ. ಮದುವೆಗೂ ಮುಂಚೆ ಪ್ರೀತಿ ಅಂತೆಲ್ಲಾ ಸುತ್ತಾಡಲ್ಲ. ನೇರವಾಗಿ ಮದುವೆ ಆಗೋಣ ಎಂದು ಷರತ್ತು ಹಾಕಿದ್ದೆ. ಹಾಗೆಯೇ ನಮ್ಮ ಮದುವೆಯೂ ನಡೆಯಿತು ಎಂದು ಸುಹಾಸಿನಿ ಹೇಳಿಕೊಂಡಿದ್ದಾರೆ.
ಮಣಿರತ್ನಂ ಅವರು ಕ್ರಾನಿಕ್ ರೊಮ್ಯಾಂಟಿಕ್ (ದೀರ್ಫಕಾಲದವರೆಗೂ ಪ್ರೀತಿಸುವಂತಹ ವ್ಯಕ್ತಿತ್ವ) ಪತಿ. ನಾನು ಸಂಗೀತವನ್ನು ಕೇಳುತ್ತೇನೆ ಮತ್ತು ಅದನ್ನು ಪ್ರೀತಿಸುತ್ತೇನೆ. ಆದ್ರೆ ಮಣಿ ನಾನು ಅತಿಯಾಗಿ ಪ್ರೀತಿಸುವ ವ್ಯಕ್ತಿ ಎಂದು ಸುಹಾಸಿನಿ ಹೇಳಿಕೊಂಡಿದ್ದಾರೆ. ಮಣಿರತ್ನಂ ಮತ್ತು ಸುಹಾಸಿನಿ ದಂಪತಿಗೆ ನಂದನ್ ಹೆಸರಿನ ಮಗನಿದ್ದಾನೆ. ನಂದನ್ ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಹೊಂದಿದ್ದಾರೆ.
ಇದನ್ನೂ ಓದಿ: ಮದುವೆ ಒಳ್ಳೆಯದ್ದಾ, ಕೆಟ್ಟದ್ದಾ? ಸದ್ಗುರು ಒಳ್ಳೆಯವರಾ, ಕೆಟ್ಟವರಾ? ನಟಿ ಸುಹಾನಿಸಿ ಪ್ರಶ್ನೆಗೆ ಅವರು ಹೇಳಿದ್ದೇನು ಕೇಳಿ...
